Actor Darshan: ಡೈಲಿ ಗುಂಡು, ತುಂಡಿನಲ್ಲೇ ಮುಳುಗುತ್ತಿದ್ದ ದರ್ಶನ್ ಈಗ ಜೈಲಿನಲ್ಲಿ ಏನ್ ಮಾಡ್ತಾನೆ?
Actor Darshan: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿ ಎ2 ನಟ ದರ್ಶನ್ ಸೇರಿದಂತೆ ನಾಲ್ವರು ಆರೋಪಿಗಳ ಪೊಲೀಸ್ ಕಸ್ಟಡಿ ಇಂದು (ಜೂನ್ 22) ಅಂತ್ಯವಾಗಿದ್ದು, ಅವರನ್ನು ಕೋರ್ಟ್‌ಗೆ ಕರೆದೊಯ್ಯಲಾಗಿತ್ತು. ಇನ್ನು ಈ ನಾಲ್ವರು ಆರೋಪಿಗಳಿಗೆ ಕೋರ್ಟ್ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ನೀಡಿದೆ. ಹಾಗಾದರೆ ಡೈಲಿ ಗುಂಡು, ತುಂಡಿನಲ್ಲೇ ಮುಳುಗಿರುತ್ತಿದ್ದ ನಟ ದರ್ಶನ್ ಈಗ ಜೈಲಿನಲ್ಲಿ ಏನು ಮಾಡುತ್ತಾನೆ ಎನ್ನುವ ಪ್ರಶ್ನೆಗಳು ಎದ್ದಿವೆ.
ಪವಿತ್ರಾ ಗೌಡಗೆ ಅಶ್ಲೀಲ ಸಂದೇಶದ ಕಳುಹಿಸಿದ್ದಾರೆ ಎನ್ನುವ ಕಾರಣಕಗಕೆ ಚಿತ್ರದುರ್ಗ ರೇಣುಕಾಸ್ವಾಮಿ ಅವರನ್ನು ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆದೊಯ್ದು ನಟ ದರ್ಶನ್ ಮತ್ತು ಗ್ಯಾಂಗ್ ಅವರನ್ನು ಭೀಕರವಾಗಿ ಕೊಲೆ ಮಾಡಿದೆ ಎನ್ನುವ ಆರೋಪದ ಮೇಲೆ ಈಗಾಗಲೇ ಪ್ರಕರಣದ ಎ1 ಆರೋಪಿಯಾದ ಪವಿತ್ರಾ ಗೌಡ ಜೈಲು ಪಾಲಾಗಿದ್ದು, ಇಂದು (ಜೂನ್ 22) ಕೋರ್ಟ್ ಆದೇಶದ ಮೇರೆಗೆ ನಟ ದರ್ಶನ್ ಸೇರಿ ನಾಲ್ವರು ಆರೋಪಿಗಳನ್ನು ಪರಪ್ಪನ ಅಗ್ರಹಾರಕ್ಕೆ ಕರೆದೊಯ್ಯಲಾಗಿದೆ.

ಇನ್ನು ಹಲವರು ಹೇಳುವ ಪ್ರಕಾರ ಸಂಜೆ ಆಯಿತೆಂದರೆ ಸಾಕು ನಟ ದರ್ಶನ್ ಗುಂಡು, ತುಂಡಿನಲ್ಲೇ ಮುಳುಗಿರುತ್ತಿದ್ದ. ಅಷ್ಟೇ ಅಲ್ಲದೆ, ಯಾರ ಜೊತೆಗಾದರೂ ಕಿರಿಕ್ ಮಾಡಿಕೊಳ್ಳುವುದನ್ನೇ ಅಭ್ಯಾಸ ಮಾಡಿಕೊಂಡಿದ್ದ. ದೇಹಕ್ಕೆ ಎಣ್ಣೆ ಸೇರ್ತು ಅಂದ್ರೆ ಸಾಕು ದರ್ಶನ್ ಮನುಷ್ಯನಾಗಿರುತ್ತಿರಲಿಲ್ಲ. ಬದಲಿಗೆ ತುಕಡಿ ಗ್ಯಾಂಗ್ ಕಟ್ಟಿಕೊಂಡು ಗಲಾಟೆ ಮಾಡುವುದೇ ಇವನ ಕೆಲಸವಾಗಿತ್ತು ಎನ್ನುವ ಗಂಭೀರ ಆರೋಪಗಳು ಈಗಾಗಲೇ ಕೇಳಿಬರುತ್ತಲೇ ಇವೆ.
ಇಂತಹ ಆರೋಪಗಳನ್ನು ಮಾಡುತ್ತಿರುವವರು ಒಬ್ಬರನ್ನ ಇಬ್ಬರಲ್ಲ, ಅವರನ್ನು ಹತ್ತಿರದಿಂದ ನೋಡಿರುವ ಪ್ರತಿಯೊಬ್ಬರ ಬಾಯಲ್ಲೂ ಬರುವುದೇ ದರ್ಶನ್ ಗುಂಡು, ತುಂಡಿನ ದಾಸನಾಗಿದ್ದ. ಅವನಿಗೆ ಕತ್ತಲಾಯಿತಂದರೆ ಸಾಕು ಕುಡಿದು ತೂರಾಡುವುದೇ ವೃತ್ತಿ ಮಾಡಿಕೊಂಡಿದ್ದ. ಅಪ್ಪನಿಗೆ ತಕ್ಕ ಮಗನಂತೆ ಬದುಕಲಿಲ್ಲ. ಅಪ್ಪ ನಟನೆಯಲ್ಲಿ ಖಳನಾಯಕನಾಗಿದ್ದು, ನಿಜ ಜೀವನದಲ್ಲಿ ನಾಯಕರಾಗಿದ್ದರು. ಇನ್ನು ಮಗ ದರ್ಶನ್ ಸಿನಿಮಾನಗಳಲ್ಲಿ ನಾಯಕನಾಗಿದ್ದರೆ, ನಿಜಜೀವನದಲ್ಲಿ ಮಾತ್ರ ಖಳನಾಯಕನಾಗಿದ್ದಾನೆ ಎಂದು ದೂರುವವರೇ ಹೆಚ್ಚಾಗಿದ್ದಾರೆ.
ಇದೀಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14 ದಿನಗಳ ಕಾಲ ನಟ ದರ್ಶನ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆದರೆ ಸದಾ ಗುಂಡು, ತುಂಡಿನಲ್ಲೇ ಮುಳುಗಿರುತ್ತಿದ್ದ ದರ್ಶನ್ ಈಗ ಜೈಲಿನಲ್ಲಿ ಏನು ಮಾಡುತ್ತಾರೆ ಎನ್ನುವ ಪ್ರಶ್ನೆಗಳು ಎದ್ದಿದೆ. ಯಾಕೆ ಈ ಪ್ರಶ್ನೆ ಎಂದರೆ ಸಾಮಾವ್ಯವಾಗಿ ಕುಡಿತದ ಚಟದಿಂದ ಹೊರಬರುವುದು ತುಂಬಾನೇ ಕಷ್ಟ. ಅದರಲ್ಲೂ ದಿನಗುಡುಕರು ಒಂದು ದಿನ ಎಣ್ಣೆ ಬಿಟ್ಟರೆ ಅವರ ಕೈ, ಕಾಲು ನಡುಗುತ್ತವೆ ಎನ್ನುವ ಮಾತುಗಳಿವೆ. ಹಾಗೆಯೇ ದರ್ಶನ್ ಪಾಡು ಇದೀಗ ಏನು ಎನ್ನುವ ಪ್ರಶ್ನೆಗಳು ಎದ್ದಿವೆ.
ಜೈಲಿನಲ್ಲಿ ಎಲ್ಲಾ ಕೈದಿಗಳಿಗೂ ಏನು ಊಟ ಕೊಡುತ್ತಾರೋ (ಮುದ್ದೆ, ಚಪಾತಿ, ಸಾಂಬಾರ್) ಅದನ್ನೇ ನಟ ದರ್ಶನ್‌ಗೂ ಕೊಡಲಾಗುತ್ತದೆ. ಇದಕ್ಕೆ ದರ್ಶನ್ ಹೇಗೆ ಹೊಂದಿಕೊಳ್ಳುತ್ತಾರೋ ಅಂತಲೂ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಪ್ರಶ್ನೆಗಳ ಸರಮಾಲೆಯೇ ಎದ್ದಿದೆ.












Click it and Unblock the Notifications