ವಾರಾಂತ್ಯ ಕರ್ಫ್ಯೂನಲ್ಲಿ ಬೆಂಗಳೂರು ಸೇರಿದಂತೆ ಇತರೆಡೆ ಏನಿರುತ್ತೆ? ಏನಿರಲ್ಲ?
ಬೆಂಗಳೂರು, ಜನವರಿ 8: ರಾಜ್ಯದಲ್ಲಿ ಕೊರೊನಾ ಮತ್ತು ಓಮಿಕ್ರಾನ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕಠಿಣ ನಿಯಮಗಳ ಜೊತೆ ವಾರಾಂತ್ಯ ಕರ್ಫ್ಯೂ ಜಾರಿಗೆ ತಂದಿದೆ.
ಶುಕ್ರವಾರ ರಾತ್ರಿಯಿಂದಲೇ ವಾರಾಂತ್ಯ ಕರ್ಫ್ಯೂ ಜಾರಿಯಾಗಿದೆ. ಇಂದು (ಶನಿವಾರ) ಮತ್ತು ನಾಳೆ (ಭಾನುವಾರ) ಎರಡು ದಿನ ರಾಜ್ಯ ಸ್ತಬ್ಧವಾಗಿರಲಿದೆ. ಕೇವಲ ಅಗತ್ಯ ಓಡಾಟಕ್ಕೆ ಅವಕಾಶ ನೀಡಲಾಗಿದ್ದು, ಅನಗತ್ಯ ಓಡಾಟಕ್ಕೆ ಸರ್ಕಾರ ಬ್ರೇಕ್ ಹಾಕಿದೆ.
ವಾರಾಂತ್ಯ ಕರ್ಫ್ಯೂನಲ್ಲಿ ಏನಿರುತ್ತೆ? ಏನಿರಲ್ಲ ಎಂಬುದರ ಬಗ್ಗೆ ಸರ್ಕಾರ ಈಗಾಗಲೇ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಶುಕ್ರವಾರ ಸಂಜೆಯಿಂದಲೇ ಬೆಂಗಳೂರಿನ ರಸ್ತೆಗಳು ಖಾಲಿ ಖಾಲಿ ಆಗಿದ್ದವು. ಒಂದಿಷ್ಟು ಜನ ತಮ್ಮ ಊರಿನತ್ತ ಪ್ರಯಾಣ ಬೆಳೆಸಲು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಜಮಾಯಿಸಿದ್ದರು. ಆಂಧ್ರಪ್ರದೇಶ, ತಮಿಳುನಾಡು ಮತ್ತು ಉತ್ತರ ಕರ್ನಾಟಕದ ಭಾಗಗಳಿಗೆ ಹೊರಡಲು ಜನರು ಕಾದು ಕುಳಿತಿದ್ದರು.

ಈ ಎರಡು ದಿನ ರಾಜ್ಯದಲ್ಲಿ ಏನಿರುತ್ತೆ? ಏನಿರಲ್ಲ?
ರಾಜಧಾನಿ ಬೆಂಗಳೂರಿನಲ್ಲಿ ಬಿಎಂಟಿಸಿ ಓಡಾಟ ದೈನಂದಿನಂತೆ ಇರಲ್ಲ. ಶೇ.10ರಷ್ಟು ಮಾತ್ರ ಬಸ್‌ಗಳು ರಸ್ತೆಗೆ ಇಳಿಯಲಿವೆ. ವೀಕೆಂಡ್ ಕರ್ಫ್ಯೂ ವೇಳೆ ಸಾರ್ವಜನಿಕ ಸೇವೆ ಇರುವುದಿಲ್ಲ. ವಿಮಾನ ನಿಲ್ದಾಣ ಪ್ರಯಾಣದ ಬಸ್‌ನಲ್ಲಿ ಯಾವುದೇ ತೊಡಕು ಇರುವುದಿಲ್ಲ.
ಇನ್ನು ಆರೋಗ್ಯ ಕಾರ್ಯಕರ್ತರು, ಪೊಲೀಸ್ ಸಿಬ್ಬಂದಿ ಹಾಗೂ ಇತರೆ ಮುಂಚೂಣಿ ಕಾರ್ಯಕರ್ತರ ಓಡಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಜನ ದಟ್ಟಣೆಗೆ ಅನುಸಾರವಾಗಿ ಕೆಎಸ್‌ಆರ್‌ಟಿಸಿ ಬಸ್ ಸೇವೆ ಒದಗಿಸಲಾಗಿದೆ.

ರಾಜಧಾನಿ ಬೆಂಗಳೂರು ಸೇರಿ ರಾಜ್ಯ ಹಾಗೂ ಅಂತರಾಜ್ಯ ಬಸ್ ಓಡಾಡಲಿವೆ. ಆದರೆ ಗೋವಾ, ಮಹಾರಾಷ್ಟ್ರ, ಕೇರಳ ಸೇರಿದಂತೆ ಹೊರ ರಾಜ್ಯದಿಂದ ಆಗಮಿಸುವ ಪ್ರಯಾಣಿಕರಿಗೆ ಕಠಿಣ ನಿಯಮ ವಿಧಿಸಲಾಗಿದೆ.
ಹೊರರಾಜ್ಯಗಳಿಂದ ಆಗಮಿಸುವ ಪ್ರಯಾನಿಕರು RTPCR ನೆಗೆಟಿವ್ ವರದಿ ಇಲ್ಲದಿದ್ದರೆ ಬಸ್‌ಗೆ ಪ್ರವೇಶ ಇರುವುದಿಲ್ಲ ಎಂದು ತಿಳಿಸಲಾಗಿದೆ. ಕೋವಿಡ್ ನಿಯಮ ಅನುಸರಿಸಿ ಮಾಡಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ನಡೆಸಲಿದೆ.
ಮೆಟ್ರೋ ಸಂಚಾರ
ವಾರಾಂತ್ಯ ಕರ್ಫ್ಯೂನಲ್ಲಿ ಎಂದಿನಂತೆ ಮೆಟ್ರೋ ಸಂಚಾರ ಇರಲಿದ್ದು, ಪ್ರತಿ 20 ನಿಮಿಷಕ್ಕೊಂದು ಮೆಟ್ರೋ ಸಂಚರಿಸಲಿದೆ. ದೆಹಲಿ ಮಾದರಿಯನ್ನೇ ಅನುಸರಿಸಿ ನಮ್ಮ ಮೆಟ್ರೋ ಸೇವೆ ಒದಗಿಸಲಿದೆ.
ವಾರಾಂತ್ಯ ಕರ್ಫ್ಯೂ ವೇಳೆ ಬೆಳಗ್ಗೆ 8ರಿಂದ ರಾತ್ರಿ 9ರವರೆಗೆ ಕಾರ್ಯಾಚರಣೆ ನಡೆಸಲಿದ್ದು, ಉಳಿದಂತೆ ಎಲ್ಲಾ ದಿನವೂ ಬೆಳಗ್ಗೆ 5ರಿಂದ 11 ರವರೆಗೆ ಮೆಟ್ರೋ ಸಂಚರಿಸಲಿದೆ.

Recommended Video
ಆಟೋ, ಟ್ಯಾಕ್ಸಿ ಓಡಾಕ್ಕಿಲ್ಲ ಅನುಮತಿ
ವಾರಾಂತ್ಯ ಕರ್ಫ್ಯೂ ವೇಳೆ ಆಟೋ, ಕ್ಯಾಬ್ ಸಂಚಾರಕ್ಕೆ ಅವಕಾಶ ಇಲ್ಲ. ಜನರುಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬಂದರೂ, ಮುಂದೆ ಹೋಗುವುದಕ್ಕೆ ಬಿಎಂಟಿಸಿ ಬಸ್ ಸಂಖ್ಯೆ ಕಡಿಮೆ ಇರಲಿವೆ.
ವಾರಾಂತ್ಯದಲ್ಲಿ ಹೋಟೆಲ್, ಬಾರ್, ಪಬ್ ಬಂದ್
ವಾರಾಂತ್ಯ ಕರ್ಫ್ಯೂ ವೇಳೆ ಹೋಟೆಲ್, ರೆಸ್ಟೋರೆಂಟ್, ಬಾರ್, ಪಬ್ ಬಂದ್ ಇರಲಿದ್ದು, ಪಾರ್ಸಲ್‌ಗೂ ಅವಕಾಶ ಇಲ್ಲ. ಪಾಸಿಟಿವಿಟಿ ದರ ಕಡಿಮೆ ಇರುವ ಜಿಲ್ಲೆಗಳಲ್ಲಿ ನಿರ್ಧಾರ ತೆಗೆದುಕೊಳ್ಳಲು ಆಯಾ ಜಿಲ್ಲಾಧಿಕಾರಿಗಳು ಸ್ವತಂತ್ರರಾಗಿದ್ದಾರೆ.
ಶುಕ್ರವಾರ ರಾತ್ರಿ 8ರಿಂದ ಸೋಮವಾರ ಬೆಳಗ್ಗೆ 5ರವರೆಗೆ ಬಂದ್ ಇರಲಿವೆ. ಆದರೆ ಹಾಲು, ಮೊಟ್ಟೆ, ಮಾಂಸ, ತರಕಾರಿ ಅಗತ್ಯ ಸೇವೆಗಳಿಗೆ ತೊಡಕಿರುವುದಿಲ್ಲ. ತರಕಾರಿ, ಸೊಪ್ಪು, ಹಣ್ಣು ಎಲ್ಲಾ ಬಗೆಯ ದಿನ ಬಳಕೆ ವಸ್ತುಗಳು ಸಿಗಲಿದೆ












Click it and Unblock the Notifications