Massive Traffice: ಭಾರೀ ಸಂಚಾರ ದಟ್ಟಣೆಗೆ ಸಾಕ್ಷಿಯಾದ ಬೆಂಗಳೂರು
ಬೆಂಗಳೂರು, ಸೆಪ್ಟಂಬರ್ 28: ಬೆಂಗಳೂರು ಬಂದ್ ಆದ ಮರುದಿನವೇ ಬುಧವಾರ ಸಿಲಿಕಾನ್ ಸಿಟಿ ಬೆಂಗಳೂರು ಭಾರೀ ಸಂಚಾರ ದಟ್ಟಣೆಗೆ ಸಾಕ್ಷಿ ಆಗಿದೆ. ಕೀಲೋ ಮೀಟರ್ ವರೆಗೆ ವಾಹನಗಳು ಸರತಿ ಸಾಲಿನಲ್ಲಿ ನಿಂತಿದ್ದ ಪರಿಣಾಮ ಗಂಟೆ ಗಟ್ಟಲೇ ರಸ್ತೆಯಲ್ಲಿ ಕಾದ ವಾಹನ ಸವಾರರು, ಶಾಲಾ ಮಕ್ಕಳು ಹೈರಾಣಾದ ಘಟನೆ ನಡೆದಿದೆ.
ಈ ಕುರಿತು ಸಾಮಾಜಿಕ ಜಾಲತಾಣ X ನಲ್ಲಿ ನೆಟ್ಟಿಗರು ವಿಡಿಯೋ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ರಸ್ತೆಗಳಲ್ಲಿ ಸಿಲುಕಿಕೊಂಡ ವಾಹನಗಳ ಪೈಕಿ ಕೆಲವುಗಳಂತೂ ನಿಂತಲ್ಲೇ ನಿಂತು ಬಿಟ್ಟಿದ್ದವು. ಇಂತಹ ಘಟನೆ ನಗರದ ಹೊರ ವರ್ತುಲ ರಸ್ತೆ (ORR) ಮತ್ತಿತರ ಪ್ರಮುಖ ರಸ್ತೆಗಳಲ್ಲಿ ಕಂಡು ಬಂದಿದೆ.

ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ರೈತರು ಮತ್ತು ಕನ್ನಡ ಸಂಘಟನೆಗಳು ಕರೆ ನೀಡಿದ್ದ ಬೆಂಗಳೂರು ಬಂದ್ ನಡೆದ ಮಾರನೆ ದಿನವೇ ಸುಗಮ ಸಂಚಾರ ವ್ಯವಸ್ಥೆಯಲ್ಲಿ ಇಂತಹ ಬೆಳವಣಿಗೆ ನಡೆದಿದೆ
ಮನೆಯಿಂದ ಕಚೇರಿಗಳಿಗೆ ಅಥವಾ ಕಚೇರಿಗಳಿಂದ ಮನೆಗೆ ತೆರಳುವವರು ಮಾರ್ಗದ ಮಧ್ಯೆ ಗಂಟೆಗಳ ಕಾಲ ಸಿಲುಕಿ ತೊಂದರೆ ಅನುಭವಿಸಿದರು. ಕೆಲವರು ರಾತ್ರಿ 9 ಗಂಟೆಯ ಮೊದಲು ಕಚೇರಿಯಿಂದ ಹೊರ ಹೋಗಬೇಡಿ. ಓಆರ್‌ಆರ್, ಮಾರತ್ತಹಳ್ಳಿ, ಸರ್ಜಾಪುರ ಮತ್ತು ಸಿಲ್ಕ್‌ಬೋರ್ಡ್ ಮಾರ್ಗಗಳನ್ನು ಬಳಸದಂತೆ ನೆಟ್ಟಿಗರು ಪೋಸ್ಟ್ ಮಾಡಿದ್ದು ಕಂಡು ಬಂತು.
1.5 ಕ್ರಮಿಸಲು ಮೂರು ಗಂಟೆ: ಸವಾರರು ಹೈರಾಣು
1.5 ಕಿಲೋ ಮೀಟರ್ ಕ್ರಮಿಸಲು ಒಟ್ಟು 3 ಗಂಟೆ ಸಮಯ ಹಿಡಿದಿದ್ದು, ಇದು ಭಯಾನಕ ಸಂಚಾರ ದಟ್ಟನೇ ಎಂದು ಕೆಲವರು ಬರೆದುಕೊಂಡಿದ್ದಾರೆ. ಈ ಮಧ್ಯೆ ಮತ್ತೊಬ್ಬ ಸಾಮಾಜಿಕ ಬಳಕೆದಾರರ/ ವಾಹನ ಸವಾರರು 1 ಕಿಲೋ ಮೀಟರ್ ಕ್ರಮಿಸಲು ಎರಡು ಗಂಟೆ ತೆಗೆದುಕೊಂಡ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಈ ಭಾರೀ ಸಂಚಾರ ದಟ್ಟಣೆಯಿಂದ ಸಂಜೆ ಮನೆ ತಲುಪಬೇಕಿದ್ದ ಮಕ್ಕಳು ಟ್ರಾಫಿಕ್‌ನಲ್ಲಿ ಶಾಲಾ ವಾಹನ ಸಿಲುಕಿದ್ದರಿಂದ ರಾತ್ರಿ 8 ಗಂಟೆಗೆ ಮಕ್ಕಳನ್ನು ಮನೆ ಮುಟ್ಟಿದ್ದಾರೆ. ಈ ಕುರಿತ ಕೆಲವು ಸ್ಕ್ರೀನ್‌ಶಾಟ್‌ಗಳನ್ನು ಅವರು ಹಂಚಿಕೊಂಡಿದ್ದಾರೆ.
#Bengaluru Massive traffic jam on ORR stretch footage#BengaluruTraffic #ORRTraffic #BengaluruTrafficJam #ORRTrafficJam #Bangalore #BangaloreTraffic
— Karnataka Weather (@Bnglrweatherman) September 27, 2023
(Credits to the original owners) https://t.co/8QSNUqI84w pic.twitter.com/79xkWRUYcx
5 ಗಂಟೆ ಟ್ರಾಫಿಕ್‌ನಲ್ಲೇ ಕಳೆದ ಕೆಲವರು
ಭಾರಿ ಸಂಚಾರ ದಟ್ಟಣೆ ಸಮಸ್ಯೆ ಎದುರಿಸಿದ ಅನೇಕ ನಾಗರಿಕರು ಸಂಚಾರ ನಿರ್ವಹಿಸುವ ಆಡಳಿತದ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಆಡಳಿತ ನಿರ್ಲಕ್ಷ್ಯಯಿಂದ ಸಂಚಾರ ದಟ್ಟಣೆ ಉಂಟಾಗಿದ್ದು, ಕಚೇರಿಗೆ, ಮನೆಗೆ ತೆರಳಲು ಸಮಸ್ಯೆ ಯಾಗಿದೆ. ಸುಮಾರು 5 ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿಯೇ ಕಳೆಯಬೇಕಾದಿದೆ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.
ಬೆಳ್ಳಂದೂರಿ ರಸ್ತೆಗಳಲ್ಲಿ ಪಾದಾಚಾರಿಗಳಿಗೂ ಓಡಾಡಲು ಜಾಗವಿಲ್ಲದಷ್ಟು ಸಂಚಾರ ದಟ್ಟಣೆ ಉಂಟಾಗಿತ್ತು. ಫುಟ್‌ಪಾತ್‌ನಲ್ಲಿ ದ್ವಿಚಕ್ರ ವಾಹನಗಳು ಎರಡು ಬದಿ ಓಡಾಡುವುದು ಕಂಡು ಬಂತು. ಪಾದಾಚಾರಿ ಮಾರ್ಗದಲ್ಲಿ ಹೀಗೆ ಬೈಕ್ ಸವಾರಿ ಮಾಡಿದವರಿಗೆ ಏನು ದಂಡ ತೆಗೆದುಕೊಳ್ಳುತ್ತೀರಿ? ಅಂತಲೂ ಕೆಲವರು ಟ್ವೀಟ್ ಮೂಲಕ ಕಿಡಿ ಕಾರಿದ್ದಾರೆ.
ಭಾರೀ ಟ್ರಾಫಿಕ್ ಉಂಟಾಗಲು ಕಾರಣ?
ಬೆಂಗಳೂರಿನಲ್ಲಿ ಬುಧವಾರದಂದು ಭಾರತ ಪ್ರವಾಸದಲ್ಲಿರುವ ಹಾಸ್ಯನಟ ಟ್ರೆವರ್ ನೋಹ್ ಅವರು ಬೆಂಗಳೂರಿ ಹೊರ ವರ್ತುಲ ರಸ್ತೆಯಲ್ಲಿ ನಡೆಸಬೇಕಿದ್ದ ಪ್ರದರ್ಶನ ರದ್ದುಗೊಳಿಸಿದ್ದರು. ಅವರು ಸಹ ಸುಮಾರು 30 ನಿಮಿಷ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದರು.
ಹಾಸ್ಯನಟರ ಕಾರ್ಯಕ್ರಮಕ್ಕೆ ಟಿಕೆಟ್ ಖರೀದಿಸಿದ್ದ ಹಲವಾರು ಬೆಂಗಳೂರು ನಿವಾಸಿಗಳು ಹಾಜರಾಗಲು ತಮ್ಮ ಕಛೇರಿಯಿಂದ ಬೇಗ ಹೊರಟಿದ್ದರು. ಇದು ಅವರ ಪ್ರದರ್ಶನಕ್ಕೆ ಹೋಗುವ ORR ನಲ್ಲಿ ವಾಹನಗಳ ಸಂಖ್ಯೆಯನ್ನು ಹೆಚ್ಚಿಸಿತು. ಸ್ಥಳದಲ್ಲಿದ್ದ ಪ್ರಯಾಣಿಕರು 2-3 ಗಂಟೆಗಳ ಕಾಲ ಸಿಲುಕಿಕೊಂಡರು.
ಐಬಿಐ ಸಂಚಾರ ವರದಿಯ ಪ್ರಕಾರ ಸಂಜೆ 7.30ರಿಂದ ರಾತ್ರಿವರೆಗೆ ಸುಮಾರು 1.5 ಲಕ್ಷದಿಂದ 2 ಲಕ್ಷ ವರೆಗೆ ಓಡಾಡಬೇಕಿದ್ದ ವಾಹನಗಳ ಸಂಖ್ಯೆ 3.59 ಲಕ್ಷ ವಾಹನಗಳಿಗೆ ಏರಿಕೆ ಆಗಿತ್ತು. ಇದು ಸಹ ಟ್ರಾಫಿಕ್ ಏರಿಕೆಗೆ ಕಾರಣವಾಯಿತು. ಇನ್ನೂ ಆಗಾಗ ಬರುವ ಮಳೆಗೆ ವಿವಿಧ ಒಳ ರಸ್ತೆಗಳೆಲ್ಲ ಜಲಾವೃತಗೊಂಡ ಮಧ್ಯಾಹ್ನ 3ಗಂಟೆ ನಂತರ ವಿವಿಧೆ ವಾಹನಗಳು ಸಿಲುಕಿಕೊಂಡವು.












Click it and Unblock the Notifications