ಗೊಂದಲ ಮಾಡಲು ನಾವು ಬಿಜೆಪಿಗೆ ಬಂದಿಲ್ಲ ಎಂದ ಬಿಜೆಪಿ ಶಾಸಕ
ಬೆಂಗಳೂರು, ಜ. 29: ಬಿಜೆಪಿಗೆ ಬಲ ತುಂಬಲು ಬಂದಿರುವ ನಾವೆಲ್ಲ 17 ಜನರೂ ಮಂತ್ರಿಗಳಾಗುತ್ತೇವೆ ಎಂದು ಕೆ.ಆರ್. ಪೇಟೆ ಬಿಜೆಪಿ ಶಾಸಕ ನಾರಾಯಣಗೌಡ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದ್ದಾರೆ.
ದೆಹಲಿ ಚುನಾವಣೆ ಹಿನ್ನೆಲೆಯಲ್ಲಿ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗಿದೆ. ಶೀಘ್ರದಲ್ಲಿಯೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದೆಹಲಿಗೆ ಹೋಗುತ್ತಾರೆ. ಸರ್ಕಾರ ಹಗೂ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಬಲ ತುಂಬಲು ನಾವು ಬಂದಿರೋದು. ಗೊಂದಲ ಮಾಡಲು ನಾವು ಬಿಜೆಪಿಗೆ ಬದಿಲ್ಲ. 17 ಜನರಿಗೂ ಒಳ್ಳೆಯದಾಗುತ್ತದೆ. 17 ಜನರಿಗೂ ಸ್ಥಾನಮಾನ ಕೊಡುತ್ತೇವೆ ಎಂದು ಹೇಳಿದ್ದಾರೆ. ನಾವು ಕೂಡ ಅದೇ ಭಾವನೆಯಲ್ಲಿ ಇದ್ದೇವೆ. ಮುಂದೆ ನಾವೆಲ್ಲಾ ಕುಳಿತು ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ನಾರಾಯಣಗೌಡ ಹೇಳಿದ್ದಾರೆ.

ಜೆಡಿಎಸ್ ಭದ್ರಕೋಟೆ ಯಾಗಿದ್ದ ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಆಯ್ಕೆಯಾಗಿದ್ದ ನಾರಾಯಣಗೌಡ ಶಾಸಕಸ್ಥಾನಕ್ಕೆ ಕೊಟ್ಟು ಬಿಜೆಪಿಯಿಂದ ಕಳೆದ ಉಪಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆ ಆಗಿದ್ದಾರೆ.












Click it and Unblock the Notifications