Video: ಸಿಲಿಕಾನ್ ಸಿಟಿಯಲ್ಲಿ 72 ವರ್ಷದ ವೃದ್ಧೆಯ ಸರಗಳ್ಳತನ
ಬೆಂಗಳೂರು, ಜುಲೈ 20: ಸಿಲಿಕಾನ್ ಸಿಟಿಯಲ್ಲಿ ಇಷ್ಟುದಿನ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಕಾಟ ಆಯಿತು. ಇಷ್ಟು ದಿನ ಸೈಲೆಂಟ್ ಆಗಿದ್ದ ಸರಗಳ್ಳರು ಕೊವಿಡ್-19 ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದಂತೆ ತಮ್ಮ ಕೈಚಳಕ ತೋರುವುದಕ್ಕೆ ಶುರು ಮಾಡಿದ್ದಾರೆ.
Recommended Video

ಬೆಂಗಳೂರಿನಲ್ಲಿ ಹಾಡಹಗಲೇ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ವೃದ್ಧೆಯ ಸರವನ್ನು ಕದ್ದು ಎಸ್ಕೇಪ್ ಆಗಿದ್ದಾರೆ. ವಿಜಯನಗರ ಎರಡನೇ ಕ್ರಾಸ್ ಬಳಿ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಯ ಸರವನ್ನು ಕಸಿದು ಪರಾರಿಯಾಗಿದ್ದಾರೆ.
72 ವರ್ಷದ ವೃದ್ಧೆ ಇಂದಿರಮ್ಮ ಎಂಬುವವರಿದೆ ಸೇರಿದ 35 ಗ್ರಾಂ ಚಿನ್ನದ ಸರವನ್ನು ಕಸಿದುತೊಂಡು ಎಸ್ಕೇಪ್ ಆಗಿದ್ದಾರೆ. ಸ್ಥಳಕ್ಕೆ ವಿಜಯನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸುತ್ತಮುತ್ತಲಿನ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಕಲೆ ಹಾಕುತ್ತಿದ್ದಾರೆ. ಈ ವೇಳೆ ಸರಗಳ್ಳತನದ ದೃಶ್ಯ ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಬೆಂಗಳೂರಿನಲ್ಲಿ ಜುಲೈ 01ರಂದು ಸರಣಿ ಸರಗಳ್ಳತನ:
ಕಳೆದ ಜುಲೈ 1ರಂದು ಸಿಲಿಕಾನ್ ಸಿಟಿಯಲ್ಲಿ ಸರಣಿ ಸರಗಳ್ಳತನ ನಡೆದಿರುವ ಬಗ್ಗೆ ವರದಿಯಾಗಿತ್ತು. ಸರ್ಜಾಪುರ, ಆಡುಗೋಡಿ, ಸೂಲಿಬೆಲೆ, ತಿರುಮಲ ಶೆಟ್ಟಿ ಹಳ್ಳಿ, ಹೊಸಕೋಟೆ, ದೇವನಹಳ್ಳಿ ಸೇರಿದಂತೆ ಒಟ್ಟು 9 ಕಡೆಗಳಲ್ಲಿ ಸರಗಳ್ಳತನ ನಡೆದಿರುವುದು ವರದಿಯಾಗಿದೆ. ಕಳೆದ ಎರಡು ದಿನಗಳಲ್ಲಿ ಸುಮಾರು ಒಂದು ಕೆಜಿಯಷ್ಟು ಚಿನ್ನದ ಆಭರಣಗಳನ್ನು ಕದ್ದಿರುವ ಬಗ್ಗೆ ಅಂದಾಜಿಸಲಾಗಿತ್ತು. ಈ ಸರಣಿ ಸರಗಳ್ಳತನದ ಹಿಂದೆ ಕುಖ್ಯಾತ ಭವಾಡಿಯಾ ಗ್ಯಾಂಗ್ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು.












Click it and Unblock the Notifications