ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳು: ಓದಲೇಬೇಕಾದ ಹೊತ್ತಿಗೆ

ಬೆಂಗಳೂರು, ಸೆಪ್ಟೆಂಬರ್ 18: ಮನುಕುಲದ ವಿಕಾಸದ ಗುಟ್ಟನ್ನು ತನ್ನೊಡಲಲ್ಲಿ ಹೂತಿಟ್ಟುಕೊಂಡ ವಿಜ್ಞಾನ ಹಲವು ಮೈಲಿಗಲ್ಲುಗಳನ್ನು ದಾಟಿ ಮನುಷ್ಯನ ಪ್ರತಿ ಹೆಜ್ಜೆಯ ಮೇಲೂ ತನ್ನ ಪ್ರಭಾವವನ್ನು ಉಳಿಸಿಕೊಂಡಿದೆ.

ಮನುಷ್ಯ ಬದುಕು, ಇತಿಹಾಸ, ಉಗಮಗಳಿಗೊಂದು ವೈಜ್ಞಾನಿಕ ಚೌಕಟ್ಟು ನೀಡುವ ಈ ವಿಜ್ಞಾನ ಹಲವು ಮಹಾತಿರುವುಗಳಿಗೆ ಸಾಕ್ಷಿಯಾಗಿದೆ. ವಿಜ್ಞಾನದವೆಂಬ ಹೆದ್ದಾರಿಯಲ್ಲಿ ಎದುರಾದ ಹಲವು ಮಹಾತಿರುವುಗಳನ್ನು ಪರಿಚಯಿಸುವ ಪ್ರಯತ್ನವಾಗಿ, ಜನಪ್ರಿಯ ವಿಜ್ಞಾನ ಸಾಹಿತಿ ಡಾ.ಟಿ.ಆರ್.ಅನಂತರಾಮು ಅವರು, "ವಿಜ್ಞಾನದ ಹಾದಿಯಲ್ಲಿ ಮಹಾತಿರುವುಗಳು" ಎಂಬ ಪುಸ್ತಕವನ್ನು ಸಂಪಾದಿಸಿದ್ದಾರೆ.

ವಿಜ್ಜಾನ ಲೇಖನಗಳನ್ನು ಬರೆಯುವ 26 ಯುವ ಬರಹಗಾರರು, ವಿದ್ವಾಂಸರು ಸ್ವ ಅನುಭವ ಆಧರಿಸಿ ಬರೆದಿರುವ ಲೇಖನಗಳು ಈ ಕೃತಿಯಲ್ಲಿವೆ.

ಭೌತ ವಿಜ್ಞಾನ, ರಸಾಯನ ವಿಜ್ಞಾನ, ಜೀವ ವಿಜ್ಞಾನಗಳಿಂದ ಹಿಡಿದು, ಔಷಧಿ ವಿಜ್ಞಾನ, ವಿಧಿ ವಿಜ್ಞಾನಗಳವರೆಗೆ ವಿಜ್ಞಾನ ಕ್ಷೇತ್ರ ದಾಟಿದ ಮೈಲಿಗಲ್ಲುಗಳು, ಆ ಹಾದಿಯಲ್ಲಿ ಸಿಕ್ಕ ಮಹಾತಿರುವುವಗಳ ವಿವರ ಈ ಪುಸ್ತಕದಲ್ಲಿದೆ.

ಪುಸ್ತಕ: ವಿಜ್ಞಾನದ ಹಾದಿಯಲ್ಲಿ ಮಹಾತಿರುವುಗಳು
ಸಂಪಾದಕರು: ಟಿ.ಆರ್.ಅನಂತರಾಮು
ಪ್ರಕಾಶನ: ನವಕರ್ನಾಟಕ ಪ್ರಕಾಶನ
ಬೆಲೆ: 800/-ರೂ.
ಪುಟ: 568

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+