ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೂಪಾಂತರಿ ಕೊರೋನಾ ವೈರೆಸ್ ಬಗ್ಗೆ ಶಾಂಕಿಂಗ್ ಮಾಹಿತಿ ಕೊಟ್ಟ ವಿಕ್ಟೋರಿಯಾ ಆಸ್ಪತ್ರೆ ವೈದ್ಯ !

|
Google Oneindia Kannada News

ಬೆಂಗಳೂರು, ಏಪ್ರಿಲ್ 25: ದೇಶಿ ರೂಪಾಂತರಿ ಕೊರೋನಾ ವೈರಸ್ ಬಗ್ಗೆ ಆಲಕ್ಷಿಸಬೇಡಿ. ಈ ರೂಪಾಂತರಿ ಕೊರೊನಾ ವೈರಸ್ RT PCR ಪರೀಕ್ಷೆಯಲ್ಲಿ ನೆಗೆಟಿವ್ ಬರುವ ಸಾಧ್ಯತೆಯಿದೆ. ಹಾಗಂತ ನೆಗೆಟಿವ್ ಎಂದು ಅಲಕ್ಷಿಸಿದರೆ ಪ್ರಾಣವೇ ಹೋಗುವ ಅಪಾಯವಿದೆ. ದಯವಿಟ್ಟು RT PCR ಫಲಿತಾಂಶ ನಂಬಿ ಕೂರದೇ ರೂಪಾಂತರಿ ಕೊರೋನಾ ವೈರಸ್ ಬಗ್ಗೆ ಜಾಗೃತವಾಗಿರಿ!

ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಿವಕುಮಾರ್ ಅವರು ನೀಡಿರುವ ಎಚ್ಚರಿಕೆ. ಸದ್ಯ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ಕೊಡುವ ಮೂಲಕ ವಾರಿಯರ್ ಆಗಿ ಡಾ. ಶಿವಕುಮಾರ್ ಕೆಲಸ ನಿರ್ವಹಿಸುತ್ತಿದ್ದಾರೆ. ಕೊರೊನಾ ಸೋಂಕಿತರಿಗೆ RT PCR ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ. ಸಿಟಿ ಸ್ಕ್ಯಾನ್ ಮಾಡಿದಾಗ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಅನೇಕ ಪ್ರಕರಣಗಳಲ್ಲಿ ಇದು ದೃಢ ಪಟ್ಟಿದೆ. ಮಾತ್ರವಲ್ಲದೇ RT PCR ನೆಗೆಟಿವ್ ವರದಿ ನಂಬಿ ಅಲಕ್ಷಿಸಿ ಜೀವ ಕಳೆದುಕೊಂಡವರನ್ನು ಕಣ್ಣಾರೆ ನೋಡಿದ ಶಿವಕುಮಾರ್ ಭಾನುವಾರ ಮಾಧ್ಯಮಗಳ ಎದುರು ಆಘಾತಕಾರಿ ಸಂಗತಿಯನ್ನು ಹೊರ ಹಾಕಿದ್ದಾರೆ.

RTPCR ಟೆಸ್ಟ್: ಬಿಬಿಎಂಪಿ RTPCR ಟೆಸ್ಟ್: ಬಿಬಿಎಂಪಿ "ಬಿಯು" ನಂಬರ್ "ಕಪಟ ನಾಟಕ" ಬಯಲು

ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ಯಾವುದೇ ಲಕ್ಷಣ ಕಾಣಿಸಿದರೂ ಅಲಕ್ಷಿಸಬೇಡಿ. ಮೊದಲು ಪ್ರಾಥಮಿಕ ಚಿಕಿತ್ಸೆ ಪಡೆದುಕೊಳ್ಳಿ. ರೂಪಾಂತರಿ ಕೊರೊನಾ ವೈರಸ್ RT PCR ಟೆಸ್ಟ್‌ನಲ್ಲಿ ನೆಗೆಟಿವ್ ಬರುತ್ತಿದೆ. ಆಗಂತ ನಿರ್ಲಕ್ಷ್ಯಿಸಿದರೆ ಜೀವವೇ ಹೋಗುವ ಅಪಾಯ ಎದುರಾಗುತ್ತದೆ. ಬೆರಳು ನೀಲಿಗಟ್ಟುವುದು, ಆಹಾರದಲ್ಲಿ ಟೇಸ್ಟ್ ಇಲ್ಲದಿರುವುದು, ನೆಗಡಿ, ಕೆಮ್ಮು, ಜ್ವರ ಯಾವುದೇ ಲಕ್ಷಣ ಕಾಣಿಸಿಕೊಂಡರೂ ಮೊದಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಿ. ಆರಂಭದಲ್ಲಿಯೇ ಚಿಕಿತ್ಸೆ ಪಡೆಯುವ ಮೂಲಕ ಜೀವ ಉಳಿಸಿಕೊಳ್ಳಬಹುದು. ಅಮೂಲ್ಯ ಜೀವವನ್ನು ಅಲಕ್ಷಿಸಬೇಡಿ. ಅದರಲ್ಲೂ ಮಕ್ಕಳು, ಗರ್ಭಿಣಿ ಮಹಿಳೆಯರು ತೀರಾ ಎಚ್ಚರಿಕೆ ವಹಿಸಬೇಕು. ಹಿಂದಿನ ಕೊರೋನಾ ವೈರಸ್‌ಗೆ ಹೋಲಿಸಿದರೆ ಈ ರೂಪಾಂತರಿ ಕೊರೋನಾ ವೈರಸ್ ಅಪಾಯಕಾರಿ ಎಂದು ಡಾ. ಶಿವಕುಮಾರ್ ತಿಳಿಸಿದ್ದಾರೆ.

Bengaluru: Victoria Hospital doctor given Shocking information about RT- PCR test and coronavirus!

Recommended Video

ಕೋವಿಡ್‌ ರೋಗಿಗಳು ಡಿಸ್ಚಾರ್ಜ್‌ ಆದ್ರೂ ಮಾಹಿತಿ ನೀಡದ ಆಸ್ಪತ್ರೆ! ಅಪೊಲೊ ವಿರುದ್ಧ ಎಫ್‌ಐಆರ್ ದಾಖಲು | Oneindia Kannada

ಒನ್ಇಂಡಿಯಾ ಕನ್ನಡ ಜತೆ ಮಾತನಾಡಿದ ಡಾ. ಶಿವಕುಮಾರ್, ಆಕ್ಸಿಜನ್ ಇಲ್ಲದೇ ಅನೇಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಾಗುತ್ತಿಲ್ಲ. ಎಲ್ಲೂ ಕೊರೋನಾ ಸೋಂಕಿತರಿಗೆ ಬೆಡ್ ಸಿಗುತ್ತಿಲ್ಲ. ಪರಿಸ್ಥಿತಿ ಕೈ ಮೀರುತ್ತಿದೆ. ಆಕ್ಸಿಜನ್ ಲಭ್ಯವಾಗದಿದ್ದರೆ ಇರುವ ಆಸ್ಪತ್ರೆಗಳು ಕೈತೊಳೆದು ಕೂರಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಜನರು ಎಚ್ಚರಿಕೆಯಿಂದ ಇರಬೇಕು. ಕೊರೊನಾ ಸೋಂಕು ಹರಡದಂತೆ ಎಚ್ಚರಿಕೆ ವಹಿಸಬೇಕು. ಸುರಕ್ಷಿತ ಮಾಸ್ಕ್ ಧರಿಸುವ ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

English summary
Victoria hospital medical officer dr shivakumar given shocking statement on RT PCR negative report and coronavirus know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X