AI ಯುಗದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ಗಳೇ ಸಾಲ, EMI ಮಾಡಿದರೆ ಕಾದಿದೆ ಕಂಟಕ: ಟೆಕ್ಕಿ ಎಚ್ಚರಿಕೆ

ಕೃತಕ ಬುದ್ಧಿಮತ್ತೆ ಅಥವಾ ಈ ಎಐ ತಂತ್ರಜ್ಞಾನ ಇಂದು ಜಗತ್ತಿನಾದ್ಯಂತ ದೊಡ್ಡ ಸಂಚಲನ ಸೃಷ್ಟಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಐಟಿ ಕ್ಷೇತ್ರವನ್ನ ಎಐ ಬಹುಪಾಲು ಆಳಲು ಶುರುಮಾಡಿದೆ ಎಂದರೂ ತಪ್ಪಿಲ್ಲ. ಇಂತಹ ಬದಲಾವಣೆಯ ಕಾಲಘಟ್ಟದಲ್ಲಿ ಸಾಫ್ಟ್‌ವೇರ್ ವೃತ್ತಿಪರರ ಭವಿಷ್ಯ ಮತ್ತು ಉದ್ಯೋಗ ಭದ್ರತೆಯ ಬಗ್ಗೆ ದೊಡ್ಡ ಪ್ರಶ್ನೆಗಳು ಎದ್ದಿವೆ.

ತಂತ್ರಜ್ಞಾನ ವಲಯದಲ್ಲಿನ ಈ ಅನಿಶ್ಚಿತತೆಯ ನಡುವೆ, ಟೆಕ್ಕಿಯೊಬ್ಬರು ಐಟಿ ಉದ್ಯೋಗಿಗಳಿಗೆ ದೀರ್ಘಾವಧಿಯ ಸಾಲಗಳನ್ನ ಮಾಡಿಕೊಳ್ಳದಂತೆ ಎಚ್ಚರಿಕೆ ನೀಡಿದ್ದಾರೆ. ಸದ್ಯ ತಾವು ಗಳಿಸುತ್ತಿರುವ ಲಕ್ಷ ಲಕ್ಷ ರೂಪಾಯಿಗಳ ಪ್ಯಾಕೇಜ್ ನೋಡಿ 15-20 ವರ್ಷಗಳ ದೀರ್ಘಾವಧಿ ಇಎಂಐ ಸಾಲದ ಸುಳಿಗೆ ಸಿಲುಕಿಕೊಳ್ಳಬೇಡಿ ಎಂದು ಅವರು ಇನ್‌ಸ್ಟಾಗ್ರಾಮ್ ವಿಡಿಯೋ ಮೂಲಕ ಕಿವಿಮಾತು ಹೇಳಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

Viral Techie Warns Software Engineers Against Long Term Loans Amid AI Rise And Layoffs In 2026

ಭಾರಿ ಪ್ಯಾಕೇಜ್ ಇದ್ದರೂ ಸಾಲ ಬೇಡ

ಪ್ರಿನ್ಸಿ ವರ್ಶ್ವಾಲ್ (Princi Vershwal) ಎಂಬ ಕಂಟೆಂಟ್ ಕ್ರಿಯೇಟರ್ ಹಾಗೂ ಟೆಕ್ ವೃತ್ತಿಪರರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. "ನೀವು ಎಷ್ಟೇ ದೊಡ್ಡ ಸಾಫ್ಟ್‌ವೇರ್ ಇಂಜಿನಿಯರ್ ಆಗಿರಲಿ, ನಿಮ್ಮ ವಾರ್ಷಿಕ ಪ್ಯಾಕೇಜ್ 40 ಲಕ್ಷ, 50 ಲಕ್ಷ ಅಥವಾ 1 ಕೋಟಿ ರೂಪಾಯಿಗಳೇ ಆಗಿರಲಿ, ದಯವಿಟ್ಟು ಯಾವುದೇ ದೀರ್ಘಾವಧಿಯ ಸಾಲವನ್ನ ಮಾತ್ರ ತೆಗೆದುಕೊಳ್ಳಬೇಡಿ. ಏಕೆಂದರೆ ಎಐ ತಂತ್ರಜ್ಞಾನವು ಭವಿಷ್ಯದಲ್ಲಿ ಅನಿರೀಕ್ಷಿತ ಬದಲಾವಣೆಗಳನ್ನ ತರಲಿದೆ.

ನಿಮ್ಮ ಬಳಿ ಸರಿಯಾದ ಹಣಕಾಸು ಯೋಜನೆಯಿಲ್ಲದೆ, ಕೇವಲ ಈಗಿನ ಸಾಫ್ಟ್‌ವೇರ್ ಉದ್ಯೋಗವನ್ನ ನಂಬಿಕೊಂಡು ನಿಮ್ಮ ಇಡೀ ಕುಟುಂಬದ ಆರ್ಥಿಕ ಭದ್ರತೆಯನ್ನ ಪಣಕ್ಕಿಡಬೇಡಿ. 2026ರ ಈ ದಿನಗಳಲ್ಲಿ ನಾನು ನನ್ನ ಸ್ನೇಹಿತರ ವಲಯದಲ್ಲಿ ನಡೆಯುತ್ತಿರುವ ವಾಸ್ತವ ಸಂಗತಿಗಳನ್ನ ಮಾತ್ರ ಹೇಳುತ್ತಿದ್ದೇನೆ, ಯಾರಲ್ಲೂ ಭಯ ಹುಟ್ಟಿಸುವ ಉದ್ದೇಶ ನನಗಿಲ್ಲ," ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅನಿರೀಕ್ಷಿತ ಲೇಆಫ್: ಇಎಂಐ ಹೊರೆ

ಕಂಪನಿಗಳು ದಿಢೀರ್ ಲೇಆಫ್ ಮಾಡಿದಾಗ ಆಗುವ ಆರ್ಥಿಕ ಮತ್ತು ಮಾನಸಿಕ ಹಿಂಸೆಗಳ ಬಗ್ಗೆ ಪ್ರಿನ್ಸಿ ತಮ್ಮ ಈ ವಿಡಿಯೋದಲ್ಲಿ ಹೇಳಿದ್ದಾರೆ. "ಕೆಲಸ ಕಳೆದುಕೊಳ್ಳುವುದೇ ಒಂದು ದೊಡ್ಡ ಮಾನಸಿಕ ಒತ್ತಡ. ಅದರ ಜೊತೆಗೆ ಮುಂದಿನ ತಿಂಗಳೇ ಪಾವತಿಸಬೇಕಾದ ಇಎಂಐ ಹೊರೆ ತಲೆಮೇಲಿದ್ದರೆ, ಆ ಒತ್ತಡ ಮತ್ತೊಂದು ಹಂತಕ್ಕೆ ತಲುಪುತ್ತದೆ. ಈ ವರ್ಷ ಅಥವಾ ಮುಂದಿನ ವರ್ಷ ನಿಮ್ಮ ಉದ್ಯೋಗಕ್ಕೆ ಯಾವುದೇ ಕುತ್ತು ಬರದೇ ಇರಬಹುದು. ಆದರೆ ನೀವು ಮಾಡಿದ ಸಾಲದ ಅವಧಿ 10 ರಿಂದ 15 ವರ್ಷಗಳವರೆಗೆ ಇರುತ್ತದೆ. 15 ವರ್ಷಗಳ ಬಳಿಕ ಸಾಫ್ಟ್‌ವೇರ್ ಉದ್ಯಮ ಈಗಿರುವಂತೆಯೇ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ನಿಮ್ಮ ಹಣಕಾಸಿನ ನಿರ್ಧಾರಗಳ ಬಗ್ಗೆ ಈಗಲೇ ಅತ್ಯಂತ ಜಾಗರೂಕರಾಗಿರಿ," ಎಂದು ಎಚ್ಚರಿಸಿದ್ದಾರೆ.

ಐಟಿ ಉದ್ಯೋಗ ಕಡಿತ 2026

ತಮ್ಮ ವಿಡಿಯೋದ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರಿನ್ಸಿ ವರ್ಶ್ವಾಲ್, ಸಾಫ್ಟ್‌ವೇರ್ ಇಂಜಿನಿಯರಿಂಗ್ ಉದ್ಯೋಗಗಳು ಸಂಪೂರ್ಣವಾಗಿ ಕಣ್ಮರೆಯಾಗುತ್ತವೆ ಎಂದು ತಾವು ಹೇಳುತ್ತಿಲ್ಲ ಎಂದಿದ್ದಾರೆ. ಆದರೆ, ಒಂದು ಉದ್ಯಮವು ಯಾವುದೇ ಬದಲಾವಣೆಯಿಲ್ಲದೆ ಮುಂದಿನ ಒಂದೂವರೆ ದಶಕಗಳ ಕಾಲ ಹಾಗೆಯೇ ಉಳಿಯುತ್ತದೆ ಎಂಬ ತಪ್ಪು ಕಲ್ಪನೆಯೊಂದಿಗೆ ದೀರ್ಘಕಾಲೀನ ಆರ್ಥಿಕ ಬದ್ಧತೆಗಳನ್ನ ಮಾಡಿಕೊಳ್ಳುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.

"ನಮ್ಮ ಉದ್ಯೋಗಗಳು, ಪ್ರಸ್ತುತ ಸಿಗುತ್ತಿರುವ ಸಂಬಳ ಮತ್ತು ನಮ್ಮ ಕೌಶಲ್ಯಗಳು ಮುಂದಿನ 15 ವರ್ಷಗಳ ಕಾಲ ಅದೇ ರೀತಿಯಲ್ಲಿ ಉಳಿಯುತ್ತವೆ ಎಂದು ಭಾವಿಸುವುದು ಮೂರ್ಖತನವಾಗುತ್ತದೆ" ಎಂದು ಪ್ರಿನ್ಸಿ ತಮ್ಮ ವಿಡಿಯೋ ಕ್ಯಾಪ್ಶನ್‌ನಲ್ಲಿ ಬರೆದುಕೊಂಡಿದ್ದಾರೆ.

ಪ್ರಿನ್ಸಿ ಅವರ ಈ ವಿಡಿಯೋಗೆ ನೆಟ್ಟಿಗರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಅನೇಕ ಬಳಕೆದಾರರು ಆರ್ಥಿಕ ಎಚ್ಚರಿಕೆಯ ಈ ಸಂದೇಶವನ್ನ ಮುಕ್ತಕಂಠದಿಂದ ಹೊಗಳಿದ್ದಾರೆ. "ಇದು ನಿಜಕ್ಕೂ ಪ್ರಾಯೋಗಿಕವಾದ ಮತ್ತು ಒಂದೊಳ್ಳೆ ಸಲಹೆ" ಎಂದು ಒಬ್ಬರು ಕಾಮೆಂಟ್ ಮಾಡಿದರೆ, "ದೀರ್ಘಾವಧಿಯ ಇಎಂಐಗಳು ಖಂಡಿತವಾಗಿಯೂ ದೊಡ್ಡ ಹೊರೆಯಾಗಬಲ್ಲವು, ವಾಸ್ತವದ ಅರಿವು ಮೂಡಿಸಿದ್ದಕ್ಕೆ ಧನ್ಯವಾದಗಳು" ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+