Watch Video: ವಿಧಾನಸೌಧ ಮುಂದೆಯೇ ವಲಸಿಗರ ಅಟ್ಟಹಾಸ: ಗೃಹ ಸಚಿವರೇ ರಾಜೀನಾಮೆ ಕೊಡಿ, ಜನಾಕ್ರೋಶ
ಬೆಂಗಳೂರು, ನವೆಂಬರ್ 19: ಕರುನಾಡಿನ ರಾಜಧಾನಿ ಬೆಂಗಳೂರಿನಲ್ಲಿ ಅದೆಷ್ಟೋ ವಲಸಿಗರಿಗೆ ಆಶ್ರಯ ನೀಡಿದೆ. ಕನ್ನಡಿಗರು ಮಾತ್ರವಲ್ಲದೇ ಬೇರೆ ಬೇರೆ ರಾಜ್ಯಗಳಿಂದ ಇಲ್ಲಿಗೆ ಬಂದು ಬದುಕು ಕಟ್ಟಿಕೊಂಡವರ ಪೈಕಿ ಹಲವರಲ್ಲಿ ಈ ನೆಲದ ಬಗ್ಗೆ, ಕನ್ನಡಿಗರ ಬಗ್ಗೆ ಗೌರವವೇ ಇಲ್ಲ. ಕೊನೆ ಪಕ್ಷ ಇಲ್ಲಿನ ಕಾನುನು, ಪೊಲೀಸ್ ವ್ಯವಸ್ಥೆ ಬಗ್ಗೆ ಹೆದರಿಕೆ ಇಲ್ಲದೇ ವರ್ತಿಸಿದ್ದಾರೆ. ಇಂತಹ ಘಟನೆ ಬೆಂಗಳೂರಿನಲ್ಲಿ ಶಕ್ತಿಸೌಧ ವಿಧಾನಸೌಧ ಮುಂಭಾಗವೇ ನಡೆದಿದೆ. ವಿಡಿಯೋ ನೋಡಿದರೆ ಇದು ಕರ್ನಾಟಕವಾ? ಎಂದನಿಸುತ್ತದೆ. ಕನ್ನಡಿಗರ ತಾಳ್ಮೆಯ ಕಟ್ಟೆಯೊಡೆದಿದ್ದು, ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ನಾಗರಿಕರು, ವಾಹನಗಳು ಓಡಾಡುವ ಸಮಯದಲ್ಲೇ ರಾತ್ರಿ ವಿಧಾನಸೌಧ ಮುಂಭಾಗ ವಲಸಿಗರು ಮಿತಿ ಮೀರಿದ ವರ್ತನೆ ಪ್ರದರ್ಶಿಸಿದ್ದಾರೆ. ಗಲಾಟೆ ಮಾಡಿ ಅಟ್ಟಹಾಸ ಮೆರೆದಿದ್ದಾರೆ. ಈವರೆಗೆ ಕನ್ನಡಿಗರ ಮೇಲೆ, ಭಾಷೆಯ ಮೇಲೆ ಪ್ರಹಾರ ತೋರುತ್ತಿದ್ದವರು ಇದೀಗ ಗುಂಪು ಕಟ್ಟುಕೊಂಡು ಜಗಳವಾಡಿದ್ದಾರೆ. ಕಾನೂನು ಸಣ್ಣ ಭಯವಿಲ್ಲದೇ ಅಟ್ಟಹಾಸ ಮೆರೆದ ವಿಡಿಯೋ ಸಾಮಾಜಿಕ ಜಾತಲಾಣದಲ್ಲಿ ಹರಿದಾಡುತ್ತಿದೆ. ವಿಧಾನಸೌಧ, ಹೈಕೋರ್ಟ್, ಮೆಟ್ರೋ ನಿಲ್ದಾಣಗಳು ಒಂದೆಡೆ ಇರುವ ಭದ್ರತೆ ಮತ್ತು ಸದಾ ಪೊಲೀಸರು ಸಕ್ರಿಯವಾಗಿರುವ ಸ್ಥಳದಲ್ಲೇ ಇಂತಹ ಘಟನೆ ಜರುಗಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ವಿಡಿಯೋದಲ್ಲಿ ಕಾಣುವಂತೆ ಇವರ್ಯಾರು ಇಲ್ಲಿನ ವಾಸಿಗಳಲ್ಲ. ಬದಲಾಗಿ ವಲಸಿಗರು ಎಂಬುದು ಸ್ಪಷ್ಟವಾಗಿ ಗೊತ್ತಿದೆ. ವಿಶಾಲ ಹೃದಯದ ಕನ್ನಡಿಗರು ಸಹಿಸಿಕೊಂಡ ಈ ವಲಸಿಗರು ಬಾಲ ಬಿಚ್ಚುತ್ತಿದ್ದಾರೆ. ಎರಡು ಗುಂಪುಗಳ ಮಧ್ಯ ಮಾರಾ ಮಾರಿ ನಡೆದಿದೆ. ಒಂದಿಬ್ಬರನ್ನು ಹಿಡಿದು ಹಲ್ಲೆ ಮಾಡುವ, ಕಾಲಿನಿಂದ ಒದೆಯುವ ದೃಶ್ಯಗಳು ಕಾಣಿಸುತ್ತವೆ. ವಿಧಾನಸೌಧದ ಮುಂದೆ ಫುಟ್‌ಪಾತ್ ಮೇಲೆ ಯಾವ ಅಂಜಿಕೆ ಇಲ್ಲದೇ ಗಲಾಟೆ ಮಾಡುತ್ತಾ ಓಡಾಡಿದ ದೃಶ್ಯಗಳು ವೈರಲ್ ಆಗಿವೆ. ಇದು ಅದೇ ಫುಟ್‌ಪಾತ್ ಅನುಸರಿಸಿ ಬರುತ್ತಿದ್ದ ನಾಗರಿಕರು, ಹೆಣ್ಣುಮಕ್ಕಳ ಭಯಕ್ಕೆ ಕಾರಣವಾಗಿದೆ. ಗಲಾಟೆ ಹೆಚ್ಚಾಗುತ್ತಿದ್ದಂತೆ ಸ್ಥಳದಲ್ಲಿದ್ದ ಇಬ್ಬರು ಪೊಲೀಸ್ ಸಿಬ್ಬಂದಿ ಅವರನ್ನು ಚದುರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಲಸಿಗರಿಂದ ಬೆಂಗಳೂರು ಅವನತಿ: ಕನ್ನಡಿಗರು ಸಾಕ್ಷಿ
ವಲಸಗಿರನ್ನು ಬರಬೇಡಿ ಎಂದು ಹೇಳಲು ಆಗದಿರಬಹುದು. ಆದರೆ ವರ್ತನೆ, ದಾಳಿ, ಸಾರ್ವಜನಿಕವಾಗಿ ಇಂತಹ ಸಂಘರ್ಷ, "ವಲಸಿಗರ ಅಟ್ಟಹಾಸವನ್ನು ಸರ್ಕಾರ ತಡೆಯಬೇಕು. ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಅದು ಆಗದಿದ್ದರೆ ಗೃಹ ಸಚಿವ ಜಿ.ಪರಮೇಶ್ವರ ಅವರೇ ದಯವಿಟ್ಟು ರಾಜೀನಾಮೆ ನೀಡಿ' ಎಂದು ವಿಡಿಯೋ ನೋಡಿದವರು ಕಾಮೆಂಟ್ ಮಾಡಿ ಆಗ್ರಹಿಸಿದ್ದಾರೆ.
ಇದೇನಿದು ನಾಡಿನ ಹೃದಯ ಭಾಗ ಹಾಗೂ ಹೈ ಕೋರ್ಟ್ ಮತ್ತು ವಿಧಾನಸೌಧದ ಮುಂದೆಯೇ ಈ ರೀತಿ ವಲಸಿಗರಿಂದ ಅಟ್ಟಹಾಸ ಮೆರೆದಿರುವ ಇವರಿಗೆ ಹೇಳೋರು ಕೇಳೋರು ಯಾರು ಇಲ್ಲವೇ ಯಾವಾಗ ಇದಕ್ಕೆಲ್ಲ ಕೊನೆ? @CMofKarnataka @siddaramaiah @DKShivakumar @DrParameshwara pic.twitter.com/PuuCT5DTcs
— ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥 (@VKkarthik169) November 18, 2025
ಮತ್ತೊಬ್ಬರು 'ಏನೂ ಅಂತಾನೆ ಗೊತ್ತಾಗ್ತಿಲ್ಲ ಕನ್ನಡಿಗರು ಏನಾದ್ರು ಬಿಹಾರಕ್ಕೆ ಹೋಗಿದಾರೋ ಇಲ್ಲ ಕೇರಳ ಗೆ ಹೋಗಿದಾರೋ? ಎಲ್ಲಿ ನೋಡಿದ್ರೂ ಬೇರೆ ರಾಜ್ಯದವರೇ ಇದರೆ ಎತ್ತ ತಲುಪಲಿದೆ ಕನ್ನಡನಾಡು! ' ಕಳವಳ ವ್ಯಕ್ತಪಡಿಸಿದ್ದಾರೆ.
"ಕನ್ನಡಿಗರು ವಲಸಿಗರಿಂದ ನಮ್ಮ ಬೆಂಗಳೂರಿನ ಅವನತಿ ಕಾಣುವಂತಾಗಿದೆ. ಆದರೆ ಏನೂ ಮಾಡಲು ಸಾಧ್ಯವಾಗುತ್ತಿಲ್ಲ. ನಮ್ಮ ಭೂಮಿ, ನಮ್ಮ ಜನರು ಮತ್ತು ನಮ್ಮ ಭಾಷೆಯ ಬಗ್ಗೆ ಕಾಳಜಿ ವಹಿಸದ ನಮ್ಮ ರಾಜಕಾರಣಿಗಳಿಗೆ ನಾಚಿಕೆಯಾಗಬೇಕು' ಇನ್ನೊಬ್ಬರು ಸರ್ಕಾರವನ್ನು, ರಾಜಕಾರಣಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
'ಬೆಂಗಳೂರು ನಗರ ಪೊಲೀಸರಿಗೆ ಇದೀಗ ವಲಸಿಗರನ್ನು ಕಟ್ಟುನಿಟ್ಟಾಗಿ ನಿರ್ವಹಿಸುವ ಸಮಯ ಬಂದಿದೆ! ವಿಧಾನಸೌಧದ ಬಳಿ ಈ ರೀತಿ ವರ್ತಿಸುವುದು ಸರಿಯೇ?' ಪ್ರಶ್ನಿಸಿದ್ದಾರೆ. 'ಬೆಂಗಳೂರು ಪೊಲೀಸರಿಗೆ ಈ ಗಲಭೆಗಳ ಬಗ್ಗೆ ಮಾಹಿತಿ ಇದಿಯಾ?' ಎಂದು ಮತ್ತೊಬ್ಬರು ಖಾರವಾಗಿ ಪ್ರಶ್ನಿಸಿದ್ದಾರೆ.












Click it and Unblock the Notifications