ಚಂದ್ರು ಪ್ರಕರಣ ಮುಂದಿಟ್ಟುಕೊಂಡು ಗಲಭೆ ಸೃಷ್ಟಿಸಲು ಬಿಜೆಪಿ ಯತ್ನ: ಜಮೀರ್

ಬೆಂಗಳೂರು, ಏ. 11: ಜೆ.ಜೆ.ನಗರ ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ವಿರುದ್ಧ ಶಾಸಕ ಬಿ. ಝಡ್ ಜಮೀರ್ ಅಹಮದ್ ಕಿಡಿ ಕಾರಿದ್ದಾರೆ. ಸಾವಿನ ಮನೆಯಲ್ಲಿ ಬಿಜೆಪಿ ನಾಯಕರು ರಾಜಕೀಯ ಮಾಡುತ್ತಿದ್ದಾರೆ. ಗಲಭೆ ಸೃಷ್ಟಿಸಬೇಕೆಂಬ ಕಾರಣಕ್ಕೆ ಚಂದ್ರು ಪ್ರಕರಣ ಮುಂದಿಟ್ಟುಕೊಂಡು ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾವು ಪಾಕಿಸ್ತಾನದ ಮುಸ್ಲಿಮರಲ್ಲ ನಾವು ಭಾರತೀಯ ಮುಸ್ಲಿಮರು. ಶಾಂತಿ ಸಹಬಾಳ್ವೆ ನಮ್ಮ ಮೊದಲ ಆದ್ಯತೆ. ನಾವು ಗೌರವದಿಂದ ಬಾಳುತ್ತಿದ್ದೇವೆ ಎಂದರು.

we are not Pakistani Muslim says MLA B.Z. Zameer Ahmed khan

ಸಾವಿನ ಮನೆಯಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಅದು ತಪ್ಪು ಈ ಹಿಂದಿನಿಂದಲೂ ಚಾಮರಾಜಪೇಟೆಯಲ್ಲಿ ನಾನು ಶಾಸಕನಾಗಿರುವುದಕ್ಕಿಂತ ಮುಂಚೆ ಒಂದಲ್ಲ ಒಂದು ರೀತಿಯಲ್ಲಿ ಗಲಭೆಗಳು ನಡೆಯುತ್ತಿದ್ದವು. ನಾನು ಶಾಸಕನಾದ ಮೇಲೆ ಒಂದೇ ಒಂದು ಗಲಭೆಗಳು ಇಲ್ಲಿ ನಡೆದಿಲ್ಲ. ಶಾಂತಿಯುತವಾಗಿರುವುದನ್ನು ಗಮನಿಸಿದ ಬಿಜೆಪಿ ಮುಖಂಡರು ಇಲ್ಲಿ ಯಾವುದಾದರೂ ಒಂದು ರೀತಿಯಲ್ಲಿ ಗಲಭೆಯನ್ನು ಸೃಷ್ಟಿಸಬೇಕೆಂಬ ಉದ್ದೇಶದಿಂದ ಚಂದ್ರುವಿನ ಕೊಲೆಯನ್ನು ರಾಜಕಾರಣ ಮಾಡುತ್ತಿದ್ದಾರೆ ಎಂದು ಜಮೀರ್ ಆರೋಪಿಸಿದ್ದಾರೆ.

we are not Pakistani Muslim says MLA B.Z. Zameer Ahmed khan

ಆದರೆ ಯಾವುದೇ ಕಾರಣಕ್ಕೂ ನನ್ನ ಕ್ಷೇತ್ರದಲ್ಲಿ ಗಲಭೆಯಾಗಲು ಬಿಡಲ್ಲ. ಮುಂಬರುವ ದಿನಗಳಲ್ಲಿ ಚಾಮರಾಜಪೇಟೆ ಇನ್ನಷ್ಟು ಶಾಂತಿಯ ನೆಲೆವೀಡು ಆಗಲಿದೆ. ಚಂದ್ರು ಸಾವಿನ ನಂತರ ತನಿಖೆ ನಡೆಸಿದಂತಹ ನಗರ ಪೊಲೀಸ್ ಆಯುಕ್ತರು ಇದೊಂದು ಕೊಲೆ. ಒಂದು ರೋಲ್ ವಿಚಾರಕ್ಕೆ ನಡೆದಂತಹ ಕೊಲೆ ಎಂದು ಕಮಿಷನರ್ ತಿಳಿಸಿದ್ದಾರೆ. ಆದರೆ ಬಿಜೆಪಿಯವರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರ ಈ ತಂತ್ರಕ್ಕೆ ಯಾರು ಮತದಾರರು ನಮ್ಮ ಕ್ಷೇತ್ರದವರು ಮಣಿಯಬಾರದು. ಶಾಂತಿ ಸಹಬಾಳ್ವೆಯಿಂದ ನಾವು ಇರಬೇಕು ಎಂದು ಕರೆ ನೀಡಿದರು.

Recommended Video

      ಅಕ್ರಮ ಗಣಿಗಾರಿಕೆ ಮಾಹಿತಿ ಕೊಟ್ಟ ವ್ಯಕ್ತಿಮೇಲೆ ಹಲ್ಲೆ:ಸಂಸದೆ ಸುಮಲತಾ ಏನ್ ಮಾಡ್ತಾರೆ? | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+