• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

Viral Video: ಏರೋ ಇಂಡಿಯಾದಲ್ಲಿ ಧಗಧಗಿಸಿದ ಕಾರುಗಳು

|

ಬೆಂಗಳೂರು, ಫೆಬ್ರವರಿ 23: ಬೆಂಗಳೂರಿನಲ್ಲಿ ನಡೆಯುತ್ತಿರುವ ಏರ್ ಶೋದ ಪಾರ್ಕಿಂಗ್ ಲಾಟ್ ನಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ 50 ಕ್ಕೂ ಹೆಚ್ಚು ಕಾರುಗಳು ಧಗಧಗನೇ ದಹಿಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರ್ ಶೋಕ್ಕೆ ಈ ಬಾರಿ ಯಾಕೋ ಮುಹೂರ್ತ ಸರಿ ಇದ್ದಂತಿಲ್ಲ!

ಏರೋ ಇಂಡಿಯಾ: ಇಂದು, ನಾಳೆ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ

ಏರ್ ಶೋಕ್ಕೆ ಒಂದು ದಿನ ಬಾಕಿ ಇರುವಾಗ ತಾಲೀಮು ನಡೆಸುತ್ತಿದ್ದ ಸೂರ್ಯಕಿರಣ್ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಪೈಲಟ್ ಮೃತರಾಗಿದ್ದರು. ಹೀಗೆ ಆರಂಭಿಕ ವಿಘ್ನ ಎದುರಿಸಿದ್ದ ಏರ್ ಶೋಗೆ ಇದೀಗ ಮತ್ತೊಮ್ಮೆ ವಿಘ್ನ ಎದುರಾಗಿದೆ.

ಗೇಟ್ ನಂಬರ್ 5ರ ಬಳಿ ವಾಹನ ನಿಲುಗಡೆ ಮಾಡಿದ್ದ ಜಾಗದಲ್ಲಿ ಅಗ್ನಿ ಕಾಣಿಸಿಕೊಂಡು ವಾಹನಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ.

ಏರೋ ಇಂಡಿಯಾದಲ್ಲಿ ಅಗ್ನಿ ಅವಘಡ: 20ಕ್ಕೂ ಹೆಚ್ಚು ಕಾರುಗಳು ಸುಟ್ಟು ಭಸ್ಮ

ಫೆಬ್ರವರಿ 20 ರಿಂದ ಆರಂಭವಾಗಿರುವ ಏರ್ ಶೋ ಫೆ. 24 ರಂದು ಮುಕ್ತಾಯವಾಗಲಿದ್ದು, ಫೆ.23-24 ರಂದು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು. ವಾರಾಂತ್ಯವೂ ಆಗಿದ್ದರಿಂದ ಮತ್ತು ಸಾರ್ವಜನಿಕ ವೀಕ್ಷಣೆಗೆ ಅವಕಾಶ ಇದ್ದಿದ್ದರಿಂದ ಕೊಂಚ ಹೆಚ್ಚೇ ಜನ ಏರ್ ಶೋಗೆ ಆಗಮಿಸಿದ್ದರು. ಘಟನೆ ಹಿನ್ನೆಲೆಯಲ್ಲಿ ಏರ್ ಶೋವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಫೈರ್ ಡಿಪಾರ್ಟ್ಮೆಂಟ್ ಟ್ವೀಟ್

ಸುಮಾರು 300 ಕ್ಕೂ ಹೆಚ್ಚು ಕಾರುಗಳು ಭಸ್ಮವಾದ ಈ ದುರಂತ ಘಟನೆಯ ವಿಡಿಯೋವನ್ನು ಕರ್ನಾಟಕ ಫೈರ್ ಡಿಪಾರ್ಟ್ಮೆಂಟ್ ಟ್ವೀಟ್ ಮಾಡಿದೆ.

ಏರೋ ಇಂಡಿಯಾ : ಅಗ್ನಿಯ ಆಕ್ರೋಶಕ್ಕೆ ಬಲಿಯಾದ ವಾಹನಗಳೆಷ್ಟು?

ಎಂಥ ದುರಂತ!

ದುರಂತ ಘಟನೆ!

ಇಂಥ ದೊಡ್ಡ ಕಾರ್ಯಕ್ರಮ ಆಯೋಜಿಸುವಾಗ ಸಾರ್ವಜನಿಕ ಭದ್ರತೆ ಅತ್ಯಂತ ಮುಖ್ಯ. ಇಂಥ ಘಟನೆಯ ಹೊಣೆ ಹೊತ್ತುಕೊಳ್ಳುವವರು ಯಾರು? ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಇದು ಸಿಗರೇಟ್ ನಿಂದ ಎದ್ದ ಕಿಡಿಯಿಂದ ಆದ ಘಟನೆ ಎಂದು ಪ್ರಜ್ಯೋತ್ ಮಿಶ್ರಾ ಟ್ವೀಟ್ ಮಾಡಿದ್ದಾರೆ

ಬೆಂಕಿಯಲ್ಲಿ ಭಸ್ಮವಾದ ಕಾರುಗಳು: ಮಾಲೀಕರಿಗೆ ವಿಮಾ ಮೊತ್ತ ಸಿಗುತ್ತಾ?

ಯಾರನ್ನು ತೆಗಳುವುದು?

ಇದು ಅತ್ಯಂತ ದುಃಖದ ವಿಷಯ. ಅತ್ಯಂತ ದುರದೃಷ್ಟಕರ ಘಟನೆ. ಇದಕ್ಕಾಗಿ ಯಾರನ್ನು ತೆಗಳುವುದು ಎಂದು ನಟ್ಟಿ ವರ್ಡ್ ಸ್ಮಿತ್ ಟ್ವೀಟ್ ಮಾಡಿದ್ದಾರೆ.

ಭದ್ರತೆಯ ಲೋಪ

ಕರ್ನಾಟಕ ಸರ್ಕಾರದ ಸರಿಯಾದ ಭದ್ರತೆ ನೀಡದ ಕಾರಣಕ್ಕೆ ಇಂಥ ಘಟನೆ ನಡೆಯುತ್ತಿದೆ ಎಂದಿದ್ದಾರೆ ಸಂದೇಶ್.

English summary
Bengaluru Aero India: Fire at parking lot, away from exhibition and air display area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X