ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಬದಲಾದ ಹವಾಗುಣದಿಂದ ವೈರಲ್ ಜ್ವರ ಹೆಚ್ಚಳ

|
Google Oneindia Kannada News

ಬೆಂಗಳೂರು, ನವೆಂಬರ್ 26: ಕಳೆದ ಒಂದು ವಾರದಿಂದ ಬೆಂಗಳೂರಲ್ಲಿ ಮೋಡಕವಿದ ವಾತಾವರಣ ನಿರ್ಮಾಣವಾಗಿದ್ದು ಆಗಾಗ ತುಂತುರು ಮಳೆಯಾಗಿದೆ. ಹವಾಮಾನ ಏರಿಳಿತದಿಂದ ಜನರ ಆರೋಗ್ಯದ ಮೇಲೂ ತೀವ್ರ ಪರಿಣಾಮ ಉಂಟಾಗುತ್ತಿದೆ.

ಗಂಟಲು ನೋವು, ಶೀತ, ಜ್ವರ ಸೇರಿದಂತೆ ಅನೇಕ ಕಾಯಿಲೆಗಳು ಆರಂಭವಾಗಿವೆ. ಚಳಿ ಗಾಳಿ ಬೀಸುತ್ತಿದೆ, ಇದರಿಂದ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ಇವರಲ್ಲಿ ಬಹುತೇಕರು ಶ್ವಾಸಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಕರ್ನಾಟಕದಲ್ಲಿ ಈ ಬಾರಿ ಡೆಂಗ್ಯೂ ಹಾವಳಿ ನಿಯಂತ್ರಣದಲ್ಲಿ! ಕರ್ನಾಟಕದಲ್ಲಿ ಈ ಬಾರಿ ಡೆಂಗ್ಯೂ ಹಾವಳಿ ನಿಯಂತ್ರಣದಲ್ಲಿ!

ನಿತ್ಯ 10ರಲ್ಲಿ ಐದಾರು ರೋಗಿಗಳು ಗಂಟಲು ನೋವು, ನೆಗಡಿ, ಕೆಮ್ಮು, ತಲೆನೋವು, ಮೈಕೈ ನೋವು, ಅಲರ್ಜಿ ಅಸ್ತಮಾ, ಕಿವಿ ಸೋಂಕುಗಳಿಂದ ಹಿರಿಯ ಕಿರಿಯರು ಎನ್ನದೆ ಎಲ್ಲಾ ವಯೋಮಾನದವರು ಬಳಲುತ್ತಿದ್ದಾರೆ.

ನಗರದ ಕಸಿ ಜನರಲ್ ಆಸ್ಪತ್ರೆ, ವಿಕ್ಟೋರಿಯಾ, ಬೌರಿಂಗ್ ಮತ್ತು ಲೇಡಿ ಕರ್ಜನ್ ಸೇರಿದಂತೆ ಅನೇಕ

ಶ್ವಾಸಕೋಶ ಸಂಬಂಧಿ ಸಮಸ್ಯೆ

ಶ್ವಾಸಕೋಶ ಸಂಬಂಧಿ ಸಮಸ್ಯೆ

ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವವರಲ್ಲಿ ಶೇ.30-40ರಷ್ಟು ಮಂದಿ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದದಾರೆ. ವಾಣಿವಿಲಾಸ ಆಸ್ಪತ್ರೆಯಲ್ಲಿ ಹಾಗೂ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಶೇ.50 ರಷ್ಟು ಮಕ್ಕಳು ಅನೇಕ ವೂರಾಣು ಜ್ವರಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಲ್ಲಿ 10 ದಿನಗಳಲ್ಲಿ 23 ಎಚ್‌1ಎನ್‌1 ಪ್ರಕರಣ ಪತ್ತೆ ಬೆಂಗಳೂರಲ್ಲಿ 10 ದಿನಗಳಲ್ಲಿ 23 ಎಚ್‌1ಎನ್‌1 ಪ್ರಕರಣ ಪತ್ತೆ

ಎಚ್‌1ಎನ್‌1 ರೋಗ ಲಕ್ಷಣಗಳು

ಎಚ್‌1ಎನ್‌1 ರೋಗ ಲಕ್ಷಣಗಳು

ಶೇ.20-25 ರಷ್ಟು ಮಕ್ಕಳಲ್ಲಿ ಎಚ್‌1ಎನ್‌1 ರೋಗಲಕ್ಷಣಗಳನ್ನು ಹೊಂದಿದವರಾಗಿದ್ದಾರೆ. ಇದಕ್ಕೆ ಹವಾಮಾನ ಬದಲಾವಣೆ ಹಾಗೂ ವಾತಾವರಣದಲ್ಲಿನ ಧೂಳು ಪ್ರಮುಖ ಕಾರಣ ಎನ್ನಲಾಗಿದೆ.

ಬೆಂಗಳೂರಲ್ಲಿ ಎಚ್‌1ಎನ್‌1 46 ಪ್ರಕರಣ ಪತ್ತೆ: ರಾಜ್ಯಾದ್ಯಂತ ಹೈ ಅಲರ್ಟ್ ಬೆಂಗಳೂರಲ್ಲಿ ಎಚ್‌1ಎನ್‌1 46 ಪ್ರಕರಣ ಪತ್ತೆ: ರಾಜ್ಯಾದ್ಯಂತ ಹೈ ಅಲರ್ಟ್

ಮುನ್ನೆಚ್ಚರಿಕಾ ಕ್ರಮಗಳೇನೇನು?

ಮುನ್ನೆಚ್ಚರಿಕಾ ಕ್ರಮಗಳೇನೇನು?

ಬಿಸಿ ಹಾಗೂ ತಾಜಾ ಆಹಾರ ಸೇವಿಸಬೇಕು, ಮಕ್ಕಳು, ವೃದ್ಧರು ಸೇರಿದಂತೆ ಎಲ್ಲರೂ ಬೆಚ್ಚನೆಯ ಉಡು[ಉ ಧರಿಸಬೇಕು, ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು, ಕೆಮ್ಮುವಾಗ, ಸೀನುವಾಗ ಕರವಸ್ತ್ರ ಬಳಸಬೇಕು, ಜ್ವರ ಬಂದ ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಬಾರದು.

ರೋಗಿಗಳಲ್ಲಿ ಮೈಕೈ ನೋವು ಸಮಸ್ಯೆ

ರೋಗಿಗಳಲ್ಲಿ ಮೈಕೈ ನೋವು ಸಮಸ್ಯೆ

ಚಿಕಿತ್ಸೆಗೆ ಬರುವ ಹೆಚ್ಚಿನ ರೋಗಿಗಳಲ್ಲಿ ಜ್ವರ ಮತ್ತು ಮೈಕೈ ನೋವು ಕುರಿತ ಮಾಹಿತಿ ನೀಡುತ್ತಾರೆ, ಆದರೆ ಉಸಿರಾಟದ ತೊಂದರೆ ಇರುವ ಬಗ್ಗೆ ತಿಳಿಸುವುದೇ ಇಲ್ಲ. ಇದರಿ ದ ಶೀಘ್ರ ಪತ್ತೆಗೆ ತೊಂದರೆ ಆಗುತ್ತದೆ.

English summary
Number of viral flu cases have increased in the last 15 days as changes were seen drastically in the weather following untimely rainfall in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X