ಭೂಮಿ ಕೊಟ್ಟರೆ ಬಂಗಾರದ ಬೆಲೆ: ಎಂ.ಬಿ ಪಾಟೀಲ್
ಕರ್ನಾಟಕದಲ್ಲಿ ಉದ್ಯಮಗಳಿಗೆ ಭೂಮಿ ಕೊಡುವ ವಿಚಾರವು ಭಾರೀ ಚರ್ಚೆ ಆಗುತ್ತಿದೆ. ಈ ರೀತಿ ಇರುವಾಗಲೇ ಕರ್ನಾಟಕ ಸರ್ಕಾರವು ಭೂಮಿ ನೀಡುವುದು ಹಾಗೂ ಉದ್ಯಮಗಳಿಗೆ ಬಂಪರ್ ಆಫರ್‌ವೊಂದನ್ನು ಕೊಟ್ಟಿದೆ. ಕರ್ನಾಟಕ ಹಾಗೂ ಬೆಂಗಳೂರಿನಲ್ಲಿ ಹೂಡಿಕೆ ಮಾಡುವವರು ಎಲ್ಲಿ ಪಕ್ಕದ ರಾಜ್ಯಗಳಿಗೆ ಹೋಗಲಿದ್ದಾರೋ ಎನ್ನುವ ಆತಂಕದಲ್ಲಿಯೇ ಕರ್ನಾಟಕ ಸರ್ಕಾರವು ಈ ವಿಚಾರದಲ್ಲಿ ತುಸು ಅಲರ್ಟ್ ಆಗಿರುವಂತೆ ಇದೆ. ದೇವನಹಳ್ಳಿಯ ರೈತರು ಭೂಮಿ ಕೊಡುವುದಿಲ್ಲ ಎಂದು ಉಗ್ರ ಹೋರಾಟ ಮಾಡಿದ ಮೇಲೆ ರಾಜ್ಯ ಸರ್ಕಾರವು ಈ ಅಧಿಸೂಚನೆಯನ್ನು ರದ್ದು ಮಾಡಿದೆ.
ಇದರ ಬೆನ್ನಲ್ಲೇ ಆಂಧ್ರ ಪ್ರದೇಶ ಸರ್ಕಾರವು ಆಹ್ವಾನ ನೀಡಿರುವುದು ಹೆಚ್ಚು ಚರ್ಚೆಗೆ ಕಾರಣವಾಗಿದೆ. ಈ ವಿಚಾರವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ಅವರು ರಿಯಾಕ್ಟ್ ಮಾಡಿದ್ದಾರೆ. ಡಿಫೆನ್ಸ್ ಹಾಗೂ ಏರೋಸ್ಪೇಸ್ ಪಾರ್ಕ್ ಸ್ಥಾಪನೆ ಮಾಡುವುದಕ್ಕೆ ದೇವನಹಳ್ಳಿಯಲ್ಲಿ ಆಗಬೇಕಿದ್ದ ಭೂಸ್ವಾಧೀನ ಪ್ರಕ್ರಿಯೆಯನ್ನು ರೈತರ ಹಿತದೃಷ್ಟಿಯಿಂದ ಕೈಬಿಟ್ಟಿದ್ದೇವೆ. ಆದರೆ ಈ ಉದ್ಯಮಿಗಳಿಗೆ ಅವರು ಕೇಳಿದ ಜಾಗದಲ್ಲೇ ಜಮೀನು ಕೊಡಲಾಗುವುದು. ಆಂಧ್ರಪ್ರದೇಶದ ಸಚಿವ ನಾರಾ ಲೋಕೇಶ್ ಕರೆದ ಕೂಡಲೇ ಯಾವ ಉದ್ಯಮಿಯೂ ಕರ್ನಾಟಕದಿಂದ ಆಂಧ್ರ ಪ್ರದೇಶಕ್ಕೆ ಹೋಗಿಬಿಡುವುದಿಲ್ಲ ಎಂದಿದ್ದಾರೆ.

ರಾಜ್ಯವು ವೈಮಾನಿಕ ಅಂತರಿಕ್ಷ ವಲಯದಲ್ಲಿ ದೇಶದ ಶೇ.65ರಷ್ಟು ಪಾಲನ್ನು ಹೊಂದಿದೆ. ಜಾಗತಿಕ ಮಟ್ಟದಲ್ಲಿಯೂ ನಮ್ಮದು ಮೂರನೇ ಅತ್ಯುತ್ತಮ ಕಾರ್ಯ ನಿರ್ವಹಿಸುವ ಪರಿಸರವಾಗಿದೆ. ಉದ್ಯಮಗಳಿಗೆ ಭೂಮಿ ಮಾತ್ರ ಸಿಕ್ಕರೆ ಅವರು ಅಲ್ಲಿಗೆ ಹೋಗುವುದಿಲ್ಲ. ಪೂರಕ ವಾತಾವರಣವೂ ಅವಶ್ಯಕವಾಗಿದೆ ಎಂದು ಆಂಧ್ರ ಸಚಿವರಿಗೆ ತಿರುಗೇಟು ಕೊಟ್ಟಿದ್ದಾರೆ.
ಹೆಚ್ಚು ದುಡ್ಡು ಮತ್ತು ಅಭಿವೃದ್ಧಿಪಡಿಸಿದ ಭೂಮಿ!
ಭೂಮಾಲೀಕರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದಲ್ಲಿ ಹೆಚ್ಚಿನ ಹಣಕಾಸಿನ ಪರಿಹಾರ ಅಥವಾ ಹೆಚ್ಚು ವಿಸ್ತೀರ್ಣವಾದ ಅಭಿವೃದ್ಧಿಪಡಿಸಿದ ನಿವೇಶನವನ್ನು ನೀಡಲಾಗುವುದು. ಈ ರೀತಿ ಹೆಚ್ಚಿನ ಪರಿಹಾರ ಅಥವಾ ಅಭಿವೃದ್ಧಿಪಡಿಸಿದ ನಿವೇಶನವನ್ನು ಪಡೆಯುವುದಕ್ಕೆ ಒಪ್ಪದ ರೈತರ ಜಮೀನುಗಳನ್ನು ಕೃಷಿ ಭೂಮಿಯಾಗಿಯೇ ಮುಂದುವರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್: ಇನ್ನು ಆಂಧ್ರ ಸಚಿವ ನಾರಾ ಲೋಕೇಶ್ ಅವರ ಹೇಳಿಕೆಯು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟ್ರೋಲ್‌ಗೆ ಕಾರಣವಾಗಿದೆ. ಈ ಟ್ವೀಟ್ ನೋಡಿ ಹಲವು ಕನ್ನಡಿಗರು ಗರಂ ಆಗಿದ್ದಾರೆ. ಆಂಧ್ರ ಪ್ರದೇಶದ ಜನ ಸಹ ಮುಜುಗರಕ್ಕೆ ಒಳಗಾಗಿದ್ದು. ಟ್ವೀಟ್‌ಗೆ ಕಮೆಂಟ್ ಮಾಡಿ ಅಪಹಾಸ್ಯ ಮಾಡುತ್ತಿದ್ದಾರೆ.
ನಾರಾ ಲೋಕೇಶ್ ಅವರ ಆಹ್ವಾನಕ್ಕೆ ಕನ್ನಡಿಗರಿಂದಲೂ ಆಕ್ಷೇಪ ವ್ಯಕ್ತವಾಗುತ್ತಿದೆ. ರೂಪಾಯಿ ರಾಜ ಎನ್ನುವ ಖಾತೆಯಿಂದ ಟ್ವೀಟ್ ಮಾಡಲಾಗಿದ್ದು. ಅದರಲ್ಲಿ ಏರೋಸ್ಪೇಸ್‌ಗೆ ಪಾರ್ಕ್ ದೇವನಹಳ್ಳಿ vs ಅನಂತಪುರ ? ಯಾವುದು ಸೂಕ್ತ
❌ ತಪ್ಪು ಪ್ರಶ್ನೆ. ಯಾವುದೇ ಹೋಲಿಕೆ ಇಲ್ಲ.
📍6 ಕೋಟಿ/ಎಕರೆ = ನೀವು ಪರಿಸರ ವ್ಯವಸ್ಥೆಯನ್ನು ಪ್ರವೇಶಿಸುತ್ತಿದ್ದೀರಿ
📍6 ಲಕ್ಷ/ಎಕರೆ = ನೀವು ಖಾಲಿ ಭೂಮಿಯನ್ನು ಪ್ರವೇಶಿಸುತ್ತಿದ್ದೀರಿ
ರಾಜಧಾನಿ ಅಗ್ಗ ಪ್ರದೇಶದ ಅನ್ವೇಷಣೆಯಲ್ಲ. ಇದು ಸಂಪರ್ಕ, ಪ್ರತಿಭೆ ಮತ್ತು ಸಮಯವನ್ನು ಉಳಿಸುತ್ತದೆ ಎಂದಿದ್ದಾರೆ.












Click it and Unblock the Notifications