ಚುನಾವಣಾ ಕಾರ್ಯಕ್ಕೆ ಬಂದ ಯೋಧರಿಗೆ ಹೂ ಚೆಲ್ಲಿ ಸ್ವಾಗತಿಸಿದ ಗ್ರಾಮಸ್ಥರು

ಬೆಂಗಳೂರು, ನವೆಂಬರ್ 28: ಉಪ ಚುನಾವಣೆಯ ಕರ್ತವ್ಯ ನಿರ್ವಹಿಸಲು ಆಗಮಿಸಿದ ಸೈನಿಕರಿಗೆ ಗ್ರಾಮಸ್ಥರೆಲ್ಲ ಸೇರಿ ಅದ್ದೂರಿಯಾಗಿ ಹೂವು ಚೆಲ್ಲಿ, ಸೆಲ್ಯೂಟ್ ಹೊಡೆದು ಸ್ವಾಗತ ಕೋರಿದ್ದಾರೆ. ಇದು ಹೊಸಕೋಟೆಯ ನಂದಗುಡಿ ಗ್ರಾಮದ ಜನರ ಯೋಧರ ಮೇಲಿನ ಅಭಿಮಾನವಾಗಿದೆ.

ಉಪ ಚುನಾವಣೆ ನಡೆಯುವ 15 ಕ್ಷೇತ್ರಗಳಲ್ಲಿಯೇ ಹೊಸಕೋಟೆ ವಿಭಿನ್ನವಾದ ಕ್ಷೇತ್ರವಾಗಿದೆ. ಇಲ್ಲಿ ಉಪ ಚುನಾವಣಾ ಕಾವು ಜೋರಾಗಿಯೇ ಇದೆ. ಹೀಗಾಗಿ ಕ್ಷೇತ್ರದಲ್ಲಿ ಶಾಂತಿ ಕಾಪಾಡಲು ಬಂದಿರುವ ಪ್ಯಾರಾ ಮಿಲಿಟರಿ ಯೋಧರನ್ನು ನಂದಗುಡಿ ಗ್ರಾಮಸ್ಥರು ಆದರ ಆತಿಥ್ಯದಿಂದ ಸ್ವಾಗತಿಸಿದ್ದಾರೆ.

ಹೊಸಕೋಟೆ ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಮೂರೂ ಪಕ್ಷಗಳ ಅಭ್ಯರ್ಥಿಗಳು ಹಾಗೂ ಒಬ್ಬ ಪಕ್ಷೇತರ ಅಭ್ಯರ್ಥಿ ಇಲ್ಲಿ ಭಾರೀ ಪ್ರಭಾವ ಹೊಂದಿದ್ದಾರೆ. ಎಲ್ಲಾ ಅಭ್ಯರ್ಥಿಗಳು ತಮ್ಮದೇ ಆದ ತಂತ್ರಗಳನ್ನು ಹೆಣೆದು ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಿರಲಿ ಎಂದು ಮುಂಚಿತವಾಗಿ ಚುನಾವಣಾ ಆಯೋಗ ಯೋಧರನ್ನು ಕರೆಸಿದೆ.

Villagers Showered flower On Soldiers Who Came For The election Duty

ಯೋಧರು ಗ್ರಾಮಕ್ಕೆ ಕಾಲಿಡುತ್ತಿದ್ದಂತೆಯೇ ಪ್ರಮುಖ ಬೀದಿಗಳಲ್ಲಿ ಸೈನಿಕರು ಹಾಗೂ ಪೊಲೀಸರಿಗೆ ಹೂವು ಚೆಲ್ಲಿ ಮೆರವಣಿಗೆ ಮಾಡಿ ಸ್ವಾಗತಿಸಿದ್ದಾರೆ.ಗ್ರಾಮಸ್ಥರು ತೋರಿಸಿದ ಪ್ರೀತಿಗೆ ಯೋಧರು ಹೆಮ್ಮೆಪಟ್ಟಿದ್ದಾರೆ.

ಹೊಸಕೋಟೆ ಉಪ ಚುನಾವಣಾ ಕಣದಲ್ಲಿ ಅನರ್ಹ ಶಾಸಕ, ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜು, ಕಾಂಗ್ರೆಸ್ ನಿಂದ ಭೈರತಿ ಸರೇಶ್ ಪತ್ನಿ ಪದ್ಮಾವತಿ ಸುರೇಶ್, ಇನ್ನು ಪಕ್ಷೇತರ ಅಭ್ಯರ್ಥಿಯಾಗಿ ಶರತ್ ಬಚ್ಚೇಗೌಡ ಸ್ಪರ್ಧಿಸುತ್ತಿದ್ದಾರೆ. ಡಿಸೆಂಬರ್ 05 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 09 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+