ವೈರಲ್ ಆದ ಬಿಬಿಎಂಪಿ 'ನೋ ಜಾಗಿಂಗ್, ನೋ ರನ್ನಿಂಗ್' ಫಲಕ

ಬೆಂಗಳೂರು ಜುಲೈ 14: ಉದ್ಯಾನ ನಗರಿ ಎಂದು ಕರೆಸಿಕೊಳ್ಳುವ ಬೆಂಗಳೂರಿನಲ್ಲೇ ಉದ್ಯಾನವೊದರ ಮುಂದೆ ಬಿಬಿಎಂಪಿ ಹಾಕಿರುವ ನಾಮಫಲಕ ಸಾಮಾಜಿಕ ಜಾತಲಾಣಗಳಲ್ಲಿ ವೈರಲ್ ಆಗಿದೆ. ಈ ನಾಮಫಲಕದ ವಿರುದ್ಧ ಕೆಲವು ನೆಟ್ಟಿಗರು ಲೇವಡಿ ಮಾಡಿದ್ದಾರೆ.

ಬೆಂಗಳೂರಿಗೆ ಉದ್ಯಾನ ನಗರಿ ಎಂದು ಸುಖಾಸುಮ್ಮನೆ ಕರೆಯುವುದಿಲ್ಲ. ರಾಜಧಾನಿಯಲ್ಲಿ ಗಲ್ಲಿ-ಗಲ್ಲಿಗಳಲ್ಲಿ ಹಾಗೂ ಪ್ರತಿ ಬಡಾವಣೆಗಳಲ್ಲೂ ಒಂದೋ ಎರಡೋ ಉದ್ಯಾನಗಳು ಕಾಣಸಿಗುತ್ತವೆ. ಅಲ್ಲಿಗೆ ವಿಶ್ರಾಂತಿಗಾಗಿ, ವಾಯು ವಿಹಾರಕ್ಕಾಗಿ, ಬೆಳಗ್ಗೆ ಮತ್ತು ಸಂಜೆ ಹಿರಿಯರು, ಮಕ್ಕಳು, ಮಹಿಳೆಯರು ಆಗಮಿಸುತ್ತಾರೆ.

ಉದ್ಯಾನದಲ್ಲಿ ಪ್ರವೇಶಿಸುವ ಕುರಿತು, ವ್ಯಾಯಾಮ, ವಾಕಿಂಗ್ ಮಾಡುವ ಕುರಿತು ಒಂದಷ್ಟು ವೇಳಾ ಪಟ್ಟಿಯ ನಾಮಫಲಕಗಳನ್ನು ನಾವು ನೋಡಿದ್ದೇವೆ. ಬೆಳಗ್ಗೆ ಮತ್ತು ಸಂಜೆ ಇಂತಿಷ್ಟು ಗಂಟೆ ಸಾರ್ವಜನಿಕ ಪ್ರವೇಶಕ್ಕೆ ಮುಕ್ತ ಎಂದು ಸಮಯ ನಿಗದಿ ಮಾಡಿರುವುದನ್ನು ಗಮನಿಸಿದ್ದೇವೆ.

Viral Post BBMP Says No For Jogging And Walking

ಆದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಒಂದು ಉದ್ಯಾನದ ಮುಂದೆ 'ಇಲ್ಲಿ ಯಾರು ಜಾಗಿಂಗ್ ಮತ್ತು ಓಡಾಟ (ರನ್ನಿಂಗ್) ಮಾಡುವಂತಿಲ್ಲ. ಬಲದಿಂದ ಎಡಕ್ಕೆ ಯಾರು ನಡೆಯುವಂತಿಲ್ಲ' ಎಂಬ ನಾಮಫಲಕ ಅಳವಡಿಸಿದೆ. ಇದೀಗ ಈ ಬೋರ್ಡು ನೆಟ್ಟಿಗರಿಗೆ ಆಹಾರವಾಗಿದೆ.

ನೋ ಜಾಗಿಂಗ್, ನೋ ರನ್ನಿಂಗ್; ಉದ್ಯಾನಕ್ಕೆ ಬರುವುದೇ ವಿಶ್ರಾಂತಿ, ವಾಕಿಂಗ್‌ಗೆ, ಓಡಾಡಲು, ವ್ಯಾಯಾಮ ಮಾಡಲು. ಆದರೆ ಬಿಬಿಎಂಪಿ ಇಲ್ಲಿ ಯಾರು ಜಾಗಿಂಗ್ ಮತ್ತು ರನ್ನಿಂಗ್ ಮಾಡುವಂತಿಲ್ಲ. ನಡೆದಾಡುವಂತಿಲ್ಲ ಎಂದು ನಿಯಮ ಹೇರಿದೆ. ಹಾಗಾದರೆ ಉದ್ಯಾನದಲ್ಲಿ 'ನಾಗಿಣಿ ಡ್ಯಾನ್ಸ್' ಮಾಡಬೇಕೆ? ಎಂದು ಲೇವಡಿ ಮಾಡಿದ್ದಾರೆ.

ನಗರದ ಉದ್ಯಾನ ಒಂದರ ಮುಂದೆ ಹಾಕಿರುವ ಬೋರ್ಡ್ ಇದೀಗ ಚರ್ಚೆಗೆ ಗ್ರಾಸವಾಗಿದ್ದು, ಬಿಬಿಎಂಪಿ ಪೇಚಿಗೆ ಸಿಲುಕಿದೆ. ನಡೆದಾಡಬಾರದು ಎಂದಾದರೆ ಉದ್ಯಾನದಲ್ಲಿ ನಾಗಿಣಿ ನೃತ್ಯ ಮಾಡಬೇಕೆ ಎಂದು ಪ್ರಶ್ನಿಸಿದ್ದಾರೆ. ಅವರಿಗೆ ಮತ್ತೊಬ್ಬರು ನೀವು ನಾಗಿಣಿ ನೃತ್ಯ ಮಾಡಬಹುದು. ಆದರೆ ಅದನ್ನು ಎಡದಿಂದ ಬಲಕ್ಕೆ ಮಾಡಬೇಕು ಇಲ್ಲದಿದ್ದರೆ ನಿಮಗೆ ಅನುಮತಿ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.

Viral Post BBMP Says No For Jogging And Walking

ಮೂನ್ ವಾಕ್ ಮಾಡಬಹುದೇ?; ಇನ್ನು ಕೆಲವೊಬ್ಬರು ಬಿಬಿಎಂಪಿಗೆ ಟ್ವಿಟರ್‌ನಲ್ಲಿ ಟ್ಯಾಗ್ ಮಾಡಿದ್ದಲ್ಲೇ ಪಾರ್ಕ್‌ನಲ್ಲಿ ಮೂನ್‌ವಾಕ್ ಮಾಡಬಹುದೇ? ಎಂದು ಕೇಳಿದ್ದಾರೆ. ನಗರದ ಮೂಲಸೌಕರ್ಯಗಳ ಅಭಿವೃದ್ಧಿ ಕಡೆಗೆ ಗಮನ ಹರಿಸದ ಬಿಬಿಎಂಪಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಹಾಗೂ ಸಾರ್ವಜನಿಕವಾಗಿ ಪೇಚಿಗೆ ಸಿಲುಕುವಂತೆ ನಿಯಮಗಳನ್ನು ತರುತ್ತಿದೆ ಎಂದು ಕೆಲವರು ಟೀಕಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+