ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದು ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ಕಾವೇರಿ ನೀರು ವ್ಯತ್ಯಯ

|
Google Oneindia Kannada News

ಬೆಂಗಳೂರು, ಜನವರಿ 23: ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ದಿನಪೂರ್ತಿ ನೀರು ವ್ಯತ್ಯಯವಾಗಲಿದೆ. ನೀರು ವೇಗವಾಗಿ ಹರಿಯುವ ಒತ್ತಡ ನಿಯಂತ್ರಿಸಲು ಜಲಮಂಡಳಿ ಕಾಮಗಾರಿ ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ಕಾವೇರಿ ಮೂರು ಹಂತದ ಪಂಪಿಂಗ್ ಕೇಂದ್ರಗಳಿಂದ ನೀರು ಪೂರೈಕೆ ಸ್ಥಗಿತಗೊಂಡಿದೆ.

ಮಂಗಳವಾರ ರಾತ್ರಿ 10 ಗಂಟೆಯಿಂದ ನಗರದ ಮುಕ್ಕಾಲು ಭಾಗಕ್ಕೆ ನೀರು ಪೂರೈಕೆಯಾಗಿಲ್ಲ. ಬುಧವಾರ ಸಂಜೆ 4ರ ನಂತರ ಕಾವೇರಿ ನೀರು ಎಲ್ಲ ಪ್ರದೇಶಗಳಿಗೂ ಸರಬರಾಜಾಗಲಿದೆ.

ಒತ್ತಡ ನಿಯಂತ್ರಿಸುವುದೇ ದೊಡ್ಡ ಸವಾಲಾಗಿದೆ

ಒತ್ತಡ ನಿಯಂತ್ರಿಸುವುದೇ ದೊಡ್ಡ ಸವಾಲಾಗಿದೆ

ಪಂಪಂಗ್ ಕೇಂದ್ರಗಳಲ್ಲಿ ವಿದ್ಯುತ್ ಸ್ಥಗಿತಗೊಂಡಾಗ ಪೈಪ್‌ನಲ್ಲಿ ಸೃಷ್ಟಿಯಾಗುವ ಒತ್ತಡವನ್ನು ನಿಯಂತ್ರಣಕ್ಕೆ ತರುವ ಕಾಮಗಾರಿಗೆ ಜಲಮಂಡಳಿಯು ಮಂಗಳವಾರ ರಾತ್ರಿ ಚಾಲನೆ ನೀಡಿದೆ. 3 ಪಂಪಿಂಗ್ ಕೇಂದ್ರಗಳಿಂದ ನೀರನ್ನು ಜೋರಾಗಿ ಪಂಪ್ ಮಾಡಲಾಗುತ್ತದೆ. ಪಂಪ್‌ನಿಂದ ಆರಂಭವಾಗಿ 100 ಮೀಟರ್ ವರೆಗೆ ಪೈಪ್‌ನಲ್ಲಿ ನೀರು ಹರಿಯುವಾಗಲಂತೂ ಅಗಾಧ ಒತ್ತಡವಿರುತ್ತದೆ. ವಿದ್ಯುತ್ ಕೈಕೊಟ್ಟಾಗ ಪೈಪ್‌ಗಳಲ್ಲಿ ನೀರು ಹಿಂದಕ್ಕೆ ಹಾಗೂ ಮುಂದಕ್ಕೆ ಹರಿಯುತ್ತದೆ.

ಮೂರು ಪಂಪಿಂಗ್ ಕೇಂದ್ರಗಳಲ್ಲಿ ಕಾಮಗಾರಿ

ಮೂರು ಪಂಪಿಂಗ್ ಕೇಂದ್ರಗಳಲ್ಲಿ ಕಾಮಗಾರಿ

ಮೂರು ಪಂಪಿಂಗ್ ಕೇಂದ್ರಗಳಲ್ಲಿ ನೀರು ಹರಿಯುವ ಒತ್ತಡ ನಿಯಂತ್ರಿಸಲು ಏರ್‌ ವೆಸಲ್ ಯಂತ್ರಕ್ಕೆ ಬ್ಲಾಡರ್ ಅಳವಡಿಸುವ ಕಾಮಗಾರಿ ಆರಂಭವಾಗಿದೆ. ಕಾಮಗಾರಿ ನಡೆಯುತ್ತಿರುವುದರಿಂದ ನೀರು ಪೂರೈಕೆ ನಿಲ್ಲಿಸಲಾಗಿದೆ.

 ನೀರು ಪೂರೈಕೆಯಾಗದ ಸ್ಥಳಗಳು ಯಾವುವು

ನೀರು ಪೂರೈಕೆಯಾಗದ ಸ್ಥಳಗಳು ಯಾವುವು

ಯಶವಂತಪುರ, ಮಲ್ಲೇಶ್ವರ, ಮತ್ತಿಕೆರೆ, ಗೋಕುಲ ಎಕ್ಸ್‌ಟೆನ್ಷನ್, ವಸಂತನಗರ, ಮುತ್ಯಾಲನಗರ, ಸದಾಶಿವನಗರ, ಹೆಬ್ಬಾಳ, ಭಾರತನಗರ, ಸುಧಾನಮನಗರ, ಪ್ಯಾಲೇಸ್ ಗುಟ್ಟಹಳ್ಳಿ, ಮಚಲಿಬೆಟ್ಟ, ಫ್ರೇಜರ್ ಟೌನ್, ಪಿಳ್ಳಣ್ಣ ಗಾರ್ಡನ್, ಹೊಂಬೇಗೌಡ ನಗರ, ಬನ್ನಪ್ಪ ಪಾರ್ಕ್, ಶಿವಾಜಿನಗರ, ಜೀವನ್ ಭೀಮಾ ನಗರ, ಚಿಕ್ಕಲಾಲ್‌ಬಾಗ್, ಮಡಿವಾಳ, ಮೆಜೆಸ್ಟಿಕ್, ಇಸ್ಟರೋ ಲೇಔಟ್, ಪೂರ್ಣಪ್ರಜ್ಞ ಲೇಔಟ್, ಮಡಿವಾಳ, ಗವಿಪುರದಲ್ಲಿ ನೀರು ವ್ಯತ್ಯಯ ಉಂಟಾಗಲಿದೆ.

ನೀರು ಬೇಕಿದ್ದರೆ ಕರೆ ಮಾಡಿ

ನೀರು ಬೇಕಿದ್ದರೆ ಕರೆ ಮಾಡಿ

ಜಲಮಂಡಳಿಗೆ ದೂರವಾಣಿ ಕರೆ ಮಾಡಿ ಟ್ಯಾಂಕರ್ ನೀರು ತರಿಸಿಕೊಳ್ಳಬಹುದು. ಈ ಸೇವೆ ಪಡೆಯಲು ಸಹಾಯವಾಣಿ 080-22238888 ಸಂಪರ್ಕಿಸಿ.

ಮೂರೂ ಹಂತಗಳಲ್ಲಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ನೀರು ಪೂರೈಕೆ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಇದೆ. ಪಂಪಿಂಗ್ ಸ್ಟೇಷನ್‌ಗಳಿಗೆ ವಿಸ್ಯುತ್ ಕೈಕೊಟ್ಟಾಗ ನೀರು ಹಿಂದಕ್ಕೆ ಹರಿಯುತ್ತದೆ. ಇದರಿಂದಾಗಿ ಒಟ್ಟು ಪೂರೈಕೆಯಲ್ಲಿ ಅಡಚಣೆ ಉಂಟಾಗುತ್ತದೆ.

ಈ ಹಿನ್ನೆಲೆಯಲ್ಲಿ ಕಾಮಗಾರಿ ಅವಶ್ಯಕವಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಜಲಮಂಡಳಿ ಮನವಿ ಮಾಡಿದೆ.
ಪೈಪ್‌ಲೈನ್‌ನಲ್ಲಿ ಹಿಂದಕ್ಕೆ ಹರಿಯುವ ನೀರು 20 ಕೆಜಿ ಒತ್ತಡ ಹೊಂದಿರುತ್ತದೆ. ಪೈಪ್‌ ಮೇಲೆ ಸಣ್ಣ ರಂದ್ರವಾದರೂ, 150-200 ಅಡಿಗಳಷ್ಟು ಮೇಲಕ್ಕೆ ಚಿಮ್ಮುತ್ತದೆ. ಈ ಒತ್ತಡ ಕಡಿಮೆ ಮಾಡುವುದು ಪಂಪಿಂಗ್ ಕೇಂದ್ರದ ನಿರ್ವಹಣೆಯಲ್ಲಿ ಪ್ರಮುಖ ಸವಾಲಾಗಿದೆ.

English summary
Cauvery water supply to many parts of the city will be affected on january 23 in the wake of bwssb takeing up maintenance works.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X