Bengaluru: ವಲಸಿಗರಿಗೆ ಚೆನ್ನಾಗಿ ಬದುಕಬಹುದಾದ ಏಕೈಕ ಸ್ಥಳ ಬೆಂಗಳೂರು: ಇಲ್ಲಿದೆ ವೈರಲ್ ವಿಡಿಯೋ!

ಬೆಂಗಳೂರು ಹಾಗೂ ಕರ್ನಾಟಕದಲ್ಲಿ ದೇಶದ ಯಾವುದೇ ಮೂಲೆಯಿಂದ ಜನ ಬಂದರೂ ಅವರಿಗೆ ಅನುಕೂಲವಾಗುವಂತೆ ಸ್ಥಳೀಯ ಭಾಷೆಯೊಂದಿಗೆ ಇಂಗ್ಲಿಷ್ ಭಾಷೆಯನ್ನೂ ಬಳಸಲಾಗುತ್ತದೆ. ಆದರೆ, ನೆರೆಯ ಮಹಾರಾಷ್ಟ್ರದಲ್ಲಿ ಕೇವಲ ಮರಾಠಿ ಭಾಷೆ ಬಳಕೆ ಮಾಡಿದ್ದು, ಮರಾಠಿಗರ ಭಾಷಾಭಿಮಾನ ಹೇಗಿದೆ ಎನ್ನುವುದನ್ನು ಕನ್ನಡಿಗರೊಬ್ಬರು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಬೆಂಗಳೂರು ಮತ್ತು ಕರ್ನಾಟಕದ ಬಸ್ ಹಾಗೂ ಮೆಟ್ರೋ ಸೇರಿದಂತೆ ಸಾರ್ವಜನಿಕ ಸಾರಿಗೆಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯನ್ನು ಪ್ರಧಾನವಾಗಿ ಬಳಕೆ ಮಾಡಲಾಗುತ್ತಿದೆ. ಆದರೆ ಕರ್ನಾಟಕದ ನೆರೆಯ ರಾಜ್ಯಗಳಲ್ಲಿ ಕೇವಲ ಅಲ್ಲಿನ ಸ್ಥಳೀಯ ಭಾಷೆಗಳನ್ನು ಮಾತ್ರ ಬಳಕೆ ಮಾಡಲಾಗುತ್ತಿದೆ. ನೆರೆಯ ರಾಜ್ಯದವರ ಭಾಷಾಭಿಮಾನ ನಮ್ಮವರಲ್ಲೂ ಇರಬೇಕಿತ್ತು ಎಂದು ವೈರಲ್ ವಿಡಿಯೋದಲ್ಲಿ ಕನ್ನಡಿಗರು ಹೇಳಿದ್ದಾರೆ.

Viral Video Claims Bengaluru the Only City Where Immigrants Can Truly Thrive

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಸಹ ಈ ವಿಡಿಯೋವನ್ನು ಹಂಚಿಕೊಂಡಿದ್ದು. ಬೇರೆ ರಾಜ್ಯಗಳಿಗೆ ನಾವು ಹೋದರೆ ಅಲ್ಲಿಯ ಭಾಷೆ ಯಾಕೆ ಕಲ್ತೆ ಕಲಿತೆವೆಂದರೆ, ಅನಿವಾರ್ಯತೆ ಆ ರೀತಿಯಲ್ಲಿ ಸೃಷ್ಟಿ ಮಾಡ್ತಾರೆ, ಯಾರು ಸ್ವಾಭಿಮಾನಿಗಳು ಯೋಚನೆ ಮಾಡಿ ಮಹಾನ್ ಕನ್ನಡಿಗರೇ. ಅನ್ಯ ಭಾಷಿಕರಿಗೆ ತಮ್ಮ ಭಾಷೆ, ತಮ್ಮ ಸಂಸ್ಕೃತಿ, ತಮ್ಮ ತನ ಅವರ ರಾಜ್ಯದಲ್ಲಿ ಚೆನ್ನಾಗಿ ಸಮೃದ್ಧವಾಗಿರಬೇಕು, ಬೆಳೆಯಬೇಕು, ಭದ್ರವಾಗಿರಬೇಕು, ಇಲ್ಲಿ ಬಂದು ಸ್ಪೀಕ್ ಇನ್ ಇಂಗ್ಲಿಷ್ ಆರ್ ಹಿಂದಿ ಹಾಗೂ ಇದಕ್ಕೆ ಬೆಂಬಲಿಸು ರಾಷ್ಟ್ರೀಯ ಕನ್ನಡಿಗರು ಎಂದು ಹೇಳಲಾಗಿದೆ.

ಕರ್ನಾಟಕದಲ್ಲಿ ಕನ್ನಡ ಬಳಸಿ ಅಂತ ಅಂದ್ರೆ ಎಲ್ಲರಿಗೂ ಓಲಾಟಗಾರರು ಅಂತ ಬಿರುದುಕೊಡುವ ಜನ ಜಗತ್ತು ಅಕ್ಕ ಪಕ್ಕದ ರಾಜ್ಯಕ್ಕೆ ಹೋಗಿ ಒಂದು ವಾರ ಇದ್ದು ಬನ್ನಿ.. ಕರ್ನಾಟಕದಲ್ಲಿ ಕನ್ನಡ 60 ಭಾಗ, ಆಂಗ್ಲ ಭಾಷೆ 40 ಭಾಗ ಹಾಕಿ ಅಂದರು ಹಾಕ್ಕುತ್ತಿಲ್ಲ ಆದರೆ ಮಹಾರಾಷ್ಟ್ರದಲ್ಲಿ 20 ನಾಮಫಲಕಗಳಲ್ಲಿ ಒಂದರಲ್ಲಿ ಇಂಗ್ಲಿಷ್ ಸಿಗಬಹುದು ಅಷ್ಟೇ ಮಿಕ್ಕಿದ್ದೆಲ್ಲ ಮರಾಠಿ ಮಯ. ನೋಡಿ ಸಂಪೂರ್ಣ ಮರಾಠಿಯೇ ತುಂಬಿದೆ. ಮರಾಠಿಗರಿಗೂ ಕನ್ನಡಿಗರಿಗೂ ಇರುವ ವ್ಯತ್ಯಾಸ ನೋಡಿ. ವಲಸಿಗರಿಗೆ ಉನ್ನತವಾಗಿ ಬದುಕಬಹುದಾದ ಏಕೈಕ ಸ್ಥಳ ಬೆಂಗಳೂರು ಎಂದು ಹೇಳಲಾಗಿದೆ.

ಸಿಲಿಕಾನ್ ಸಿಟಿ: ಬೆಂಗಳೂರಿನಲ್ಲಿ ದೇಶದ ವಿವಿಧ ರಾಜ್ಯಗಳ ಹಾಗೂ ಹೊರ ದೇಶಗಳ ಜನರೂ ನೆಲೆಸಿದ್ದಾರೆ. ಈ ಕಾರಣಕ್ಕೆ ಕನ್ನಡ ಮತ್ತು ಇಂಗ್ಲಿಷ್ ಬಳಕೆ ಪ್ರಧಾನವಾಗಿದೆ. ಆದರೆ ಕನ್ನಡವನ್ನು ಹೆಚ್ಚು ಬಳಕೆ ಮಾಡಬೇಕು. ಈ ಮೂಲಕ ವಲಸಿಗರು ಕನ್ನಡ ಬಳಕೆ ಮತ್ತು ಕನ್ನಡ ಕಲಿಯುವ ವಾತಾವರಣ ನಿರ್ಮಾಣ ಮಾಡಬೇಕು ಎನ್ನುವ ಆಗ್ರಹ ಹೆಚ್ಚಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+