IAF Officer Assault: ಉದ್ಯೋಗಕ್ಕೆ ಕುತ್ತು ತಂದ ಬೋಸ್ ವಿರುದ್ಧ ವಿಕಾಸ್ ಶಪಥ: Video
ಬೆಂಗಳೂರು, ಏಪ್ರಿಲ್ 24: ಬೆಂಗಳೂರಿನಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ರೋಡ್ ರೇಜ್ ಪ್ರಕರಣದ ಸಂತ್ರಸ್ತ ವಿಕಾಸ್ ಅವರು ಶಪಥ ಮಾಡಿದ್ದಾರೆ. ಆಗಿರುವ ಅನ್ಯಾಯಕ್ಕೆ ನ್ಯಾಯ ಪಡೆದೇ ತೀರುವೆ ಎಂದು ಗುಡುಗಿದ್ದಾರೆ. ಈ ವೇಳೆ ಅವರು ತಮ್ಮ ಮೇಲೆ ಹಲ್ಲೆ ಆದ ವೇಳೆ ಸಹಾಯಕ ಬಂದವರನ್ನು ಮರೆಯದೇ ಕೃತಜ್ಞತೆ ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಬೈಯಪ್ಪನಹಳ್ಳಿ ಪೊಲೀಸ್ ಠಾಣೆ ಸಿಬ್ಬಂದಿಗೆ ಧನ್ಯವಾದ ಹೇಳಿದ್ದಾರೆ.
ವಿಂಗ್ ಕಮಾಂಡ್ ಶಿಲಾದಿತ್ಯ ಬೋಸ್ ಹಾಗೂ ಬೈಕ್ ಸವಾರ ವಿಕಾಸ್ ಘಟನೆ ಬೆಂಗಳೂರಿನಲ್ಲಿ ವ್ಯಾಪಕ ಸಂಚಲನ ಮೂಡಿಸಿತ್ತು. ಇದಾದ ಬಳಿಕ ವಿಕಾಶ್ ವಿಡಿಯೋ ಮಾಡಿದ್ದಾರೆ. ನನ್ನ ಬೆಂಬಲಕ್ಕೆ ನಿಂತ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಕರವೇ ನಾರಾಯಣ ಗೌಡ, ಅಶ್ವಿನಿ ಗೌಡ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ವಕೀಲ ಅಜಯ್ ಕುಮಾರ್, ಸಾಮಾಜಿಕ ಕಾರ್ಯಕರ್ತರ ಅರುಣ್ ಕುಮಾರ್ ರಾತ್ರಿಯಿಂದ ತಮಗೆ ಸಹಾಯ ಮಾಡಿದ್ದನ್ನು ವಿವರಿಸಿಸಿದ್ದಾರೆ.

ಘಟನೆ ಬಳಿಕ ಬೈಯಪ್ಪನಹಳ್ಳಿ ಪೊಲೀಸ್ ಠಾಣೆ ಸಿಬ್ಬಂದಿ ನನ್ನ ಅಳಲನ್ನು ಕೇಳಿದ್ದಾರೆ. ವೈದ್ಯಕೀಯ ತುರ್ತು ಸೇವೆ ಅಗತ್ಯವಿದ್ದು, ಅದನ್ನು ಒದಗಿಸಿದ್ದಾರೆ. ನನ್ನ ಕಡೆಯಿಂದಲೂ ದೂರು ಸ್ವೀಕರಿಸಿದ್ದಾರೆ. ಪೊಲೀಸರಿಂಗ ಸಕಾರಾತ್ಮಕವಾಗಿ ಸ್ಪಂದನೆ ಸಿಕ್ಕಿದೆ ಎಂದು ಹೇಳಿದ್ದಾರೆ.
ನನ್ನ ತಂದೆ ಎರಡು ವರ್ಷದಿಂದ ಅಸುನೀಗಿದ್ದಾರೆ. ಮನೆ ಮತ್ತು ವಯಸ್ಸಾದ ತಾಯಿ ಜವಾಬ್ದಾರಿ ನನ್ನ ಮೇಲಿದೆ. ನೆನ್ನೆ ನಡೆದ ಘಟನೆಯಿಂದ ಉದ್ಯೋಗದ ಮೇಲೆ ಪ್ರಭಾವ ಬೀರಿದೆ. ಕೆಲಸ ಕಳೆದುಕೊಳ್ಳುವ ವಾತಾವರಣ ನಿರ್ಮಾಣವಾಗಿದೆ. ನನಗೆ ಅನ್ಯಾಯ ಮಾಡಲಾಗಿದೆ. ಅದಕ್ಕೆ ತಕ್ಕ ನ್ಯಾಯವನ್ನು ನಾನು ವಿಂಗ್ ಕಮಾಂಡ್‌ನಿಂದ ಪಡೆಯುತ್ತೇನೆ ಎಂದು ಹೇಳಿದ್ದಾರೆ.
ಸದ್ಯ ಘಟನೆಯಿಂದಾಗಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಹದಗೆಟ್ಟಿದೆ. ಉತ್ತಮ ತನಿಖೆ ನಡೆಯಲಿದೆ ಎಂದು ಪೊಲೀಸ್ ಕಮಿಷನರ್ ಹೇಳಿದ್ದಾರೆ ಎಂದು ತಮಗೆ ನ್ಯಾಯ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಒಂದೇ ಭಾಷೆಗೆ ಬಂದರೆ ಕೆಲಸ ಸಿಗದು ಎಂಬ ಕಾರಣಕ್ಕೆ ಬೆಂಗಳೂರಿನವನಾದ ನಾನು ಐದು ಭಾಷೆ ಚೆನ್ನಾಗಿ ಮಾತನಾಡುತ್ತೇನೆ. ಆದರೆ ವಿಂಗ್ ಕಮಾಂಡ್ ಕನ್ನಡ ಭಾಷಾ ವಿಚಾರವಾಗಿ ನನ್ನ ವಿರುದ್ಧ ದೂರು ದಾಖಲಿಸಿದ್ದಾರೆ. ಅವರೇ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ನನ್ನ ಕೆಲಸ ಕಿತ್ತುಕೊಳ್ಳಲು ಕಾರಣರಾಗಿದ್ದಾರೆ. ಅವರಿಂದ ನಾನು ನ್ಯಾಯ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಘಟನೆ ಹಿನ್ನೆಲೆ..
ವಿಂಗ್ ಕಮಾಂಡ್ ಪತ್ನಿಯನ್ನು ಏರ್‌ಪೋರ್ಟ್ ಬಿಡಲು ಕಾರಿನಲ್ಲಿ ತೆರಳುವಾಗ ಬೈಕ್ ಸವಾರ ವಿಕಾಸ್ ಮಧ್ಯೆ ವಾಹನ ಓವರ್ ಟೆಕ್ ವಿಚಾರವಾಗಿ ಜಗಳ ಆಗಿದೆ. ಇಬ್ಬರು ಕೈ ಕೈ ಮಿಲಾಯಿಸಿದ್ದಾರೆ. ಆರಂಭದಲ್ಲಿ ವಿಕಾಸ್ ಅವರದ್ದು ತಪ್ಪು ಎನ್ನಲಾಗಿತ್ತು. ಸಿಕ್ಕ ವಿಡಿಯೋದಿಂದ ವಿಂಗ್ ಕಮಾಂಡ್ ಅವರೇ ವಿಕಾಸ್ ಮೇಲೆ ಹಲ್ಲೆ ಮಾಡಿರುವುದು ಬೆಳಕಿಗೆ ಬಂದಿದೆ. ಪ್ರಕರಣದ ತನಿಖೆ ನಡೆಯುತ್ತಿದೆ. ವಿಂಗ್ ಕಮಾಂಡ್ ಮೇಲೆ ಎಫ್‌ಐಆರ್ ದಾಖಲಾಗಿದೆ.












Click it and Unblock the Notifications