Viral Video: ಬೆಂಗಳೂರಿನಲ್ಲೇ ಕನ್ನಡ ರಾಜ್ಯೋತ್ಸವಕ್ಕೆ ಅಡ್ಡಿಪಡಿಸಿದ ನಾರ್ಥಿ: ಇಲ್ಲಿದೆ ವೈರಲ್ ವಿಡಿಯೋ! Kannada Rajyotsava
Kannada Rajyotsava: ಬೆಂಗಳೂರಿನ ವಿವಿಧ ಭಾಗದಲ್ಲಿ ಕನ್ನಡ ರಾಜ್ಯೋತ್ಸವ ಅದ್ಧೂರಿಯಿಂದ ನಡೆಯುತ್ತಿದೆ. ಬೆಂಗಳೂರು ಹಾಗೂ ಕರ್ನಾಟಕದಲ್ಲಿ ನವೆಂಬರ್ 1ರಂದು ಮಾತ್ರವಲ್ಲ ನವೆಂಬರ್ ತಿಂಗಳು ಪೂರ್ತಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ಆದರೆ ನಾರ್ಥಿಯೊಬ್ಬರು ಬೆಂಗಳೂರಿನಲ್ಲೇ ಕನ್ನಡ ರಾಜ್ಯೋತ್ಸವ ಆಚರಣೆಗೆ ಅಡ್ಡಿಪಡಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು. ಈ ಘಟನೆಗೆ ಕನ್ನಡಪರ ಸಂಘಟನೆಗಳು ಆಕ್ರೋಶ ಹೊರ ಹಾಕಿವೆ. ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಕೆಲವು ವಲಸಿಗರ ಹಾವಳಿ ಹೆಚ್ಚಾಗಿದೆ ಎನ್ನುವ ಚರ್ಚೆ ನಡೆಯುತ್ತಿರುವಾಗಲೇ ಈ ಘಟನೆ ನಡೆದಿದೆ.
ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಕೆಲವು ವಲಸಿಗರು ಉದ್ದೇಶಪೂರ್ಕವಾಗಿ ಸಮಸ್ಯೆ ಮಾಡುತ್ತಿದ್ದಾರೆ. ಅಲ್ಲದೇ ಭಾಷಾ ವಿವಾದವನ್ನು ಸೃಷ್ಟಿ ಮಾಡುತ್ತಿದ್ದಾರೆ ಎನ್ನುವ ಗಂಭೀರವಾದ ಆರೋಪಗಳು ಕೇಳಿ ಬರುತ್ತಿವೆ. ಈ ರೀತಿ ಇರುವಾಗವೇ ಬೆಂಗಳೂರಿನಲ್ಲೇ ಕನ್ನಡ ರಾಜ್ಯೋತ್ಸವ ಆಚರಣೆಗೆ ಹಿನ್ನಡೆ ಆಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಕನಕಪುರ ರಸ್ತೆಯಲ್ಲಿರುವ ಪ್ರಮುಖ ಅಪಾರ್ಟ್ಮೆಂಟ್‌ವೊಂದರಲ್ಲಿ ಕನ್ನಡಿಗರು ಕಳೆದ 9 ವರ್ಷಗಳಿಂದಲೂ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಆದರೆ, ಇದೀಗ ಈ ಅಪಾರ್ಟ್ಮೆಂಟ್ ಅಸೋಸಿಯೇಷನ್‌ನ ಅಧ್ಯಕ್ಷ ನಾರ್ಥಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಅಡ್ಡಿಪಡಿಸಿದ್ದಾನೆ ಎನ್ನುವ ಗಂಭೀರವಾದ ಆರೋಪ ಕೇಳಿ ಬಂದಿದೆ.
ಕನ್ನಡ ರಾಜ್ಯೋತ್ಸವವನ್ನು ಸತತ 9 ವರ್ಷ ಗಳಿಂದ ಮಾಡುತ್ತಾ ಬಂದಿದ್ದ ಅದೇ ಜಾಗದಲ್ಲಿ ಈ ಬಾರಿ ಕನ್ನಡ ರಾಜ್ಯೋತ್ಸವ ಮಾಡಲು ಬಿಡದೆ ಕನ್ನಡ ದ್ರೋಹಿತನ ತೋರಿದೆ....
— ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥 (@VKkarthik169) November 6, 2025
ಇಂದು ಈ ಅಪಾರ್ಟ್ಮೆಂಟ್ ನಲ್ಲಿ ಬೃಹತ್ ಹೋರಾಟ ಹಾಗೂ ಅದೇ ಜಾಗದಲ್ಲಿ ರಾಜ್ಯೋತ್ಸವ ಮಾಡಲು ಒತ್ತಾಯ..
ಅಸೋಸಿಯೇಸನ್ ಅಧ್ಯಕ್ಷ ಒಬ್ಬ ನಾರ್ತಿ ಹಾಗೂ ಅವನ ಚೇಲಾಗಳ ದುರಹಂಕಾರಕ್ಕೆ… pic.twitter.com/krnWP74Znj
ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಕನ್ನಡಪರ ಹೋರಾಟಗಾರ ಕಾರ್ತಿಕ್ ವೆಂಕಟೇಶ್ ಅವರು, ಕನ್ನಡ ರಾಜ್ಯೋತ್ಸವವನ್ನು ಸತತ 9 ವರ್ಷಗಳಿಂದ ಮಾಡುತ್ತಾ ಬಂದಿದ್ದು, ಅದೇ ಜಾಗದಲ್ಲಿ ಈ ಬಾರಿ ಕನ್ನಡ ರಾಜ್ಯೋತ್ಸವ ಮಾಡಲು ಬಿಡದೆ ಕನ್ನಡ ದ್ರೋಹಿತನ ತೋರಲಾಗಿದೆ. ಈ ಅಪಾರ್ಟ್ಮೆಂಟ್ ನಲ್ಲಿ ಬೃಹತ್ ಹೋರಾಟ ಹಾಗೂ ಅದೇ ಜಾಗದಲ್ಲಿ ರಾಜ್ಯೋತ್ಸವ ಮಾಡಲು ಒತ್ತಾಯ. ಅಸೋಸಿಯೇಸನ್ ಅಧ್ಯಕ್ಷ ಒಬ್ಬ ನಾರ್ಥಿ ಹಾಗೂ ಅವನ ಚೇಲಾಗಳ ದುರಹಂಕಾರಕ್ಕೆ ಬಲಿಯಾದ ಕನ್ನಡಿಗರ ಸ್ವಾಭಿಮಾನ. 1ನೇ ತಾರೀಕು ಮಾಡಲು ಬಿಟ್ಟಿಲ್ಲಾ ಸ್ಥಳೀಯ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಅದೇಗೆ ಮಾಡುತ್ತೀರಿ ಅನ್ನೋ ರೀತಿ ಧೋರಣೆ ಇದೆ ಎಂದು ಅವರು ದೂರಿದ್ದಾರೆ.
ನಾಳೆ 3.30ಕ್ಕೆ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರ ನೇತೃತ್ವದಲ್ಲಿ ಬೃಹತ್ ಹೋರಾಟ ಯುವಕರ್ನಾಟಕವೇದಿಕೆ ವತಿಯಿಂದ ನೂರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳಿ ಕನಕಪುರ ರಸ್ತೆಯಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications