Water Supply Cut: ಸೆ.21ರಂದು ಬೆಂಗಳೂರಿನ ಬಹುತೇಕ ಪ್ರದೇಶಗಳಿಗೆ ನೀರು ಪೂರೈಕೆ ಇಲ್ಲ

ಬೆಂಗಳೂರು ಸೆಪ್ಟೆಂಬರ್ 20: ಕಾವೇರಿ 5ನೇ ಹಂತದ ಯೋಜನೆಯ ಕಾಮಗಾರಿ ನಡೆದಿರುವ ಕಾರಣ ಸೆಪ್ಟೆಂಬರ್ 21ರಂದು ಬೆಂಗಳೂರಿನ ಬಹುತೇಕ ಪ್ರದೇಶಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಈ ಬಗ್ಗೆ ಬೆಂಗಳೂರು ಜಲಮಂಡಳಿ ಪ್ರಕಟಣೆ ಬಿಡುಗಡೆ ಮಾಡಿ ಮಾಹಿತಿ ನೀಡಿದೆ. ಇದರಿಂದಾಗಿ ಸಾರ್ವಜನಿಕರು ಸಹರಿಸುವಂತೆ ಜಲಮಂಡಳಿ ತಿಳಿಸಿದೆ.

ಕಾವೇರಿ 5ನೇ ಹಂತದ 700 ಮಿ.ಮೀ ಕೊಳದ ಮಾರ್ಗವನ್ನು ಹೆಗ್ಗನಹಳ್ಳಿ ನೆಲ ಮಟ್ಟದ ಸಂಗ್ರಹಾಗಾರಕ್ಕೆ ಜೋಡಿಸುವ ಕಾಮಗಾರಿಯನ್ನು ಸೆಪ್ಟೆಂಬರ್ 21ರಂದು ಶನಿವಾರ ಕೈಗೊಳ್ಳಲಾಗುತ್ತಿದೆ. ಇದರಿಂದಾಗಿ ಶನಿವಾರ ನೀರು ಪೂರೈಸಲು ಆಗುವುದಿಲ್ಲ ಎಂದು ಜಲಮಂಡಳಿ ತಿಳಿಸಿದೆ. ಶನಿವಾರ ಅಂದರೆ ಸೆಪ್ಟೆಂಬರ್ 21ರಂದು ಮಧ್ಯಾಹ್ನ 1ರಿಂದ 10ರವರೆಗೆ ಕಾವೇರಿ ನಾಲ್ಕನೇ ಘಟ್ಟದ 2ನೇ ಫೇಸ್ ವ್ಯಾಪ್ತಿಯ ಪ್ರದೇಶಗಳಿಗೆ ನೀರು ಪೂರೈಕೆ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸಬೇಕು ಎಂದು ಜಲಮಂಡಳಿ ಮನವಿ ಮಾಡಿದೆ.

Water supply cut to most areas in bengaluru on september 21st

ಎಲ್ಲೆಲ್ಲಿ ನೀರು ವ್ಯತ್ಯಯ?

ಸೆಪ್ಟೆಂಬರ್ 21ರಂದು ಬೆಂಗಳೂರಿನ ರಾಜಗೋಪಾಲನಗರ, ವಾಮುಂಡಿಪುರ, ಚೌಡರಪಾಳ, ವಿದ್ಯಾರಣ್ಯನಗರ ಮಾರೇನಹಳ್ಳಿ 20ನೇ ಮೇನ್, ಗೊರಗುಂಟೆಗುಂಟೆ ಪಾಳ್ಯ, ಕೃಷ್ಣಾನಂದನಗರ, ಶಂಕರ ನಗರ, ಸುಬ್ರಹ್ಮಣ್ಯನಗರ, ಗಾಯತ್ರಿನಗರ, ಪ್ರಕಾಶನಗರ, ನಂದಿನಿ ಲೇಔಟ್, ಗಣೇಶ ಬ್ಲಾಕ್, ಕೆಎಚ್‌ಬಿ ಕಾರ್ಟರ್ಸ್, ಹೌಸಿಂಗ್ ಬೋರ್ಡ್‌ ಕಾರ್ಪೋರೇಷನ್ ಕಾಲೋನಿ, ತಿಮ್ಮನಹಳ್ಳಿ, ಎಂ.ಸಿ.ಲೇಔಟ್, ಮೂಡಲಪಾಳ್ಯ, ಕಮ್ಮಗೊಂಡನ ಹಳ್ಳಿ, ಭುವನೇಶ್ವರಿ ನಗರ ನೀರು ಪೂರೈಕೆ ಇರುವುದಿಲ್ಲ.

ಇನ್ನೂ ಹಗ್ಗನಹಳ್ಳಿ, ಸುಂಕದ ಕಟ್ಟೆ, ಪೈಪ್‌ಲೈನ್ ರಸ್ತೆ, ಶ್ರೀನಿವಾಸನಗರ, ಹೋಯಳನಗರ, ಸಂಜೀವಿನಗರ, ಲಕ್ಷ್ಮಣನಗರ, ಶ್ರೀ ಗಂಧನಗರ, ಮಯೂರನಗರ, ಶಿವಾನಂದ ನಗರ, ಫ್ರೆಂಡ್ಸ್ ಸರ್ಕಲ್, ಎಜಿಪಿ ಲೇಔಟ್, ಚಿಕ್ಕಸಂದ್ರ, ನಾಗಾಪುರ, ಅಗ್ರಹಾರ ದಾಸರಹಳ್ಳಿ, ರಾಜಾಜಿನಗರ ಆನೇ ಬ್ಲಾಕ್, ವೆಸ್ಟ್ ಆಫ್ ಕಾರ್ಡ್ ರೋಡ್, ಇಂದಿರ ನಗರ ಕೊಳಗೇರಿ, ಕೆಎಚ್‌ ಬಿ ಕಾಲೋನಿ, ಮಹಾಗಣಪತಿನಗರ, ಪೀಣ್ಯ ಕೈಗಾರಿಕಾ ಪ್ರದೇಶದಲ್ಲೂ ಶನಿವಾರ ನೀರು ಪೂರೈಕೆ ಮಾಡಲಾಗುವುದಿಲ್ಲ.

ಜೊತೆಗೆ ಜೆಕೆಡನ್ಲ್ಯೂ ಲೇಭಟ್, ಲಕ್ಷ್ಮಿ ದೇವಿನಗರ, ಪಾರ್ವತಿನಗರ, ಪೀಣ್ಯ ಕೈಗಾರಿಕಾ ಪ್ರದೇಶ, ಚೊಕ್ಕಸಂದ್ರ, ಎಚ್‌ ಎಂಟಿ ಲೇಔಟ್‌, ಗೃಹಲಕ್ಷ್ಮಿ ಲೇಔಟ್, ಪೀಣ್ಯ ಮೊದಲನೇ ಹಂತ, ಪೀಣ್ಯ ವಿಲೇಜ್, ಲೇಔಟ್, ಬಾಗಲಗುಂಟೆ, ಮಲ್ಲಸಂದ್ರ, ದಾಸರಹಳ್ಳಿ, ರಾಮಯ್ಯ ಲೇಔಟ್, ಪ್ರಶಾಂತನಗರ, ಕಿರ್ಲೋಸ್ಕರ್ ಲೇಔಟ್, ಸೌಂದರ್ಯ ಲೇಔಟ್, ಸಿದ್ದೇಶ್ವರ ಲೇಔಟ್, ಕೆ.ಪಿ.ಅಗ್ರಹಾರ, ಚೆನ್ನಪ್ಪ ಗಾರ್ಡನ್, ಗಾಣಪ್ಪ ಲೇಔಟ್‌, ಮಂಜುನಾಥನಗರ, ಶಿವನಹಳ್ಳಿ ಪ್ರದೇಶಗಳಲ್ಲಿ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ.

Water supply cut to most areas in bengaluru on september 21st

ಅಲ್ಲದೆ ಕಾಮಾಕ್ಷಿಪಾಳ್ಯ, ರಾಗಿನಗರ, ಮಾರುತಿ ಮಂದಿರ, ಶಿವಾನಂದ ನಗರ, ಕೋಮಲನಗರ, ಶಕ್ತಿಗಣಪತಿ ನಗರ, ಬಿಎಚ್‌ ಇಎಲ್ ಲೌಔಟ್, ಕನ್ನಹಳ್ಳಿ, ಐಡಿಎಲ್ ಹೋಮ್ ಟೌನ್‌ಶಿಪ್, ಮಲ್ಲಸಂದ್ರ, ರವೀಂದ್ರ ನಗರ, ಸಂತೋಷ ನಗರ, ಬಿಎಚ್‌ಇಎಲ್ ಕಾಲೋನಿ, ಬಾಬಣ್ಣ ಲೇಔಟ್‌, ಕಲ್ಯಾಣ ನಗರ, ಶನಿಮಹಾತ್ಮ ದೇವಸ್ಥಾನ, ಹಾವ ನೂರು ಲೇಔಟ್, ಡಿಫೆನ್ ಕಾಲೋನಿ, ಶಂಕ್ರಪ್ಪ ಗಾರ್ಡನ್, ಗೋಪಾಲಪುರ, ಕಾವೇರಿಪುರ, ಶಿವಪುರ, ಕೋಡಿವಾಳ, ವಿಜಯ ಲೇಔಟ್, ಭುವನೇಶ್ವರನಗರ, ಜ್ಞಾನ ಭಾರತಿ, ದುಬಾಸಿಪಾಳ್ಯ, ಅನ್ನಪೂರ್ಣೇಶ್ವರಿನಗರ, ಜ್ಞಾನ ಗಂಗಿನಗರ, ರೈಲ್ವೆ ಲೇಔಟ್ ನಲ್ಲೂ ಶನಿವಾರ ನೀರು ಪೂರೈಕೆ ಇರುವುದಿಲ್ಲ.

ನಗರದ ಎಂಪಿಎಂ ಲೇಔಟ್, ಮಲ್ಲತ್ತಹಳ್ಳಿ, ಪಾಪರೆಡ್ಡಿಪಾಳ್ಯ, ಐಪಿಎ ಲೇಔಟ್, ನಾಗರಬಾವಿ, ಎನ್‌ ಜಿಇಎಫ್, ಟಲಿಕಾಂ ಲೇಔಟ್, ನೆಲಗದರನಹಳ್ಳಿ ಐಪಿನಗರ, ದೊಡ್ಡಣ್ಣ ಕೈಗಾರಿಕಾ ಪ್ರದೇಶ, ರಾಮಯ್ಯ ಲೇಔಟ್, ಜೈಭುವನೇಶ್ವರಿನಗರ, ಸಂಜಯ್ ಗಾಂಧಿ ನಗರ, ರಂಗನಾಥಪುರ, ಬಿಡಿಎ ಲೇಔಟ್‌, ರಾಜೀವ್ ಗಾಂಧಿ ಕೊಳಚೆ ಪ್ರದೇಶ, ಮುನೇಶ್ವರ ನಗರ, ಮೂಡಲ ಪಾಳ್ಯ, ಎಂಟಿ ಲೇಔಟ್, ಮಾರೇನಹಳ್ಳಿ, ಜಿಕೆಡಬ್ಲ್ಯೂ ಲೇಔಟ್, ವಿನಾಯಕ ಲೇಔಟ್, ವಿಶ್ವಭಾರತಿ ನಗರ, ಮೈಲಾಸಂದ್ರ, ಕೆಂಗೇರಿ, ಕೆಂಗೇರಿ ಸ್ಯಾಟಲೈಟ್ ಟೌನ್, ಬಂಡೇ ಮಠ, ಕೆಂಗೇರಿ ಪೋರ್ಟ್, ಸ್ವಾತಿ ಲೇಔಟ್ ಪ್ರದೇಶದಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+