Vijayalakshmi Darshan: ಪರಪ್ಪನ ಅಗ್ರಹಾರದಲ್ಲಿ ಪತಿ ದರ್ಶನ್‌ನನ್ನ ಭೇಟಿಯಾದ ಪತ್ನಿ ವಿಜಯಲಕ್ಷ್ಮಿ, ಇದು ಎಷ್ಟನೇ ಬಾರಿ ಗೊತ್ತಾ.

Vijayalakshmi Darshan: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಪರಪ್ಪನ ಅಗ್ರಹಾರ ಜೈಲು ಸೇರಿದ್ದು, ದರ್ಶನ್‌ನನ್ನು ಹೊರತರಲು ಪತ್ನಿ ವಿಜಯಲಕ್ಷ್ಮಿ ಮತ್ತು ಕುಟುಂಬಸ್ಥರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಇನ್ನು ಇಂದು (ಆಗಸ್ಟ್‌ 12) ವಿಜಯಲಕ್ಷ್ಮಿ ಪತಿ ದರ್ಶನ್‌ನನ್ನು ಭೇಟಿಯಾಗಿದ್ದಾರೆ. ಹಾಗಾದರೆ ಇದುವರೆಗೂ ಎಷ್ಟು ಬಾರಿ ಭೇಟಿಯಾಗಿದ್ದಾರೆ ಎಂದು ಇಲ್ಲಿ ತಿಳಿಯಿರಿ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್‌ನನ್ನು ಇಂದು ಪತ್ನಿ ವಿಜಯಲಕ್ಷ್ಮಿ ಮತ್ತೆ ಭೇಟಿ ನೀಡಿದ್ದಾರೆ. ಈ ಮೂಲಕ ಅವರು ಇದುವರೆಗೂ ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್‌ನನ್ನು 7ನೇ ಬಾರಿ ಭೇಟಿ ಮಾಡಿದ್ದಾರೆ. ಇಂದು ಅವರ ಜೊತೆ ನಟ ದರ್ಶನ್‌ ಅಕ್ಕನ ಮಗ ಚಂದನ್ ಮತ್ತು ನಟಿ ಕಮ್ ನಿರ್ಮಾಪಕಿ ಶ್ರುತಿ ನಾಯ್ಡು ಕೂಡ ಆಗಮಿಸಿದ್ದರು ಎಂದು ತಿಳಿದುಬಂದಿದೆ.

Vijayalakshmi met Darshan for 7th time at parappana agrahara Agrahara

ಈಗಾಗಲೇ ವಿಜಯಲಕ್ಷ್ಮಿ ಟೆಂಪಲ್ ರನ್‌ ಮುಂದುವರೆಸಿದ್ದು, ಬಳಿಕ ಜೈಲಿಗೆ ಭೇಟಿ ನೀಡಿ ಪತಿ ದರ್ಶನ್‌ಗೆ ಕೊಟ್ಟು ಬಂದಿದ್ದಾರೆ. ಇತ್ತೀಚೆಗಷ್ಟೇ ವಿಜಯಲಕ್ಷ್ಮಿ ಅವರು ಬನಶಂಕರಿ ದೇವಿಯ ಪ್ರಸಾದದೊಂದಿಗೆ ಪತಿಯನ್ನು ಭೇಟಿ ಮಾಡಲು ಜೈಲಿಗೆ ಬಂದಿದ್ದರು. ಜೈಲು ನಿಯಮದ ಪ್ರಕಾರ, ವಾರದಲ್ಲಿ 2 ಬಾರಿಯಷ್ಟೇ ಭೇಟಿ ಮಾಡಲು ಅವಕಾಶ ಇರುತ್ತದೆ.

ರೇಣುಕಾಸ್ವಾಮಿ ಕುಟುಂಬದ ಮೇಲೂ ಪೊಲೀಸರ ಹದ್ದಿನ ಕಣ್ಣು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್‌ನನ್ನು ಹೊರತರಲು ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ಹರಸಾಹರ ಪಡುತ್ತಿದ್ದಾರೆ. ಅಷ್ಟೇ ಅಲ್ಲದೆ, ವಿಜಯಲಕ್ಷ್ಮಿ ಅವರು ಟೆಂಪಲ್‌ ರನ್‌ ಮುಂದುವರೆಸಿದ್ದಾರೆ. ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಅಲ್ಲಿನ ಪ್ರಸಾದ ತಂದು ದರ್ಶನ್‌ಗೆ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ.

ಈಗಾಗಲೇ ನಟ ದರ್ಶನ್‌ನನ್ನು ಚಿತ್ರರಂಗದ ಹಲವರು ಭೇಟಿ ಮಾಡಿ ಬಂದಿದ್ದಾರೆ. ಅಲ್ಲದೆ, ದರ್ಶನ್‌ ಹಾಗೂ ರೇಣುಕಾಸ್ವಾಮಿ ಕುಟುಂಬದ ನಡುವೆ ಸಂಧಾನ ಮಾಡುವ ಕಾರ್ಯಗಳು ಕೂಡ ತೆರೆಮರೆಯಲ್ಲಿ ನಡೆಯುತ್ತಿವೆ ಎನ್ನುವ ವಿಚಾರ ಬೆಳಕಿದೆ ಬಂದಿದೆ. ಆದ್ದರಿಂದ ಎಚ್ಚೆತ್ತ ಪೊಲೀಸರು ಕಂಬಿ ಹಿಂದೆ ಇರುವ ನಟ ದರ್ಶನ್‌ ಅಲ್ಲದೆ, ಮೃತ ರೇಣುಕಾಸ್ವಾಮಿ ಮನೆಗೆ ಭೇಟಿ ನೀಡುವವರ ಮೇಲೂ ಹದ್ದಿನ ಕಣ್ಣಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಚಾರದಲ್ಲಿ ನಟ ದರ್ಶನ್‌ ಪರವಾಗಿ ಕೆಲವರು ಮಾತನಾಡುತ್ತಿದ್ದರೆ, ಇನ್ನೂ ಕೆಲವರು ವಿರೋಧದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮತ್ತೊಂದೆಡೆ ಸರದಿ ಪ್ರಕಾರ ಪ್ರತಿದಿನ ರೇಣುಕಾಸ್ವಾಮಿ ಮನೆಗೆ ಸರದಿ ಪ್ರಕಾರ ಭೇಟಿ ನೀಡುತ್ತಲೇ ಇದ್ದಾರೆ. ಆದ್ದರಿಂದ ಸಾಕ್ಷ್ಯ ನಾಶವಾಗುವ ಶಂಕೆ ವ್ಯಕ್ತವಾದ ದೃಷ್ಟಿಯಿಂದ ಪೊಲೀಸರು ಎಚ್ಚೆತ್ತುಕೊಂಡಿದ್ದು, ಇದರಿಂದ ಈಗಾಗಲೇ ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಿದವರಿಗೆ ಢವಢವ ಶುರುವಾಗಿದೆ ಎಂದು ಹೇಳಲಾಗುತ್ತಿದೆ.

ಇದುವರೆಗೂ ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಿದವರನ್ನು ಪೊಲೀಸರು ತನಿಖೆಗೊಳಪಡಿಸುವ ಸಾಧ್ಯತೆಯಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+