ವಿಷ್ಣು ಸ್ಮಾರಕ: ಶಾಸಕ ಮುನಿರತ್ನ ಸಂಧಾನ ಯತ್ನ ವಿಫಲ
Recommended Video

ಬೆಂಗಳೂರು, ನವೆಂಬರ್ 29: ಮೈಸೂರಿನಲ್ಲೇ ವಿಷ್ಣುವರ್ಧನ್ ಅವರ ಸ್ಮಾರಕ ಮಾಡಬೇಕು ಎಂದು ವಿಷ್ಣು ಕುಟುಂಬ ಸದಸ್ಯರು ಇಂದು ಶಾಸಕ ಮುನಿರತ್ನ ಅವರಿಗೆ ತಮ್ಮ ನಿಲವು ತಿಳಿಸಿದ್ದಾರೆ.
ಶಾಸಕ ಮುನಿರತ್ನ ಅವರು ಇಂದು ವಿಷ್ಣುವರ್ಧನ್ ಅವರ ಕುಟುಂಬ ಸದಸ್ಯರನ್ನು ಭೇಟಿಯಾಗಿ ವಿಷ್ಣು ಸ್ಮಾರಕದ ಬಗ್ಗೆ ಮಾತನಾಡಿದರು. ಕಂಠೀರವ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಅವರ ಮನವೊಲಿಸುವ ಯತ್ನ ಮಾಡಿದರು ಆದರೆ ಅದು ಫಲ ನೀಡಿಲ್ಲ.
ಈಗಾಗಲೇ ಹಲವು ಜಾಗಗಳನ್ನು ತೋರಿಸಿದ್ದರೂ ಸರ್ಕಾರಗಳು ವಿಷ್ಣು ಸ್ಮಾರಕ ನಿರ್ಮಿಸಿಲ್ಲ. ಈಗ ಕಂಠೀರವ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಾಣಕ್ಕೆ ಕೇಳಲಾಗುತ್ತಿದೆ. ಇದಕ್ಕೆ ನಮ್ಮ ಒಪ್ಪಿಗೆ ಇಲ್ಲ ಎಂದು ಭಾರತಿ ವಿಷ್ಣುವರ್ಧನ್ ಅವರು ಹೇಳಿದ್ದಾರೆ.

ಶಾಸಕ ಮುನಿರತ್ನ, ನಿರ್ಮಾಪಕ ಕೊಬ್ರಿ ಮಂಜು ಅವರುಗಳು ಇಂದು ಭಾರತಿ ವಿಷ್ಣುವರ್ಧನ್, ಕೀರ್ತಿ ಅನಿರರುದ್ಧ ಮತ್ತು ಅನಿರುದ್ಧ ಅವರ ಬಳಿ ಇಂದು ಚರ್ಚೆ ಮಾಡಿದರು.
ಶಾಸಕ ಮುನಿರತ್ನ ಅವರ ಬಳಿ ಭಾರತಿ ವಿಷ್ಣುವರ್ಧನ್ ಅವರು ಕುಮಾರಸ್ವಾಮಿ ಅವರಿಗೆ ಮತ್ತೊಂದು ಮನವಿ ಪತ್ರವನ್ನು ನೀಡಿದ್ದು, ಅದನ್ನು ಸಿಎಂಗೆ ತಲುಪಿಸಲಾಗುವುದು ಎಂದು ಶಾಸಕ ಮುನಿರತ್ನ ಹೇಳಿದ್ದಾರೆ.
ಈಗಾಗಲೇ ಮೈಸೂರಿನಲ್ಲಿ ಗುದ್ದಲಿ ಪೂಜೆ ಮುಗಿದಿದೆ. ಅಲ್ಲಿ ಕೆಲವು ಕಾನೂನು ಸಮಸ್ಯೆಗಳು ಬಂದವು ಅದನ್ನೆಲ್ಲಾ ಪೂರೈಸಲಾಗಿದೆ. ಈಗ ಮತ್ತೆ ಕಂಠೀರವ ಸ್ಟುಡಿಯೋದಲ್ಲಿ ಮಾಡುತ್ತೇವೆ ಎಂದರೆ ನಾವು ಒಪ್ಪುವುದಿಲ್ಲ ಎಂದು ಭಾರತಿ ವಿಷ್ಣುವರ್ಧನ್ ಇದೇ ಸಮಯದಲ್ಲಿ ತಿಳಿಸಿದ್ದಾರೆ.












Click it and Unblock the Notifications