Video Viral: ವಾರಾಂತ್ಯದಲ್ಲಿ ಬೆಂಗಳೂರಿನ ಅವ್ಯವಸ್ಥೆ ಎತ್ತಿ ತೋರಿಸಿದ ಐಐಟಿ ಜೋಡಿಯ ವಿಡಿಯೋ, ನೆಟ್ಟಿಗರು ಏನಂದ್ರು
ಬೆಂಗಳೂರು: 'ದೀರ್ಘ ರಜೆ ಹಿನ್ನೆಲೆಯಲ್ಲಿ ಇಡೀ ಬೆಂಗಳೂರು ಇದನ್ನೇ ಯೋಚಿಸಿದೆ' ಎಂಬ ಬೆಂಗಳೂರು ಐಐಟಿಯಲ್ಲಿ ಓದುತ್ತಿರುವ ಜೋಡಿಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ನಗರದಲ್ಲಿ ಸುದೀರ್ಘ ರಜೆ ವೇಳೆ ಉಂಟಾಗುವ ಪರಿಸ್ಥಿತಿಗಳ ಮೇಲೂ ಬೆಳಕು ಚೆಲ್ಲಿದೆ. ವಾರಾಂತ್ಯದ ಅವ್ಯವಸ್ಥೆಯನ್ನು ಅವರ ವಿಡಿಯೋದಲ್ಲಿ ನೋಡಬಹುದಾಗಿದೆ. ನೆಟ್ಟಿಗರು ತಮ್ಮದೇ ಆದ ಶೈಲಿಯಲ್ಲಿ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ.
ಶನಿವಾರ, ಭಾನುವಾರ ಹಾಗೂ ಸೋಮವಾರ ಮೂರು ದಿನಗಳ ಸುದೀರ್ಘ ರಜೆ ಹಿನ್ನೆಲೆಯ ಈ ಜೋಡಿ ವಾರಾಂತ್ಯದ ಮೋಜು ಮಸ್ತಿಗೆ ಪ್ರವಾಸಕ್ಕೆ ಪ್ಲಾನ್ ಮಾಡಿದ್ದರು. ಅವರಂತೆ ಅನೇಕ ಮಂದಿ ಬೆಂಗಳೂರಿನಲ್ಲಿರುವವು ರಜೆ ಕಳೆಯಲು ಟ್ರಿಪ್ ಪ್ಲಾನ್ ಮಾಡಿದ್ದರು. ಆದರೆ ರಸ್ತೆ ಮಧ್ಯ ಬಸ್‌ಗಳು ನಿಂತು ದಟ್ಟಣೆ, ಅವ್ಯವಸ್ಥೆ ಉಂಟಾಯಿತು. 'ರಜೆ ಹಿನ್ನೆಲೆ ಇಡೀ ಬೆಂಗಳೂರು ಇದನ್ನೇ ಯೋಚಿಸಿದೆ' ಎಂದು ಆ ಜೋಡಿಯು ಹಂಚಿಕೊಂಡ ವಿಡಿಯೋ ಮೇಲೆ ಶಿರ್ಷಿಕೆ ಬರೆಯಲಾಗಿತ್ತು. ಅಂದರೆ ರಜೆಗೆ ವೇಳೆ ಎಲ್ಲರೂ ಒಂದೇ ರೀತಿ ಯೋಚಿಸಿದ್ದಕ್ಕೆ ಈ ಅವ್ಯವಸ್ಥೆಯಲ್ಲಿ ಸಿಲುಕಿದ್ದೇವೆ. ಇದು ಬೆಂಗಳೂರು, ಇಲ್ಲಿಗೆ ವಾರಾಂತ್ಯದಲ್ಲಿ ಇಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ವಿಡಿಯೋ ಬಿಂಬಿಸಿದೆ.

ಟ್ರಾಫಿಕ್ ನೋಡಿ ಕ್ಷಣದಲ್ಲಿ ಸಂತಸ ಮಾಯ
ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಹಂಚಿಕೊಂಡ ಐಐಟಿ ಜೋಡಿಯ ಹೆಸರು ರೇಷ್ಮಾ ಭಗತ್ ಮತ್ತು ಪ್ರಭಾತ್ ಕುಮಾರ್. ಇವರು ಬೆಂಗಳೂರು ಮೂಲದವರು ಎನ್ನಲಾಗಿದೆ. ಈ ಮೂರು ದಿನಗಳ ರಜೆಯು ಒಂದು ಪ್ರವಾಸಕ್ಕೆ ಸೂಕ್ತ ಸಮಯ ಎಂದು ಅವರು ನಿರ್ಧರಿಸಿದರು. ರಸ್ತೆ ಬದಿ ಬ್ಯಾಗ್ ಇಟ್ಟು ತಮ್ಮ ಪ್ರವಾಸದ ಆರಂಭದ ಕ್ಷಣದ ಬಗ್ಗೆ ವಿಡಿಯೋ ಮಾಡಿದ್ದಾರೆ. ಹಿಂದಿಯಲ್ಲಿ "ಹಮ್ನೆ ಸೋಚಾ ಲಾಂಗ್ ವೀಕೆಂಡ್ ಹೈ ಕಹಿ ಘುಮ್ನೆ ಚಲೇ ಜಾತೇ ಹೈ" ಎಂದು ಬರೆದುಕೊಂಡಿದ್ದಾರೆ. ಅಂದರೆ "ಇದು ಲಾಂಗ್ ವೀಕೆಂಡ್ ಎಂದು ನಾವು ಭಾವಿಸಿದ್ದೇವೆ, ಆದ್ದರಿಂದ ಎಲ್ಲಾದರೂ ಹೋಗೋಣ"ಎಂದು ಹೇಳಿರುವ ಸಂತಸ ಕ್ಷಣ ಇದಾಗಿದೆ. ವಿಡಿಯೋದಲ್ಲಿ ಕ್ಯಾಮೆರಾ ಮತ್ತೊಂದು ಬದಿಗೆ ತಿರುಗುತ್ತಿದ್ದಂತೆ ಅಲ್ಲಿ ರಸ್ತೆಗಳಲ್ಲಿ ಬಸ್ ಸರತಿ ಸಾಲಿನಲ್ಲಿ ನಿಂತಿದ್ದು ಕಾಣಿಸುತ್ತದೆ. ಒಂದೇ ಕ್ಷಣಕ್ಕೆ ಸಂತಸ ಮಾಯವಾಗಿದೆ. ಅಷ್ಟರ ಮಟ್ಟಿನ ಅವ್ಯವಸ್ಥೆಗೆ ಈ ಜೋಡಿ ಸಾಕ್ಷಿಯಾಗಿದ್ದಾರೆ.
ಈ ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇನು?
ರಸ್ತೆಗಳಲ್ಲಿ ಕಿಕ್ಕಿರಿದ ಬಸ್ ಗಳು ತುಂಬಿದ್ದವು. ನಗರದಿಂದ ಹೊರ ಹೋಗಲು ಪ್ರಯಾಸದಾಯಕ ಸಂಚಾರ ಕಂಡು ಬಂತು. ಜನರ ದೀರ್ಘ ಸರತಿ ಸಾಲುಗಳು, ಕಾರು, ಆಟೋ, ಬೈಕ್ ಶಬ್ದವು ಗುಯ್‌ಗುಡುತ್ತಿದ್ದವು. ವಿಡಿಯೋಗೆ ಪ್ರತಿಕ್ರಿಯಿಸಿದ ನೆಟ್ಟಿಗರು 'ದೀರ್ಘ ವಾರಾಂತ್ಯದಲ್ಲಿ ಇದೇ ರೀತಿಯ ಜನಸಂದಣಿ ಮತ್ತು ಪ್ರಯಾಣ ಅವ್ಯವಸ್ಥೆ ಎದುರಿಸಬೇಕಾಗುತ್ತದೆ' ಎಂದು ಕಾಮೆಂಟ್ ಮಾಡಿದ್ದಾರೆ.
'ಬೆಂಗಳೂರಿನಿಂದ ನೀವು ಜನಪ್ರಿಯ ತಾಣಗಳಿಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಅದು ವಾರದ ದಿನಗಳು. ಏಕೆಂದರೆ ಆಗ ಶಾಲೆಗಳು, ಅಧಿವೇಶನ ನಡೆಯುತ್ತಿರುತ್ತವೆ. ನೀವು ದೀರ್ಘ ವಾರಾಂತ್ಯಗಳನ್ನು ಆಯ್ಕೆ ಮಾಡಿಕೊಂಡರೆ ಆ ದಿನಗಳಲ್ಲಿ ಜನದಟ್ಟಣೆ ಹೆಚ್ಚಿರಲಿದ್ದು, ಕಿರಿಕಿರಿ ಎದುರಿಸಬೇಕಾಗುತ್ತದೆ' ಎಂದು ಮತ್ತೊಬ್ಬರು ಹೇಳಿದ್ದಾರೆ.
'ಜನರು ನಂದಿ ಬೆಟ್ಟಗಳು, ಚೆನ್ನೈ, ಕೇರಳ ಮತ್ತು ಗೋವಾದಂತಹ ತಾಣಗಳಿಗೆ ಪಾರ್ಟಿ ಮಾಡಲು ಹೆಚ್ಚಾಗಿ ಸೇರುತ್ತಾರೆ ಎಂದು ಇನ್ನೊಬ್ಬರು ಬೆಂಗಳೂರಿನ ವಾರಾಂತ್ಯದ ವಾತಾವರಣದ ಬಗ್ಗೆ ಪ್ರೀತಿ ವ್ಯಕ್ತಪಡಿಸಿದ್ದಾರೆ. 'ಪ್ರತಿ ವಾರಾಂತ್ಯದಲ್ಲಿ ಇದೇ ರೀತಿಯ ಜನದಟ್ಟಣೆ ಇರುತ್ತದೆ. ಇದು ನಗರದ ಜನಪ್ರಿಯತೆ ತೋರಿಸುತ್ತದೆ' ಎಂದು ನಾಲ್ಕನೇಯ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications