ವಿದ್ವತ್ ಡಿಸ್‌ಚಾರ್ಜ್ ಸಮರಿ ಸೋರಿಕೆ: ಮಲ್ಯ ಆಸ್ಪತ್ರೆಯಿಂದ ತನಿಖೆ
Recommended Video

ಬೆಂಗಳೂರು, ಮಾರ್ಚ್ 17: ಮೊಹಮ್ಮದ್ ನಲಪಾಡ್‌ನಿಂದ ಹಲ್ಲೆಗೊಳಗಾಗಿದ್ದ ವಿದ್ವತ್‌ನ ಡಿಸ್ಚಾರ್ಜ್ ಸಮರಿ ಸೋರಿಕೆ ಆದ ಬಗ್ಗೆ ತನಿಖೆ ನಡೆಸಲು ವಿಠಲ್ ಮಲ್ಯ ಆಸ್ಪತ್ರೆ ಆಡಳಿತ ಮಂಡಳಿ ನಿರ್ಧರಿಸಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ವಿದ್ವತ್‌ನ ಡಿಸ್ಚಾರ್ಜ್ ಸಮರಿ ಸೋರಿಕೆ ಆಗಿದ್ದು, ಮೊಹಮ್ಮದ್ ನಲಪಾಡ್ ತಂದೆ ಕಾಂಗ್ರೆಸ್ ಶಾಸಕ ಎನ್‌ಎ ಹ್ಯಾರಿಸ್ ಅವರು ಡಿಸ್‌ಚಾರ್ಜ್ ಸಮರಿಯ ಚಿತ್ರಗಳನ್ನು ತಮ್ಮ ಖಾತೆಯಲ್ಲಿ ಪ್ರಕಟಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.
ಮಾಧ್ಯಮಗಳು ಈ ಬಗ್ಗೆ ಸುದ್ದಿ ಪ್ರಕಟಿಸಿದ್ದವು ಮತ್ತು ಪೊಲೀಸರು ಕೂಡಾ ಈ ಬಗ್ಗೆ ಆಸ್ಪತ್ರೆ ಆಡಳಿತವನ್ನು ಪ್ರಶ್ನೆ ಮಾಡಿದ್ದರು. ಹ್ಯಾರಿಸ್ ಅವರು ತಮ್ಮ ಪ್ರಭಾವ ಬಳಸಿ ಆಸ್ಪತ್ರೆ ವರದಿಯನ್ನು ದುರ್ಬಲಗೊಳಿಸಿದ್ದಾರೆ ಎಂದು ಸಹ ಆರೋಪಗಳು ಕೇಳಿಬಂದಿತ್ತು. ಮಲ್ಯ ಆಸ್ಪತ್ರೆಯ ವಿಶ್ವಾಸಾರ್ಹತೆ ಬಗ್ಗೆ ಕೂಡಾ ಪ್ರಶ್ನೆ ಮಾಡಲಾಗಿತ್ತು.

ವಿದ್ವತ್ ಡಿಸ್‌ಚಾರ್ಜ್ ಸಮರಿ ಸೋರಿಕೆ ಕುರಿತು ತನಿಖೆ ಮಾಡುವ ಬಗ್ಗೆ ವಿಠಲ್ ಮಲ್ಯ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಂದ್ರು ವಾದ್ವಾನಿ ಸ್ಪಷ್ಟಪಡಿಸಿದ್ದು, 'ಆಸ್ಪತ್ರೆಯ ಶಿಸ್ತು ಸಮಿತಿ ಸಭೆ ನಡೆಸಿ ತನಿಖೆ ನಡೆಸಲು ತೀರ್ಮಾನಿಸಿದೆ. ತನಿಖೆಗೆ ನಮ್ಮದೇ ಆದ ಕೆಲವು ಮಾರ್ಗಸೂಚಿಗಳಿವೆ. ಆ ಪ್ರಕಾರ ತನಿಖೆ ಕೈಗೊಳ್ಳಲಾಗುವುದು' ಎಂದಿದ್ದಾರೆ.

ವಿದ್ವತ್ ಅವರ ಚಿಕಿತ್ಸೆ ನೇತೃತ್ವವನ್ನು ವಹಿಸಿದ್ದ ಆನಂದ್ ಅವರೇ ಡಿಸ್‌ಚಾರ್ಜ್ ಸಮರಿ ಸೋರಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅವರನ್ನೂ ಅಮಾನತು ಮಾಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು 'ಆನಂದ್ ಅವರು ತಜ್ಞ ವೈದ್ಯರ ತಂಡದಲ್ಲಿ ಪ್ರಮುಖವಾಗಿದ್ದಾರೆ. ಇವರನ್ನು ಅಮಾನತು ಮಾಡುವ ಪ್ರಶ್ನೆಯೇ ಇಲ್ಲ' ಎಂದಿದ್ದಾರೆ.

ಬುಧವಾರ ನಡೆದ ನಲಪಾಡ್ ಜಾಮೀನು ಅರ್ಜಿ ವಿಚಾರಣೆ ವೇಳೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಶ್ಯಾಂಸುಂದರ್ ಅವರು ವೈದ್ಯಕೀಯ ವರದಿ ಸೋರಿಕೆ ವಿಚಾರ ಪ್ರಸ್ತಾಪ ಮಾಡಿದ್ದು 'ವೈದ್ಯರ ತೀವ್ರ ಒತ್ತಡದಿಂದಾಗಿ ವಿದ್ವತ್ ಅನ್ನು ಡಿಸ್‌ಚಾರ್ಜ್ ಮಾಡಲಾಗಿದೆ. ಅಲ್ಲದೆ ವೈದ್ಯಕೀಯ ವರದಿಯನ್ನು ರೋಗಿಗೆ ಅಥವಾ ಅವರ ಹತ್ತಿರದ ಸಂಬಂಧಿಗಳಿಗೆ ಮಾತ್ರ ಕೊಡಬೇಕು. ಆದರೆ ಹ್ಯಾರಿಸ್ ಅವರು ಡಿಸ್‌ಚಾರ್ಜ್ ಸಮರಿಯನ್ನು ತಮ್ಮ ಸಾಮಾಜಿಕ ಜಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದರು ಇದರ ಬಗ್ಗೆ ತನಿಖೆ ಆಗಬೇಕು' ಎಂದು ಹೇಳಿದ್ದರು.
-
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
ಏಪ್ರಿಲ್ 14ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
ರಾಜ್ಯದ 5000ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕಲುಷಿತ ನೀರು: ಗ್ಯಾರಂಟಿ ಗುಂಗಿನಲ್ಲಿರುವ ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ಕಿಡಿ -
CRPF Recruitment 2026: 9,000ಕ್ಕೂ ಹೆಚ್ಚು ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ; ಕನ್ನಡಿಗರಿಗೂ ಇದೆ ಮೀಸಲಾತಿ -
ಏಪ್ರಿಲ್ 13ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Cat: ಬೆಂಗಳೂರಲ್ಲಿ ಬೆಕ್ಕುಗಳ ಪ್ರೇಮ ಪ್ರಕರಣ - ಇತ್ಯರ್ಥಕ್ಕೆ ಪೊಲೀಸರೇ ಬರಬೇಕಾಯ್ತು, ವೈರಲ್ ಸುದ್ದಿ -
Railway Food: ರೈಲು ಪ್ರಯಾಣಿಕರ ಬಳಿ ಬರುತ್ತೆ ಆಹಾರ: ರೈಲ್ವೆ ಇಲಾಖೆಗೆ ಕಂಪನಿಗಳ ಸಾಥ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ












Click it and Unblock the Notifications