• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೆ ಟಾಂಗ್ ಕೊಟ್ಟ ಆರ್ ಅಶೋಕ್

|

ಬೆಂಗಳೂರು, ಮೇ. 14: ನರೇಂದ್ರ ಮೋದಿ ಎಲ್ಲಿದ್ದಾರೆ ಎಂಬುದು ಜಗತ್ತಿಗೆ ಗೊತ್ತು. ನಮ್ಮ ಸಂಸಪದರು ದಿನದ 24 ಗಂಟೆ ಕೆಲಸ ಮಾಡುತ್ತಿದ್ದೇವೆ. ಸಿದ್ದಾರಾಮಯ್ಯ ಎಲ್ಲಿದ್ದಾರೆ ಎಂದರೆ ಟ್ವಿಟ್ಟರ್ ನಲ್ಲಿದ್ದಾರೆ ಎಂದು ಸಚಿವ ಆರ್‌. ಅಶೋಕ್ ಅವರು ವ್ಯಂಗ್ಯ ಮಾಡಿದ್ದಾರೆ.

   ಸಿದ್ದರಾಮಯ್ಯನನ್ನು ಕಿಂಡಲ್ ಮಾಡಿದ ಸಚಿವ ಆರ್ ಅಶೋಕ್ | Oneindia Kannada

   ಬನಶಂಕರಿಯಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರದ ಗುಣಮಟ್ಟ ತಪಾಸಣೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಆರ್. ಅಶೋಕ್ ಅವರು, ಸಿದ್ದರಾಮಯ್ಯ ಅವರ ಆರೋಪಕ್ಕೆ ತಿರುಗೇಟು ನೀಡಿದರು. ಕೋಲಾರದಲ್ಲಿ ಆಕ್ಸಿಜನ್ ಇಲ್ಲದ ಬಗ್ಗೆ ಪ್ರಸ್ತಾಪಿಸಿ ಆಡಳಿತ ರೂಡ ಸರ್ಕಾರದ ಬಗ್ಗೆ ಸಿದ್ದರಾಮಯ್ಯ ಕಿಡಿ ಕಾರಿದ್ದರು. ಅದಕ್ಕೆ ತಿರುಗೇಟು ನೀಡಿರುವ ಆರ್‌. ಅಶೋಕ್ ಟ್ವಿಟ್ಟರ್ ರಾಮಯ್ಯ ಎಂದು ಕಾಲು ಎಳೆದಿದ್ದಾರೆ.

   ಸಿದ್ದರಾಮಯ್ಯ ಅವರು ಕೊರೊನಾ ಸಂಕಷ್ಟ ಕಾಲದಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಈ ಸಮಯದಲ್ಲಿ ಟ್ವೀಟ್ ಮಾಡಿಕೊಂಡು ರಾಜಕೀಯ ಮಾಡುವುದು ಬೇಡ. ಮೋದಿ ಬಗ್ಗೆ ಹಗರುವಾಗಿ ಮಾತನಾಡುವ ಅಗತ್ಯವಿಲ್ಲ. ಮೋದಿ ಏನು ಎಂಬುದು ಜಗತ್ತಿಗೆ ಗೊತ್ತು. ನಮ್ಮ ಸಂಸದರೂ ಹಗಳಿರುಳು ಶ್ರಮ ವಹಿಸಿ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಟ್ವಿಟ್ಟರ್‌ನಲ್ಲಿದ್ದಾರೆ ಎಂದು ಟೀಕೆ ಮಾಡಿದರು.

   ಕಳೆದ ಹತ್ತು ದಿನಗಳಿಂದ ನಮ್ಮ ಅಧಿಕಾರಿಗಳು ಮತ್ತು ವೈದ್ಯರು ಶ್ರಮ ವಹಿಸಿ ಕೆಲಸ ಮಾಡುತ್ತಿದ್ದೇವೆ. ಆಕ್ಸಿಜನ್ ಕಡಿಮೆ ಬೇಕಿರುವ ರೋಗಿಗಳಿಗೆ ಹೊಸ ಹಾರೈಕೆ ಕೇಂದ್ರಗಳನ್ನು ಮಾಡಿದ್ದೇವೆ. ಡಾಕ್ಟರ್ ಗಳು ಸ್ಪೆಷಲಿಸ್ಟ್ ಗಳು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಮೂರನೇ ಅಲೆಗೂ ಸಕಲ ತಯಾರಿ ನಡೆದಿದೆ. ನಮ್ಮ ಕ್ಷೇತ್ರದಲ್ಲಿ ಲಸಿಕೆಗೆ ಕೊರತೆಯಿಲ್ಲ. ನಲವತ್ತೈದು ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದೆ. ಕೋವಿಡ್ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗುತ್ತಿವೆ. ಮುಂದಿನ ದಿನಗಳಲ್ಲಿ ಲಾಕ್ ಡೌನ್ ಮಾಡುವುದು ಒಳಿತು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಮೊದಲು ಲಾಕ್ ಡೌನ್ ಮಾಡಿದಾಗ ವಿರೋಧ ಪಕ್ಷಗಳು ವ್ಯಂಗ್ಯ ಮಾಡಿದ್ದವು. ನಾವು ಜನರ ಜತೆ ಕೆಲಸ ಮಾಡುತ್ತಿದ್ದೇವೆ. ಸಿದ್ದರಾಮಯ್ಯ ಟ್ವಿಟ್ಟರ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಟೀಕೆ ಮಾಡಿದರು.

   English summary
   Minister R Ashok comments on Siddaramaiah's statement know more
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X