ರಾಜ್ಯ ಕಾಂಗ್ರೆಸ್ ನಾಯಕರನ್ನು ಹಿಗ್ಗಾಮುಗ್ಗ ಜಾಡಿಸಿದ ವಿಶ್ವನಾಥ್

ಬೆಂಗಳೂರು, ಆಗಸ್ಟ್ 23: ಅನರ್ಹ ಶಾಸಕ ವಿಶ್ವನಾಥ್ ಕಾಂಗ್ರೆಸ್ ನಾಯಕರ ವಿರುದ್ಧ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ್ದಾರೆ. ಅವಾಚ್ಯ ಶಬ್ದ ಬಳಸಿ ಕೈ ಮುಖಂಡರನ್ನು ಹರಿಹಾಯ್ದಿದ್ದಾರೆ.

ಗುರುವಾರ ನವದೆಹಲಿಯ ಕರ್ನಾಟಕ ಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತೆಯರ ಪ್ರಶ್ನೆಗೆ ವಿಶ್ವನಾಥ್ ಉತ್ತರಿಸುವ ವೇಳೆ, ಕಾಂಗ್ರೆಸ್ ನಾಯಕರು ಅಯೋಗ್ಯರು ಎಂಬ ಪದದ ಜೊತೆಗೆ ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತೆಯರು ನಿನ್ನೆ ವಿಶ್ವನಾಥ್ ಅವರಿಗೆ, "ಕಾಂಗ್ರೆಸ್ ಪಕ್ಷವನ್ನು ತಾಯಿ ಎಂದಿದ್ದಿರಿ. ನೀವೇ ಪಕ್ಷವನ್ನು ಬಿಟ್ಟು ಹೋದಿರಲ್ಲಾ" ಎಂದು ಕೇಳಿದ್ದಾರೆ. ಇದೇ ವೇಳೆ ವಿಶ್ವನಾಥ್, "ಕಾಂಗ್ರೆಸ್ ಉತ್ತಮ ಪಕ್ಷವೇ. ಆದರೆ ಪಕ್ಷದ ರಾಜ್ಯ ನಾಯಕರು ಅಯೋಗ್ಯರು" ಎಂದಿದ್ದಾರೆ.

Vishwanath scolded Karnataka congress party leaders in dirty words

ವಿಶ್ವನಾಥ್ ಅವರನ್ನು ಯಾಕಾದರೂ ಪ್ರಶ್ನಿಸಿದೆವೋ ಎಂದು ಕಾರ್ಯಕರ್ತೆಯರು ಪೇಚಿಗೆ ಸಿಲುಕಿದರು. ಇದಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಶಾಸಕ ಸ್ಥಾನದಿಂದ ನಮ್ಮನ್ನು ಅನರ್ಹಗೊಳಿಸಿದ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿದೆ. ಹಾಗಾಗಿ ದೆಹಲಿಗೆ ಬಂದಿದ್ದೇವೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭೇಟಿಗೂ ಸಮಯ ಕೇಳಿದ್ದೇವೆ. ರಾಜ್ಯದ ಪ್ರವಾಹ ಹಾನಿ ಕುರಿತಾಗಿ ಪರಿಹಾರ ನೀಡುವಂತೆ ಮನವಿ ಮಾಡುತ್ತೇವೆ" ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+