Water Crisis: ತಿಂಗಳಿಂದ ಬೋರ್‌ವೆಲ್ ಕೊರೆಯುವಲ್ಲಿ ಶೇ.90 ರಷ್ಟು ಯಶಸ್ಸು
ಬೆಂಗಳೂರು, ಏಪ್ರಿಲ್ 16: ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (BWSSB) ಸವಾಲು ಎದುರಿಸಲು ಒಂದು ತಿಂಗಳಿನಿಂದ ಬೋರ್‌ವೆಲ್ ಕೊರೆಯಲು ಶುರು ಮಾಡಿದೆ. ಇದರಲ್ಲಿ ಶೇಕಡಾ 90ರಷ್ಟು ಯಶಸ್ಸು ಸಾಧನೆ ಆಗಿದೆ.
ಹೌದು, ಬೆಂಗಳೂರಿನ ನೀರಿನ ಬವಣೆ ನೀಗಿಲು ಕಳೆದ ಒಂದು ತಿಂಗಳಿನಿಂದ BWSSB ಸುಮಾರು 105 ಬೋರ್‌ವೆಲ್ ಕೊರೆಸಿದೆ. ಇದರಲ್ಲಿ ಅಂತರ್ಜಲ ಕುಸಿದಿದ್ದರೂ ಸಹ ಕೊರೆಸಿದ ಎಲ್ಲ ಬೋರ್‌ವೆಲ್‌ಗಳ ಪೈಕಿ ಸುಮಾರು 90 ರಷ್ಟು ಬೋರ್‌ವೆಲ್‌ನಲ್ಲಿ ಯಶಸ್ವಿಯಾಗಿ ಕೊರೆಯಲಾಗಿದೆ.

ಬೋರ್‌ವೆಲ್ ಕೊರೆಯಲು ಜಾಗ ಪತ್ತೆ ನೀರ್ಣಾಯಕ
ಸೂಕ್ತ ಸ್ಥಳ, ಅನ್ವೇಷಣೆ ಸಹಾಯದಿಂದ ಜಲಮಂಡಳಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಜಲಮಂಡಳಿ ಅಧಿಕಾರಿಗಳ ಮನವಿ ಮೇರೆಗೆ ಸರ್ಕಾರದಿಂದ ಮೂವರು ಭೂವಿಜ್ಞಾನಿಗಳನ್ನು ಬೋರ್ ಕೊರೆಯಲು ನಿಯೋಜಿಸಲಾಯಿತು. ಈ ಭೂವಿಜ್ಞಾನಿಗಳು ವಿವಿಧ ಪ್ರದೇಶಗಳಲ್ಲಿ ಬೋರ್‌ವೆಲ್ ಕೊರೆಯಲು ಸೂಕ್ತ ಜಾಗ ಯಾವುದೆಂದು ಪತ್ತೆ ಮಾಡಿದ್ದು, ಮೊದಲ ಸಾಧನೆ ಆಗಿತ್ತು.
ಯಾರೇ ಆಗಲಿ ಬೋರ್‌ವೆಲ್‌ಗಳು ಯಶಸ್ವಿಯಾಗಿ ಕೊರೆಸಲು ಸ್ಥಳ ಗುರುತಿಸುವುದು ಮುಖ್ಯವಾಗಿರುತ್ತದೆ. ಆದ್ದರಿಂದ, ಭೂವಿಜ್ಞಾನಿಗಳು ನಗರದಾದ್ಯಂತ ಬೋರ್‌ವೆಲ್ ಕೊರೆಯಲು ನಮಗೆ ಮಾರ್ಗದರ್ಶನ ನೀಡಿದರು ಎಂದು ಜಲಮಂಡಳಿ ಅಧ್ಯಕ್ಷ ಡಾ ರಾಮಪ್ರಸಾತ್ ಮನೋಹರ್ ಮಾಡಿ ನೀಡಿದರು ಎಂದು 'ಡಿಎಚ್' ವರದಿ ಮಾಡಿದೆ.

ನೀರನ ಸಮಸ್ಯೆಯ ವಾರ್ಡ್‌ಗೆ ಭೇಟಿ
ಜಲಮಂಡಳಿ ಮೊದಲು ನೀರಿನ ಕೊರತೆ ಇರುವ ಪ್ರತಿ ವಾರ್ಡ್‌ಗೆ ಭೇಟಿ ಕೊಟ್ಟು ಅಲ್ಲಿನ ಸ್ಥಿತಿ ಪರಿಶೀಲಿಸಿದೆ. ಇದರೊಂದಿಗೆ ಅಲ್ಲಿನ ಅಸ್ತಿತ್ವದಲ್ಲಿರುವ ಬೋರ್‌ವೆಲ್‌ಗಳ ಸ್ಥಿತಿ ಮತ್ತು ನೀರಿನ ಮಟ್ಟವನ್ನು ಪರಿಶೀಲಿಸಿದ್ದೇವೆ. ಜೊತೆಗೆ ಇಲ್ಲಿ ಎಲ್ಲಿ ಬೋರ್‌ವೆಲ್ ಕೊರೆಸಿದರೆ ಉತ್ತಮ ಎಂದು ಅಧ್ಯಯನ ಮಾಡಿ ಕೊರೆಸಿದ್ದೇವೆ.
ಬೋರ್‌ವೆಲ್ ಗಾಗಿ ಕಲ್ಲಿನ ಮತ್ತು ಇಳಿಜಾರಿನ ಭೂಪ್ರದೇಶಗಳನ್ನು ತಪ್ಪಿಸಿದ್ದೇವೆ. ಕಾಲುವೆಗಳು ಅಥವಾ ಸರೋವರದಂತಹ ಸ್ಥಳಗಳನ್ನು ಗುರುತಿಸಿದ್ದೇವೆ. ಒಟ್ಟಾರೆ ಬೋರ್‌ವೆಲ್ ಕೊರೆಸುವ ಕಾರ್ಯಕದಲ್ಲಿ ವೈಜ್ಞಾನಿಕ ಮಾರ್ಗದರ್ಶನವು ನಿರ್ಣಾಯಕವಾಗಿದೆ ಎಂದು ಜಲಮಂಡಳಿ ಹಿರಿಯ ಅಧಿಕಾರಿಗಳೊಬ್ಬರು ಮಾಹಿತಿ ನೀಡಿದರು.
240 ಬೋರ್‌ವೆಲ್ ಕೊರೆಯಲು ನಿರ್ಧಾರ
ಬೆಂಗಳೂರಿನಲ್ಲಿ ಅಂತರ್ಜಲ ಮಟ್ಟ ಕುಸಿದಿರುವುದರಿಂದ ಬೋರ್‌ವೆಲ್‌ಗಳು ಬತ್ತಿ ಹೋಗಿವೆ. ಮಳೆ ಬಾರದ್ದರಿಂದ ಕೆರೆ, ನದಿಗಳಲ್ಲಿ ನೀರಿಲ್ಲದಾಗಿದೆ. ಹೀಗಾಗಿ ನೀರಿನ ಬವಣೆ ಉಂಟಾಗಿದೆ. ಹೀಗಾಗಿ ನೀರು ಸಿಗುವಿಕೆ ಪ್ರಮಾಣ ಕಡಿಮೆ ಇರುವ ಕಾರಣ ಸಾಕಷ್ಟು ಬೋರ್‌ವೆಲ್ ಕೊರೆಯುವಲ್ಲಿ ನಾವು ಭೂ ವಿಜ್ಞಾನಿಗಳ ಸಲಹೆ ಪಡೆದಿದ್ದೇವೆ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದರು.
ಮುಂದಿನ ದಿನಗಳಲ್ಲಿ ಜಲಮಂಡಳಿಯು ಕನಿಷ್ಠ 240 ಬೋರ್‌ವೆಲ್‌ಗಳನ್ನು ಕೊರೆಯಲು ಹಾಗೂ ಅವುಗಳಲ್ಲಿ 120 ಅನ್ನು ಪುನಶ್ಚೇತನಗೊಳಿಸಲು ಚಿಂತನೆ ನಡೆಸಿದೆ.












Click it and Unblock the Notifications