2021ರ ಏರೋ ಇಂಡಿಯಾ ಎಲ್ಲಿ ನಡೆಯಲಿದೆ, ಬೆಂಗಳೂರಲ್ಲೇ ಇರುತ್ತಾ?
ಬೆಂಗಳೂರು, ಫೆಬ್ರವರಿ 25: ಯಲಹಂಕ ವಾಯುನೆಲೆಯಲ್ಲಿ 5 ದಿನಗಳ ಏರೋ ಇಂಡಿಯಾ ಶೋ ಸಿಹಿ-ಕಹಿ ನೆನಪುಗಳೊಂದಿದೆ ಅಂತ್ಯ ಕಂಡಿದೆ.
ಫೆ.20ರಿಂದ 24ರವರೆಗೆ ಏರೋ ಇಂಡಿಯಾ ಶೋ ನಡೆದಿದ್ದು, ಎರಡು ದುರ್ಘಟನೆಗಳಿಗೂ ಕೂಡ ಸಾಕ್ಷಿಯಾಯಿತು. ಇದೀಗ 2021ರ ಏರೋ ಇಂಡಿಯಾ ಎಲ್ಲಿ ನಡೆಯಲಿದೆ ಎನ್ನುವ ಅನುಮಾನ ಎಲ್ಲರಲ್ಲಿ ಮೂಡುವುದು ಸಹಜ.
ಆದರೆ ಎರಡು ವರ್ಷಗಳ ನಂತರ ನಡೆಯಲಿರುವ ಏರ್ ಶೋ ನ ನಿಗದಿ ಕುರಿತು ರಹಸ್ಯ ಕಾಯ್ದುಕೊಳ್ಳಲಾಗಿದೆ. ಈ ಬಾರಿಯ ಪ್ರದರ್ಶನವು ಗೋವಾ ಅಥವಾ ಲಖ್ನೌ ಗೆ ಸ್ಥಳಾಂತರ ಆಗಲಿದೆ ಎಂಬ ಸುದ್ದಿ ಇತ್ತಾದರೂ ಕರ್ನಾಟಕದ ಭಾರಿ ವಿರೋಧಕ್ಕೆ ಮಣಿದು ಇಲ್ಲಿಯೇ ಆಯೋಜನೆ ಮಾಡಲಾಗಿತ್ತು.

ಆದರೆ ಈ ಬಾರಿ ಹಿಂದಿನ ಸಂಪ್ರದಾಯ ಮುರಿಯಲಾಗಿದೆ. ಹೀಗಾಗಿ 2021ರ ವೈಮಾನಿಕ ಪ್ರದರ್ಶನ ಎಲ್ಲಿ ನಡೆಯಲಿದೆ ಎನ್ನುವ ಕುತೂಹಲ ಮೂಡಿದೆ.
ಮುಂದಿನ ಶೋ ಎಲ್ಲಿ ನಡೆಯಲಿದೆ ಎಂಬುದರ ಬಗ್ಗೆ ಸಂಘಟಕರಾಗಲಿ ಅಥವಾ ರಕ್ಷಣಾ ಸಚಿವರಾಗಲೀ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಲೋಕಸಭೆ ಚುನಾವಣೆಯ ಸನಿಹವಿರುವ ಕಾರಣ ರಾಜಕೀಯ, ಲಾಭ, ನಷ್ಟ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ 2021ರ ಶೋ ಎಲ್ಲಿ ನಡೆಯಲಿದೆ ಎನ್ನುವ ರಹಸ್ಯವನ್ನು ಬಿಟ್ಟುಕೊಡಲು ಯಾರೂ ತಯಾರಿಲ್ಲ.












Click it and Unblock the Notifications