ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಂದನ್ ನಿಲೇಕಣಿ 'ಬೆಂಗಳೂರು ಕನಸು' ಬಲು ಸೊಗಸು

By Srinath
|
Google Oneindia Kannada News

ಬೆಂಗಳೂರು, ಮಾರ್ಚ್ 25- ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಹಿತಿ ತಂತ್ರಜ್ಞಾನದ ಅಗ್ರಗಣ್ಯ ನಂದನ್ ನಿಲೇಕಣಿ ಅವರು ಕಣಕ್ಕಿಳಿಸಿದ್ದಾರೆ. ಆದರೆ ಈ ಬಾರಿಯ ಚುನಾವಣಾ ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಬಗ್ಗೆ ಒಲವು ಕಾಣುತ್ತಿಲ್ಲ. ಒಂದು ದಶಕದ ಕಾಲ ಕೇಂದ್ರ ಯುಪಿಎ ಮೈತ್ರಿ ಸರಕಾರವನ್ನು ಮುನ್ನಡೆಸಿದ ಕಾಂಗ್ರೆಸ್ಸಿಗೆ ಆಡಳಿತ-ವಿರೋಧಿ ಹಿತಶತ್ರುವಾಗಿ ಕಾಡತೊಡಗಿದೆ. ಇದೇ ವೇಳೆ, ವಿರೋಧಿ ಮೈತ್ರಿಕೂಟವಾದ ಎನ್ ಡಿಎ ದತ್ತ ಎಲ್ಲರ ಕಣ್ಣು ನೆಟ್ಟಿದೆ.

ಇಂತಹ 'ಅಹಿತಕರ ಸನ್ನಿವೇಶ'ದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹೊಸದಾಗಿ ಕಣಕ್ಕಿಳಿದಿರುವ ಯುವ ನೇತಾರರೊಬ್ಬರು ತಮ್ಮ ಕ್ಷೇತ್ರದಲ್ಲಿ ಭಾರಿ ಸಂಚಲವನ್ನುಂಟುಮಾಡಿದ್ದಾರೆ. ಅದೂ ಕ್ಷೇತ್ರದ 'ಹಳೆಯ ಹುಲಿ' ಎನಿಸಿರುವ 5 ಬಾರಿಯ ಸಂಸದ ಅನಂತಕುಮಾರ್ ಅವರು ವಿರುದ್ಧ ಅಖಾಡಕ್ಕಿಳಿದು ಭರ್ಜರಿ ಪೈಪೋಟಿ ನೀಡಲು ನಂದನ್ ನಿಲೇಕಣಿ ಸಕಲ ಸಿದ್ಧತೆ ನಡೆಸಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಈ ಸಂದರ್ಭದಲ್ಲಿ ಅನಂತಕುಮಾರ್ ವಿರುದ್ಧ ಕಣದಲ್ಲಿ ನೇರಾನೇರ ಸ್ಪರ್ಧೆಗಿಳಿದಿರುವ ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಅವರು ರಾಜಕೀಯ ಕನಸುಗಳು ಮತ್ತು ಅವರದೇ ಆದ 'ಬೆಂಗಳೂರು ಕನಸು'ಗಳ ಬಗ್ಗೆ ಒಂದು ನೋಟ ಇಲ್ಲಿದೆ: (ಅನಂತಕುಮಾರ್ ದುರ್ಬಲ ಪರಿಸ್ಥಿತಿಯಲ್ಲಿದ್ದಾರೆ- ನಿಲೇಕಣಿ)

ರಾಜಕೀಯ-ಕಾಂಗ್ರೆಸ್ ಬಗ್ಗೆ ನಿಲೇಕಣಿ ಪ್ರಾಮಾಣಿಕ ಅನಿಸಿಕೆ:

ರಾಜಕೀಯ-ಕಾಂಗ್ರೆಸ್ ಬಗ್ಗೆ ನಿಲೇಕಣಿ ಪ್ರಾಮಾಣಿಕ ಅನಿಸಿಕೆ:

ಸ್ವತಃ ಅವರೇ ರಾಜಕೀಯಕ್ಕೆ ಧುಮುಕುವುದರ ಮೂಲಕ ರಾಜಕೀಯ ಮತ್ತು ಕಾಂಗ್ರೆಸ್ ಬಗ್ಗೆ ತಮ್ಮ ಪ್ರಾಮಾಣಿಕ ಅನಿಸಿಕೆಯನ್ನು ಹೊರಹಾಕಿದ್ದಾರೆ ಅಂದರೆ ತಪ್ಪಿಲ್ಲ. ಮನಮೋಹನ ಸಿಂಗ್ ಅವರ ಸರಕಾರ ದೇಶದಲ್ಲಿ ಎಲ್ಲರಿಗೂ ಗುರುತಿನ ಸಂಖ್ಯೆ ನೀಡುವ ಮಹತ್ವದ ಜವಾಬ್ದಾರಿಯನ್ನು ನಿಲೇಕಣಿ ಹೆಗಲಿಗೆ ಹಾಕಿದ್ದರು. ಅದೊಂದು ಬೃಹತ್ಪ್ರಮಾಣದ ಕೆಲಸ. ಅದನ್ನು ತಮ್ಮ ಆಧೀನದಲ್ಲಿ ನಿಲೇಕಣಿ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಸುಪ್ರೀಂಕೋರ್ಟ್ ಗುರುತಿನ ಸಂಖ್ಯೆಯ ಆಧಾರ್ ಬಗ್ಗೆ ಅನುಮಾನ ವ್ಯಕ್ತಪಡಿಸಿದರಬಹುದ. ಆದರೆ ನಿಲೇಕಣಿ ಅವರ ಪ್ರಾಮಾಣಿಕ ಕೆಲಸವನ್ನು ಯಾರೂ ಅಲ್ಲಗಳೆಯಲಾರರು.

ನಿಲೇಕಣಿ ಅವಕಾಶವಾದಿಯಾಗಿಲ್ಲ

ನಿಲೇಕಣಿ ಅವಕಾಶವಾದಿಯಾಗಿಲ್ಲ

ಹೀಗೆ ತಮಗೆ ನೀಡಿದ ಜವಾಬ್ದಾರಿಯನ್ನು ನಿಭಾಯಿಸಿದ ನಿಲೇಕಣಿ ಅವರಿಗೆ ಬಹುಮೌಲ್ಯದ ರಿಟರ್ನ್ ಟಿಕೆಟ್ ಲಭ್ಯವಾಗಿರುವುದು ಅವರ ಕೆಲಸ ಶ್ರಮಕ್ಕೆ ತನ್ನ ಪ್ರತಿಫಲ ಎಂಬುದು ವೇದ್ಯವಾಗುತ್ತದೆ. ಅವಕಾಶವಾದಿಯಾಗಿ ಬೇರೆ ಗೆದ್ದೆತ್ತಿನ ಬಾಲ ಹಿಡಿಯದೆ ಕಾಂಗ್ರೆಸ್ ಪಕ್ಷಕ್ಕೆ ಅಂಕಿತವಾಗಿರುವುದು ನಿಲೇಕಣಿ ಅವರಲ್ಲಿರುವ ಪ್ರಾಮಾಣಿಕತೆಯನ್ನು ಎತ್ತಿತೋರಿಸುತ್ತದೆ.

ಎಲ್ಲರೂ national ಅನ್ನುತ್ತಿದ್ದರೆ ನಿಲೇಕಣಿಯದ್ದು local ಮಂತ್ರ:

ಎಲ್ಲರೂ national ಅನ್ನುತ್ತಿದ್ದರೆ ನಿಲೇಕಣಿಯದ್ದು local ಮಂತ್ರ:

ಹಾಗಂತ ಕಣಕ್ಕಿಳಿದಿರುವುದು ನಿಲೇಕಣಿ ಅವರ ಅಪ್ರಬುದ್ಧ ನಿರ್ಧಾರವಾ? ಅಂದರೆ ಹಾಗೇನೂ ಇಲ್ಲ. ಏನೇ ಮಾಡಿದರೂ ಅವರು ಯೋಜನಾಬದ್ಧವಾಗಿಯೇ ಮಾಡುವುದು. 2008ರಲ್ಲಿಯೇ ಬೆಂಗಳೂರು ಬಗ್ಗೆ ತಮ್ಮ ಸ್ಪಷ್ಟ ಅನಿಸಿಕೆಗಳನ್ನು Imagining India ಎಂಬ ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ.

ಅನಂತ ಆಡಳಿತ-ವಿರೋಧಿ ಅಲೆ ನಿಲೇಕಣಿ ಬಂಡವಾಳ

ಅನಂತ ಆಡಳಿತ-ವಿರೋಧಿ ಅಲೆ ನಿಲೇಕಣಿ ಬಂಡವಾಳ

ಬೆಂಗಳೂರು ಮಹಾನಗರದಲ್ಲಿ ನಾಗರಿಕ ಸೇವೆಗಳನ್ನು ಉತ್ತಮಗೊಳಿಸುವುದು ಹೇಗೆ ಎಂಬುದರ ಬಗ್ಗೆ ಬೆಳಕು ಚೆಲ್ಲಿದ್ದಾರೆ. ದೇಶಾದ್ಯಂತ ಬೀಸುತ್ತಿರುವ ಮೋದಿ ಹವಾ ಮತ್ತು ಆಡಳಿತ-ವಿರೋಧಿ ಅಲೆಗಳ ಬಗ್ಗೆ ತಲೆಕೆಡಿಸಿಕೊಳ್ಳದೆ/ ದಿಲ್ಲಿಯ ಬಗ್ಗೆ ಆಲೋಚಿಸದೆ ಅವರು ಬೆಂಗಳೂರಿನ ಬಗ್ಗೆಯಷ್ಟೇ ಕಾರ್ಯತತ್ಪರರಾಗಿದ್ದಾರೆ. ಜತೆಗೆ, ಅವರೇ ಹೇಳವಂತೆ ತಮ್ಮ ಕ್ಷೇತ್ರದಲ್ಲೇ ಇರುವ ಅನಂತಕುಮಾರ್ ಆಡಳಿತ-ವಿರೋಧಿ ಅಲೆಯನ್ನು ಗುರುತಿಸಿದ್ದು, ಅದನ್ನು ಬಂಡವಾಳ ಮಾಡಿಕೊಳ್ಳುವತ್ತ ದಾಪುಗಾಲು ಹಾಕಿದ್ದಾರೆ.

ಅಷ್ಟಕ್ಕೂ ನಿಲೇಕಣಿ Imagining India ಪುಸ್ತಕದಲ್ಲಿ ಏನು ಹೇಳಿದ್ದಾರೆ?

ಅಷ್ಟಕ್ಕೂ ನಿಲೇಕಣಿ Imagining India ಪುಸ್ತಕದಲ್ಲಿ ಏನು ಹೇಳಿದ್ದಾರೆ?

ನಿಲೇಕಣಿ ತಮ್ಮ ಪುಸ್ತಕದಲ್ಲಿ ಹೀಗೆ ಹೇಳಿದ್ದಾರೆ: "A few Indian states - such as Maharashtra, Karnataka and Tamil Nadu - are economically fairly advanced, and citizens do not have to resort to caste-based bergaining for public services. Elections here may still be fought along caste lines, but the primary aspirations of the people are more broad-based such as in their demands for better infrastructure and more effective schools. This is becoming especially evident with the rise of swing voters, who vote more on material development issues than along caste lines..." (p 20)

ಖಂಡಿತ ನಿಲೇಕಣಿ ಬೆಂಗಳೂರಿಗೆ/ರಾಜಕೀಯಕ್ಕೆ ಹೊಸಬರೇನೂ ಅಲ್ಲ:

ಖಂಡಿತ ನಿಲೇಕಣಿ ಬೆಂಗಳೂರಿಗೆ/ರಾಜಕೀಯಕ್ಕೆ ಹೊಸಬರೇನೂ ಅಲ್ಲ:

ನಿಲೇಕಣಿ ಅವರು ಇದ್ದಕ್ಕಿದ್ದಂತೆ ರಾಜಕೀಯ ಮಹತ್ವಾಕಾಂಕ್ಷೆಯೊ0ದಿಗೆ ಅವತರಿಸಿದವರಲ್ಲ. ದಿಢೀರ್ ಖ್ಯಾತಿ/ಯಶಸ್ಸಿನ ಬೆನ್ನು ಹತ್ತಿದವರಲ್ಲ ಅವರು. ದೀರ್ಘ ಕಾಲದಿಂದಲೂ ರಾಜಕೀಯ ಒಡನಾಟವಿಟ್ಟುಕೊಂಡಿರುವ ಅವರು ದೀರ್ಘಕಾಲಿಕ ರಾಜಕೀಯ ಆಸಕ್ತಿಗಳನ್ನು ಹೊಂದಿದ್ದಾರೆ. ಇನ್ನು 5-10 ವರ್ಷಗಳಲ್ಲಿ ತಮ್ಮ ಆಲೋಚನೆಗಳು ಕೈಗೂಡುತ್ತವೆ/ ಫಲ ನೀಡುತ್ತವೆ ಎಂಬ ಅಚಲ ನಂಬಿಕೆ ಅವರದಾಗಿದೆ.

ರಾಜಕೀಯಕ್ಕೆ ಬೇಕಾಗಿರುವುದೂ ಇಂತಹ ನಾಯಕರೇ.

ರಾಜಕೀಯಕ್ಕೆ ಬೇಕಾಗಿರುವುದೂ ಇಂತಹ ನಾಯಕರೇ.

ರಾಜಕೀಯಕ್ಕೆ ಬೇಕಾಗಿರುವುದೂ ಇಂತಹ ನಾಯಕರೇ. ವೈಯಕ್ತಿಕ ಹಿತಾಸಕ್ತಿಗಳಿಗಿಂತ ದೀರ್ಘಕಾಲಿನ ಫಲಗಳ ಬಗ್ಗೆ ಆಲೋಚಿಸುವವರು ಮುಖ್ಯವಾಗುತ್ತಾರೆ. ನಿಲೇಕಣಿ ಅವರ ಹಾದಿ ದುರ್ಗಮವೇ ಹೌದಾದರೂ ಮೇ 16ರಂದು ಅನಂತಕುಮಾರ್ ಎದುರು ಸೋತಿದ್ದೇ ಆದರೂ ಅವರ ಪ್ರಮಾಣಿಕತೆಯನ್ನು ಯಾರೂ ಅಲ್ಲಗಳೆಯಲಾರರು. ಶುಭವಾಗಲಿ, ನಂದನ್ ನಿಲೇಕಣಿಗೆ.

English summary
Lok Sabha Election 2014 - Bangalore South Congress candidate and UIDAI ex chairman Nandan Nilekani goes local at Bangalore. Also Nilekani did not make his formal entry into politics a precedent of opportunism, unlike many others at the moment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X