ಯಡಿಯೂರಪ್ಪ ಸರಕಾರ ಅಸ್ಥಿರಗೊಳಿಸುವ ಬಗ್ಗೆ ದೇವೇಗೌಡ್ರ ಸ್ಪಷ್ಟನೆ
Recommended Video
ಬೆಂಗಳೂರು, ಆ 4: ಈಗ ತಾನೇ ಅಧಿಕಾರಕ್ಕೆ ಬಂದಿರುವ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಬಗ್ಗೆ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಗೌಡ್ರು, 'ಒಂಬತ್ತು ದಿನಗಳ ಯಡಿಯೂರಪ್ಪನವರ ಸರಕಾರವನ್ನು ಪತನಗೊಳಿಸುವ ಕೆಲಸಕ್ಕೆ ಕೈಹಾಕುವುದಿಲ್ಲ' ಎಂದು ಗೌಡ್ರು ಹೇಳಿದರು.
ಹದಿನೇಳು ಅಸೆಂಬ್ಲಿ ಕ್ಷೇತ್ರದ ಉಪಚುನಾವಣೆಯ ಬಗ್ಗೆ ಮಾತನಾಡುತ್ತಾ, ' ನಾವು ಕಾಂಗ್ರೆಸ್ ಜೊತೆ ಮೈತ್ರಿಗೆ ಮುಕ್ತವಾಗಿದ್ದೇವೆ. ಆದರೆ, ಕಾಂಗ್ರೆಸ್ ನಮ್ಮೊಂದಿಗೆ ಸಹಕರಿಸಿದರೆ ಮಾತ್ರ ಇದು ಸಾಧ್ಯ' ಎಂದು ದೇವೇಗೌಡ್ರು ಸ್ಪಷ್ಟ ಪಡಿಸಿದರು.

'ಬಿಜೆಪಿ ಹಾಲೀ ಅಸೆಂಬ್ಲಿಯ 3.8ವರ್ಷವನ್ನು ಪೂರೈಸಲಿ. ನಾವಂತೂ ಸರಕಾರ ಅಸ್ಥಿರಗೊಳಿಸುವ ಕೆಲಸಕ್ಕೆ ಮುಂದಾಗುವುದಿಲ್ಲ' ಎಂದು ಗೌಡ್ರು ಹೇಳಿದರು.
'ಕಾಂಗ್ರೆಸ್ ಜೊತೆಗಿನ ಮೈತ್ರಿ ಮುಗಿದ ಅಧ್ಯಾಯ' ಎಂದಿದ್ದ ದೇವೇಗೌಡ್ರು, 'ಭವಿಷ್ಯದಲ್ಲಿ ಕಾಂಗ್ರೆಸ್ ಜೊತೆ ಯಾವುದೇ ಮೈತ್ರಿ ಇರುವುದಿಲ್ಲ' ಎಂದು ಒಂದು ವಾರದ ಹಿಂದೆ ಕಾರ್ಯಕರ್ತರ ಸಭೆಯ ನಂತರ ಹೇಳಿದ್ದರು.
'ಕಾಂಗ್ರೆಸ್ ಸೇರಿದಂತೆ, ಯಾವುದೇ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳಬಾರದು ಎನ್ನುವುದು ಒಕ್ಕೂರಿಲಿನ ಕೂಗಾಗಿತ್ತು. ಜೆಡಿಎಸ್ ಪಕ್ಷದ ಬಲವೃದ್ದನೆಗೆ ಏಕಾಂಗಿಯಾಗಿ ಸ್ಪರ್ಧಿಸುವುದೇ ಸೂಕ್ತ ಎನ್ನುವ ನಿರ್ಧಾರಕ್ಕೆ ಬರಲಾಗಿದೆ' ಎಂದು ಗೌಡ್ರು ಸಭೆಯಲ್ಲಿ ಹೇಳಿದ್ದರು.












Click it and Unblock the Notifications