ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ದಕ್ಷಿಣ: ಸೋಷಿಯಲ್ ಮೀಡಿಯಾದಲ್ಲಿ ಏನಿದೆ ಹವಾ?

|
Google Oneindia Kannada News

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸ್ಪರ್ಧೆ ಬಹಳ ಆಸಕ್ತಿಕರವಾಗಿದೆ. ಮೇಲ್ನೋಟಕ್ಕೆ ಇಲ್ಲಿ ಬಿಜೆಪಿಯ ತೇಜಸ್ವಿ ಸೂರ್ಯ ಹಾಗೂ ಕಾಂಗ್ರೆಸ್ ನ ಬಿ.ಕೆ.ಹರಿಪ್ರಸಾದ್ ಮಧ್ಯೆ ಪೈಪೋಟಿ ನಡೆಯುವಂತೆ ಗೋಚರಿಸುತ್ತಿದೆ. ಇಪ್ಪತ್ತೆಂಟರ ಹರೆಯದ ತೇಜಸ್ವಿ ಸೂರ್ಯ ಒಂದು ಕಡೆ, ನಾನಾ ಹುದ್ದೆ- ಜವಾಬ್ದಾರಿಗಳನ್ನು ನಿರ್ವಹಿಸಿರುವ ಅರವತ್ನಾಲ್ಕು ವರ್ಷದ ಹರಿಪ್ರಸಾದ್ ಮತ್ತೊಂದು ಕಡೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಬೆಂಗಳೂರು ದಕ್ಷಿಣ ಕ್ಷೇತ್ರವು ಬಿಜೆಪಿ ಪಾಲಿಗೆ ಭದ್ರಕೋಟೆ. ಆದರೆ ಸದ್ಯಕ್ಕೆ ಅಲ್ಲಿ ಅಸಮಾಧಾನದ ಹೊಗೆ ಕಾಣಿಸಿಕೊಂಡಿದೆ. ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಬಿಜೆಪಿ ಟಿಕೆಟ್ ಸಿಗಬೇಕಿತ್ತು ಎಂದು ಮುನಿಸಿಕೊಂಡಿರುವ ಕೇಸರಿ ಪಡೆಯು ಸಿಟ್ಟು ತೋರಿಸಿಕೊಂಡಿದೆ. ಇಂಥ ಸನ್ನಿವೇಶದಲ್ಲಿ ಒನ್ ಇಂಡಿಯಾ ಕನ್ನಡದಿಂದ ಓದುಗರ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದೆ. ನಿಮಗೆ ಅನಿಸುವಂತೆ ಯಾರಿಲ್ಲಿ ಗೆಲ್ಲಬಹುದು ಎಂಬುದು ಪ್ರಶ್ನೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸ್ಥೂಲ ಪರಿಚಯಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸ್ಥೂಲ ಪರಿಚಯ

ಈಗಲೂ ಈ ಪ್ರಶ್ನೆಗೆ ನೀವು ಅಭಿಪ್ರಾಯ ತಿಳಿಸಬಹುದು. ಆದರೆ ಸದ್ಯಕ್ಕೆ ವ್ಯಕ್ತ ಆಗಿರುವ ಅಭಿಪ್ರಾಯವನ್ನು ನಿಮ್ಮ ಮುಂದೆ ಇರಿಸುವುದು ನಮ್ಮ ಉದ್ದೇಶ. ನಮ್ಮ ಫೇಸ್ ಬುಕ್ ಪುಟದಲ್ಲಿರುವ ಈ ಪೋಲ್ ಗೆ ನೀವೂ ಮತ ಹಾಕಿ. ನಿಮ್ಮ ಅಭಿಪ್ರಾಯವನ್ನೂ ತಿಳಿಸಿ. ಅದಕ್ಕೂ ಮುನ್ನ ಆಸಕ್ತಿಕರವಾದ, ಆಯ್ದ ಅಭಿಪ್ರಾಯಗಳನ್ನು ತಿಳಿದುಕೊಳ್ಳಿ.

What is the opinion of social media about Bangalore South constituency?

ಮಂದಗೆರೆ ರಾಮಕುಮಾರ ಕುಮಾರ್

ಏನೇ ಸಾಮಾಜಿಕ ಜಾಲತಾಣದಲ್ಲಿ ಫಲಿತಾಂಶ ಇದ್ದರೂ ಸ್ಥಳೀಯ ಬಿಜೆಪಿ ಮತ್ತು ಸಮುದಾಯದ ಮುಖಂಡರೇ ಸಮುದಾಯದ ವ್ಯಕ್ತಿ ಬೆಂಬಲ ಕೊಡಲ್ಲ ಅನಿಸುತ್ತೆ. ಶ್ರೀಯುತ ಅನಂತಕುಮಾರ ಅವರ ನಿಕಟವರ್ತಿಗಳು, ಅಭಿಮಾನಿಗಳು ಸೈಲೆಂಟ್ ಆದರೂ ಅಗಬಹುದು. ಇದು ನನ್ನ ವಯಕ್ತಿಕ ಅಭಿಪ್ರಾಯ. ಹರಿಪ್ರಸಾದ್ ಅವರಿಗೆ ಭಾರಿ ಅವಕಾಶವಿದೆ.

'ಆ ಮೂರು ಕ್ಷೇತ್ರ'ಗಳಲ್ಲಿ ಯಾರಿಗೆ ಮುನ್ನಡೆ ಸಿಗಬಹುದು, ಯಾರು ಫೇವರಿಟ್?'ಆ ಮೂರು ಕ್ಷೇತ್ರ'ಗಳಲ್ಲಿ ಯಾರಿಗೆ ಮುನ್ನಡೆ ಸಿಗಬಹುದು, ಯಾರು ಫೇವರಿಟ್?

ಸಹಸ್ರ ಸಾಗರ

ಐವತ್ತು-ಐವತ್ತು ಪರ್ಸೆಂಟ್ ಬಹಳ ಕಠಿಣವಾದ ಹೋರಾಟ ತೇಜಸ್ವಿ ಸೂರ್ಯ ಮತ್ತು ಬಿ.ಕೆ.ಹರಿಪ್ರಸಾದ್ ಮಧ್ಯೆ ಇದೆ.

ಸುಬ್ಬರಾಮಯ್ಯ ಪ್ರಭಾಕರ್

ಈ ಸಲ ತೇಜಸ್ವಿ ಅಧಿಕಾರಕ್ಕೆ ಬರಲಿ. ಯುವಕರು ಸಾರ್ವಜನಿಕ ಸೇವೆಗೆ ಬರಲು ಅಧಿಕಾರ ದೊರೆಯಲು ಅವಕಾಶ ನೀಡಬೇಕು.

ಯುವಕ ತೇಜಸ್ವಿ ಸೂರ್ಯ ಪರವಾಗಿ ಹೆಚ್ಚಿನ ಓದುಗರು ಮತ ಚಲಾಯಿಸಿದ್ದಾರೆ. ಆದರೆ ಬಿಜೆಪಿ ಭದ್ರಕೋಟೆಯಾದ ಇಲ್ಲಿ ಕಾಂಗ್ರೆಸ್ ಬಾವುಟ ಹಾರಿಸುವುದಕ್ಕೆ ಹರಿಪ್ರಸಾದ್ ಗೆ ಉತ್ತಮ ಅವಕಾಶವೂ ಇದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈ ತನಕ ನಾಲ್ಕು ಸಾವಿರದ ಆರು ನೂರು ವೋಟುಗಳ ಪೈಕಿ ಶೇಕಡಾ ಎಪ್ಪತ್ತೊಂಬತ್ತು ಮತಗಳು ತೇಜಸ್ವ ಪರ ಬಿದ್ದಿವೆ. ಅಭಿಪ್ರಾಯ ತಿಳಿಸಲು ಇನ್ನೂ ಆರು ದಿನ ಸಮಯ ಇದೆ. ಆಗ ಏನಾಗಿರಲಿದೆ ಎಂಬುದನ್ನು ಕಾದು ನೋಡೋಣ.

English summary
Oneindia Kannada inviting an opinion poll about Bangalore South Lok sabha constituency. Among major two contenders Tejaswi Surya from BJP and BK Hari Prasad from Congress, who has chances of winning more? Here is the result in the middle of the poll. 6 days to end this poll.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X