• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಮ್ಮ ಮೆಟ್ರೋ ಹಾಗೂ ನಿಮ್ಮ ನೆರೆ ಮನೆಯವರಿಗಿರುವ ಸಾಮ್ಯತೆ ಏನು?

|

ಬೆಂಗಳೂರು, ಸೆಪ್ಟೆಂಬರ್ 9: ನಮ್ಮ ಮೆಟ್ರೋ ಹಾಗೂ ನಿಮ್ಮ ನೆರೆ ಮನೆಯವರು ಇಬ್ಬರಿಗೂ ಇರುವ ಸಾಮ್ಯತೆ ಏನೆಂದರೆ ಇಬ್ಬರೂ ಕಾನೂನು ಬಾಹಿರವಾಗಿ ಎಲ್ಲೆಂದರಲ್ಲಿ ತ್ಯಾಜ್ಯವನ್ನು ಎಸೆಯುತ್ತಾರೆ.

ಕೇವಲ ಪ್ರಜ್ಞಾವಂತ ನಾಗರಿಕರು ಮಾತ್ರ ಎಲ್ಲೆಂದರಲ್ಲಿ , ರಸ್ತೆಯ ಉದ್ದಗಲಕ್ಕೂ ತ್ಯಾಜ್ಯವನ್ನು ಎಸೆಯುವುದಿಲ್ಲ, ಜೊತೆಗೆ ನಮ್ಮ ಮೆಟ್ರೋ ಸೇರಿದಂತೆ ಇತರೆ ಸರ್ಕಾರಿ ಸಂಸ್ಥೆಗಳು ಕೂಡ ಈ ಅಪವಾದದಿಂದ ಹೊರತಾಗಿಲ್ಲ.

ಈ ಕುರಿತು ಹಸಿರು ನ್ಯಾಯಾಧೀಕರಣದ ಮುಖ್ಯಸ್ಥರಾದ ನ್ಯಾ. ಸುಭಾಷ್ ಬಿ ಆಡಿಯವರು ಮಾಹಿತಿ ನೀಡಿದ್ದಾರೆ.

ಮೆಟ್ರೋ ಪ್ರಯಾಣಿಕರು ಸ್ಮಾರ್ಟ್ ಕಾರ್ಡ್ ರೀಚಾರ್ಜ್ ಹೀಗೂ ಮಾಡಬಹುದು

ನಮ್ಮ ಮೆಟ್ರೋವು ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಕೆಡವಿದಾಗ ಬಂದಂತಹ ತ್ಯಾಜ್ಯವನ್ನು ಕೂಡ ಕಾನೂನು ಬಾಹಿರವಾಗಿ ಎಸೆಯುತ್ತಿದ್ದಾರೆ.

ಇನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕೂಡ ರಾಕ್ ಕ್ರಿಸ್ಟಲ್ ಜೊತೆ ಈ ಸಿ ಹಾಗೂ ಡಿ ವೇಸ್ಟ್ ಸುರಿಯಲು ಒಪ್ಪಂದ ಮಾಡಿಕೊಂಡಿದ್ದರೂ ಕೂಡ ಗುತ್ತಿಗೆ ನೀಡಿರುವ ಕಂಪನಿಗೆ ಸಮರ್ಪಕವಾಗಿ ನೀಡುತ್ತಿಲ್ಲ.

2016ರ ಸಿ ಆಂಡ್ ಡಿ ವೇಸ್ಟ್ ಮ್ಯಾನೇಜ್‌ಮೆಂಟ್ ಕಾಯ್ದೆ ಪ್ರಕಾರ ನಡೆದುಕೊಳ್ಳುವಂತೆ ಹಸಿರು ನ್ಯಾಯಾಧೀಕರಣ ಸಾಕಷ್ಟು ಸರ್ಕಾರಿ ಸಂಸ್ಥೆಗಳಿಗೆ ತಿಳಿ ಹೇಳಿದ್ದರೂ ಕೂಡ ಯಾವುದೇ ಪ್ರಯೋಜನವಾಗುತ್ತಿಲ್ಲ.

ಈ ಕುರಿತು ಸೆಪ್ಟೆಂಬರ್ 6ರಂದು ಬಿಡಿಎ, ಬಿಐಎಎಲ್, ಕ್ರೆಡಾಯ್, ಎಸ್‌ಡಬ್ಲ್ಯೂಆರ್, ಬಿಬಿಎಂಪಿ, ಬಿಎಂಆರ್‌ಸಿಎಲ್ ಸೇರಿ ಚರ್ಚೆ ನಡೆಸಿವೆ.

ತ್ಯಾಜ್ಯ ಉತ್ಪಾದಕರು ತಾವು ಎಷ್ಟು ತ್ಯಾಜ್ಯವನ್ನು ಉತ್ಪಾದನೆ ಮಾಡುತ್ತೇವೆ ಎನ್ನುವುದರ ಕುರಿತು ವಿವರವನ್ನು ಸಲ್ಲಿಸಬೇಕಿದೆ. ಆದರೆ ಯಾವುದೇ ಸಂಸ್ಥೆಗಳು ಆ ಕೆಲಸ ಮಾಡಿಲ್ಲ. ಬಿಎಂಆರ್‌ಸಿಎಲ್ ಈ ಮೊದಲು ಸಿ ಹಾಗೂ ಡಿ ತ್ಯಾಜ್ಯವನ್ನು ಬಿಸಾಡುವುದು ಗುತ್ತಿಗೆದಾರರ ಕರ್ತವ್ಯ ಎಂದು ಕೈತೊಳೆದುಕೊಂಡಿತ್ತು.

ಯಾವ ಜಾಗದಲ್ಲಿ ತ್ಯಾಜ್ಯವನ್ನು ಎಸೆಯಬೇಕು ಎಂಬುದನ್ನು ಗುರುತಿಸುವುದು ಕೂಡ ಬಿಎಂಆರ್‌ಸಿಎಲ್ ಕರ್ತವ್ಯವಾಗಿದೆ.

ತ್ಯಾಜ್ಯ ನಿರ್ವಹಣೆ ಕುರಿತು ಯಾವುದೇ ಮಾಹಿತಿ ಬಿಎಂಆರ್‌ಸಿಎಲ್‌ನಿಂದ ಲಭ್ಯವಾಗಿಲ್ಲ ಎಂದು ಬಿಬಿಎಂಪಿ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೂಡ ಹೇಳಿದೆ.

ಬಿಎಂಆರ್‌ಸಿಎಲ್ ಇನ್ನಿತರೆ ಸಂಸ್ಥೆಗಳು ದಿನಕ್ಕೆ 20 ಟನ್ ಅಥವಾ ಒಂದು ಯೋಜನೆಗೆ 300 ಟನ್‌ ಅಂತೆ ಸಿ ಡಿ ತ್ಯಾಜ್ಯ ಉತ್ಪಾದನೆಯಾಗುತ್ತದೆ.ತ್ಯಾಜ್ಯವನ್ನು ನಾಲ್ಕು ವಿಭಾಗಗಳಾಗಿ ಗುರತಿಸಲಾಗುತ್ತದೆ ಎ) ಸಿಮೆಂಟ್, ಬಿ)ಮಣ್ಣು, ಸಿ)ಸ್ಟೀಲ್, ಪ್ಲಾಸ್ಟಿಕ್, ಡಿ) ಬ್ರಿಕ್ಸ್ , ಮೋರ್ಟರ್.

English summary
Namma Metro And your neighbours dump their waste illegally.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X