letter to CM: ಬಿಎಂಟಿಸಿ ಬಸ್ ಬಿಡಿ: ಸಿಎಂಗೆ ವಿದ್ಯಾರ್ಥಿನಿಯ ಪತ್ರ
ಬೆಂಗಳೂರು ಫೆಬ್ರವರಿ 27: ಶಾಲೆಗೆ ತೆರಳಲು ಇರುವ ಸಮಸ್ಯೆಯನ್ನು ನಿವಾರಿಸುವಂತೆ ಎಂಟನೇ ತರಗತಿ ವಿದ್ಯಾರ್ಥಿನಿ ಬಿಎಂಟಿಸಿ ವ್ಯವಸ್ಥಾಪ ನಿರ್ದೇಶಕರಿಗೆ ಪತ್ರ ಬರೆದಿದ್ದಾಳೆ. ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾಳೆ.
ಶಕ್ತಿ ಯೋಜನೆ ಜಾರಿ ನಂತರ ಬಸ್ ಸೇವೆಗಳು ಸಮಪರ್ಕವಾಗಿ ಸಿಗುತ್ತಿಲ್ಲ. ಅದರಲ್ಲೂ ಬೆಳಗಿನ ಹೊತ್ತು ಶಾಲೆ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ಬಸ್ ಕೊರತೆ ಕಾಣಿಸಿಕೊಳ್ಳುತ್ತಿವೆ ಎಂಬ ಆರೋಪಳನ್ನು ವಿದ್ಯಾರ್ಥಿನಿ ಪತ್ರದಲ್ಲಿ ಮಾಡಿದ್ದಾಳೆ. ಈ ಸಮಸ್ಯೆಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಎಂಟನೇ ತರಗತಿ ವಿದ್ಯಾರ್ಥಿನಿಯೊಬ್ಬಳು, ಸಿಎಂ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಬಿಎಂಟಿಸಿ ಎಂಡಿ ಆರ್. ರಾಮಚಂದ್ರನ್ ಅವರಿಗೆ ಪತ್ರ ಬರೆದು ತನಗೆ ಎದುರಾಗಿರುವ ಬಸ್ ಸಮಸ್ಯೆ ಕುರಿತಂತೆ ಬೆಳಕು ಚೆಲ್ಲಿದ್ದಾಳೆ.

ಮನವಿ ಪತ್ರದಲ್ಲಿರುವಂತೆ ವಿ.ವೈ.ಹರ್ಷಿನ್ ಎಂಬ ವಿದ್ಯಾರ್ಥಿನಿ, ತಾವರೆಕೆರೆಯಿಂದ ಮಾಗಡಿ ರಸ್ತೆ ಮೂಲಕ ಶ್ರೀನಗರ ಬಸ್ ನಿಲ್ದಾಣಕ್ಕೆ ಬಸ್‌ಗಳ ಸಂಖ್ಯೆ ವಿರಳವಿದೆ. ಅದರಲ್ಲೂ ಬೆಳಗಿನ ಹೊತ್ತು ಬಸ್‌ಗಳೇ ಸಿಗುವುದಿಲ್ಲ. ಈ ಬಗ್ಗೆ ಬಿಎಂಟಿಸಿ ಅಧಿಕಾರಿಗಳ ಗಮನಕ್ಕೆ ತಂದು, ಹೆಚ್ಚಿನ ಬಸ್‌ಗಳ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಿದ್ದೇನೆ. ಆದರೂ ಅದರಿಂದ ಪ್ರಯೋಜನವಾಗಿಲ್ಲ.
ಸೀಗೇಹಳ್ಳಿ, ಬೆಂಗಳೂರು ನಗರದಿಂದ 25 ಕಿ.ಮೀ ದೂರವಿದೆ. ಹತ್ತಿರದಲ್ಲೇ ಬಿಎಂಟಿಸಿ ಡಿಪೋ ಇದೆ. ಇಲ್ಲಿಂದ ಅನೇಕ ಕಡೆ ಬಸ್‌ಗಳ ವ್ಯವಸ್ಥೆಯನ್ನು ಬಿಎಂಟಿಸಿ ಕಲ್ಪಿಸಿದೆ. ಆದರೆ ಅಕ್ಕಪಕ್ಕದಲ್ಲಿರುವ ವನಗನಹಟ್ಟಿ, ಚನ್ನೇನಹಳ್ಳಿ, ಜಟ್ಟಿಪಾಳ್ಯ, ಸೀಗೇಹಳ್ಳಿಯಿಂದ ಬೆಂಗಳೂರಿಗೆ ಬಸ್‌ಗಳ ವ್ಯವಸ್ಥೆಯೇ ಇಲ್ಲ ಎಂದು ಹರ್ಷಿಣಿ ಅಳಲು ತೋಡಿಕೋಂಡಿದ್ದಾಳೆ.
ಆದರೆ ಪ್ರತಿ ಗುರುವಾರ ಮತ್ತು ಭಾನುವಾರ ಸುಮನಹಳ್ಳಿಯಿಂದ ಕಡಬಗೆರೆ ಮಾರ್ಗವಾಗಿ ಗುರು ರಾಘವೇಂದ್ರ ಕಾಮಧೇನು ದೇವಸ್ಥಾನಕ್ಕೆ ಪ್ರತಿ ಗಂಟೆಗೆ ಒಂದು ಬಸ್ ಸಂಚರಿಸುತ್ತದೆ. ನಮ್ಮ ಸಮಸ್ಯೆಯನ್ನು ಮಾತ್ರ ಅಧಿಕಾರಿಗಳು ಕೇಳುತ್ತಿಲ್ಲ. ನಮಗೆ ಉತ್ತಮ ಶಿಕ್ಷಣ ಪಡೆಯಲು ಸೂಕ್ತ ಸಾರಿಗೆ ವ್ಯವಸ್ಥೆ ಮಾಡಬೇಕು. ಬಸ್ ಸಮಸ್ಯೆ ನೀಗಿಸಲು ಡಾ ಬಿ.ಆರ್. ಅಂಬೇಡ್ಕರ್ ಅವರ ಹೆಸರಿನಲ್ಲಿ ಪ್ರತಿ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಶಾಲಾ ಮಕ್ಕಳಿಗಾಗಿಯೇ ಹೆಚ್ಚುವರಿ ಬಸ್ ಸೇವೆ ಆರಂಭಿಸಬೇಕು ಎಂದು ಕೋರಿದ್ದಾಳೆ.
ನಮಗೆ ದೇವಾಲಯದ ತೀರ್ಥ-ಪ್ರಸಾದ ಬೇಡ, ನಮಗೆ ಉನ್ನತ ಶಿಕ್ಷಣಕ್ಕಾಗಿ ಸಂಸ್ಥೆಯ ಸಾರಿಗೆ ವಾಹನಗಳು ಬೇಕಾಗಿರುತ್ತದೆ. ಈ ದೇಶದ ರಾಷ್ಟ್ರಪತಿ ಮಹಳೆಯಾಗಿರುತ್ತಾರೆ. ಇಂದಿನ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ಉತ್ತನ ಶಿಕ್ಷಣ ಮತ್ತು ಸುರಕ್ಷತೆ ಸಿಗುವಂತೆ ಮಾಡಿರುವುದು ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶೀರ್ವಾದವಾಗಿರುತ್ತದೆ ಎಂದು ವಿದ್ಯಾರ್ಥಿನಿ ಪತ್ರದಲ್ಲಿ ಬರೆದಿದ್ದಾಳೆ.












Click it and Unblock the Notifications