Get Updates
Get notified of breaking news, exclusive insights, and must-see stories!

ರವಿ ಕೇಸ್ : ಜನ ಸಾಮಾನ್ಯರು ಸಿಬಿಐಗೆ ದೂರು ನೀಡಬಹುದೇ?

ದಕ್ಷ ಅಧಿಕಾರಿ ರವಿ ಅವರ ಪ್ರಕ್ರಣವನ್ನು ಸಿಬಿಐ ಸ್ವಯಂಪ್ರೇರಿತ ತನಿಖೆ ಮಾಡಿಲಿಲ್ಲವೇಕೆ? ಸಿಬಿಐ ಕೈಗೆತ್ತಿಕೊಳ್ಳುವ ಪ್ರಕರಣಗಳು ಯಾವುವು? ಡಿಕೆ ರವಿ ಪ್ರಕರಣವನ್ನು ಸಿಬಿಐನ ಯಾವ ತಂಡ ತನಿಖೆ ನಡೆಸಲಿದೆ? ಜನ ಸಾಮಾನ್ಯರು ಸಿಬಿಐಗೆ ದೂರು ನೀಡಬಹುದೇ? ಎಂಬೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಭ್ರಷ್ಟಾಚಾರ ನಿರ್ಮೂಲನೆ, ನಿಯಂತ್ರಣಕ್ಕಾಗಿ ಇರುವ ವಿಶೇಷ ತನಿಖಾ ಸಂಸ್ಥೆ ನೇರವಾಗಿ ಕೊಲೆ, ಕಳ್ಳತನ, ದರೋಡೆ ಮುಂತಾದ ಪ್ರಕರಣಗಳನ್ನು ಸ್ವಯಂ ಪ್ರೇರಿತವಾಗಿ ಕೈಗೆತ್ತಿಕೊಳ್ಳುವುದಿಲ್ಲ. ಹೀಗಾಗಿ ಡಿಕೆ ರವಿ ಪ್ರಕರಣವನ್ನು ಸಿಬಿಐ ಸ್ವಯಂ ಪ್ರೇರಿತವಾಗಿ ತನಿಖೆ ನಡೆಸಲಿಲ್ಲ. [ಸಿಐಡಿ ಮತ್ತು ಸಿಬಿಐ ನಡುವಿನ ವ್ಯತ್ಯಾಸವೇನು?]

ಈಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸೋಮವಾರದಂದು ವಿಧಾನಸೌಧದಲ್ಲಿ 'ಡಿಕೆ ರವಿ ಸಾವಿನ ಪ್ರಕರಣ ಸಿಬಿಐಗೆ ವಹಿಸಲು ತೀರ್ಮಾನಿಸಲಾಗಿದೆ' ಎಂದು ನಿರ್ಣಯ ಮಂಡಿಸಿದೆ.

ಸಿದ್ದರಾಮಯ್ಯ ಸರ್ಕಾರ ಮಂಡಿಸಿದ ನಿರ್ಣಯಕ್ಕೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಒಪ್ಪಿಗೆ ಸೂಚಿಸಿ ಅಂಕಿತ ಹಾಕಿದ ಮೇಲೆ ಈ ಪತ್ರ ಕೇಂದ್ರ ಗೃಹ ಸಚಿವಾಲಯ ಸೇರಲಿದೆ. ಅಲ್ಲಿಂದ ಸಿಬಿಐ ಕೇಂದ್ರ ಕಚೇರಿ ನಂತರ ಕರ್ನಾಟಕಕ್ಕೆ ಸಂಬಂಧಪಟ್ಟ ವಿಭಾಗಗಳಾದ ಮುಂಬೈ, ಚೆನ್ನೈಗೆ ರವಾನೆಯಾಗುತ್ತದೆ.

ಈ ಬಾರಿ ಚೆನ್ನೈ ಘಟಕ ಈ ತನಿಖೆ ನಡೆಸುವುದು ಬಹುತೇಕ ಖಾತ್ರಿಯಾಗಿದೆ. ಚೆನ್ನೈ ಘಟಕದ ಮುಖ್ಯಸ್ಥರು ಬೆಂಗಳೂರಿನ ಗಂಗಾನಗರದಲ್ಲಿರುವ ಸಿಬಿಐ ಕಚೇರಿಯ ಸಿಬ್ಬಂದಿಗಳ ಒಂದು ತಂಡ ತನಿಖೆ ಕೈಗೊಳ್ಳಲಿದೆ. [ಸಿಐಡಿ ತನಿಖೆಯಲ್ಲಿ ಯಾರು ಟಾರ್ಗೆಟ್]

ಸಿಬಿಐ ಯಾರಿಗೆ ರಿಪೋರ್ಟ್ ಮಾಡುತ್ತಾರೆ?

ಸಿಬಿಐ ಯಾರಿಗೆ ರಿಪೋರ್ಟ್ ಮಾಡುತ್ತಾರೆ?

ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆ 1988ರ ಅನ್ವಯ ಸಿಬಿಐ ತಂಡ ಎಸ್ಪಿ ಶ್ರೇಣಿಯ ಅಧಿಕಾರಿಗಳು ಸೆಂಟ್ರಲ್ ವಿಜಿಲನ್ಸ್ ಕಮಿಷನ್ (ಸಿವಿಸಿ) ಗೆ ರಿಪೋರ್ಟ್ ಮಾಡುತ್ತಾರೆ. ಕೆಲ ಪ್ರಕರಣಗಳಲ್ಲಿ ಕೇಂದ್ರ ವೈಯಕ್ತಿಕ ಪಿಂಚಣಿ ಹಾಗೂ ಕುಂದುಕೊರತೆ ಸಚಿವಾಲಯದ ಅಡಿಯಲ್ಲಿ ಬರುವ ಡಿಪಾರ್ಟ್ಮೆಂಟ್ ಆಫ್ ಪರ್ಸನಲ್ ಅಂಡ್ ಟ್ರೈನಿಂಗ್ (DoPT) ವಿಭಾಗಕ್ಕೆ ವರದಿ ಸಲ್ಲಿಸುತ್ತಾರೆ.

suo-moto ದಾಖಲಿಸಿಕೊಳ್ಳಲು ಸಾಧ್ಯವಿಲ್ಲವೇ?

suo-moto ದಾಖಲಿಸಿಕೊಳ್ಳಲು ಸಾಧ್ಯವಿಲ್ಲವೇ?

ಇಲ್ಲ. Delhi Special Police Establishment (DSPE) Act, 1946 ಅನ್ವಯ ಸಿಬಿಐ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಲು ಸಾಧ್ಯವಿಲ್ಲ. ಮೂರು ವಿಭಾಗದ ಪ್ರಕರಣಗಳಲ್ಲಿ ಮಾತ್ರ ನೇರ ತನಿಖೆ ಸಾಧ್ಯವಿದೆ. ಸಾರ್ವಜನಿಕರು ಕೂಡಾ ನೇರವಾಗಿ ಈ ವಿಭಾಗಗಳಲ್ಲಿ ದೂರು ನೀಡಬಹುದು.

ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳಿಂದ ಮನವಿ ಹಾಗೂ ಕೇಂದ್ರ ಗೃಹ ಸಚಿವಾಲಯದ ನಿರ್ದೇಶನ ಬರದಿದ್ದರೆ ಸಿಬಿಐ ರಾಜ್ಯಗಳಲ್ಲಿನ ಕ್ರೈಂ ಕೇಸಿಗೆ ತಲೆ ಹಾಕುವುದಿಲ್ಲ.ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್ ಮಾತ್ರ ನೇರವಾಗಿ ಸ್ವಯಂ ಪ್ರೇರಿತ ತನಿಖೆ ನಡೆಸುವಂತೆ ಸಿಬಿಐಗೆ ಸೂಚಿಸಬಹುದು.

ಯಾವ ರೀತಿ ಪ್ರಕರಣಗಳನ್ನು ಸಿಬಿಐ ತನಿಖೆ ನಡೆಸುತ್ತದೆ?

ಯಾವ ರೀತಿ ಪ್ರಕರಣಗಳನ್ನು ಸಿಬಿಐ ತನಿಖೆ ನಡೆಸುತ್ತದೆ?

* ಭ್ರಷ್ಟಾಚಾರ ನಿಗ್ರಹ ವಿಭಾಗ: 1988ರ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅನ್ವಯ ಕೇಂದ್ರ ಅಥವಾ ರಾಜ್ಯ ಸರ್ಕಾರ ನೌಕರರು, ಸರ್ಕಾರಿ ಸ್ವಾಮ್ಯದ ಸಂಸ್ಥೆ ಸಿಬ್ಬಂದಿ, ಕಾರ್ಪೊರೇಷನ್ ಅವ್ಯವಹಾರ.
* ಆರ್ಥಿಕ ಅವ್ಯವಹಾರ ವಿಭಾಗ: ಪ್ರಮುಖ ಆರ್ಥಿಕ ಹಗರಣ, ವಿದೇಶಿ ವಿನಿಮಯ ವಂಚನೆ, ಮನಿ ಲಾಂಡ್ರಿಂಗ್, ನಕಲಿ ನೋಟು, ಬ್ಯಾಂಕಿಗೆ ಮೋಸ, ಸೈಬರ್ ಕ್ರೈಂ.
* ವಿಶೇಷ ಕ್ರೈಂ ವಿಭಾಗ: ಭಾರತೀಯ ದಂಡ ಸಂಹಿತೆ ಅನ್ವಯ ದಾಖಲಾದ ಅತ್ಯಂತ ಭೀಕರ ಯೋಜಿತ ಕ್ರೈಂ, ರಾಜ್ಯ ಸರ್ಕಾರ, ಕೋರ್ಟ್ ಗಳಿಂದ ಮನವಿ ಬಂದಾಗ ಡಿಎಸ್ ಪಿಇ ಕಾಯ್ದೆ ಸೆಕ್ಷನ್ 3 ಅನ್ವಯ ತನಿಖೆ.

ಬೆಂಗಳೂರು ಕಚೇರಿ ಎಲ್ಲಿದೆ?

ಬೆಂಗಳೂರು ಕಚೇರಿ ಎಲ್ಲಿದೆ?

ಸಿಬಿಐ ಎಸ್ಪಿ ಕಚೇರಿ, ನಂ.36
ಬಳ್ಳಾರಿ ರಸ್ತೆ
ಗಂಗಾನಗರ
ಬೆಂಗಳೂರು -560 032
ಸಂಪರ್ಕ: 080- 2333 2726 ಹಾಗೂ 09448044355
ಇಮೇಲ್ : [email protected]

ದೂರು ಸಲ್ಲಿಸುವುದು ಹೇಗೆ?

ದೂರು ಸಲ್ಲಿಸುವುದು ಹೇಗೆ?

ಸಾರ್ವಜನಿಕರು ಭ್ರಷ್ಟಾಚಾರ ಪ್ರಕರಣವಲ್ಲದೆ ಮಾನವ ಅಕ್ರಮ ಕಳ್ಳಸಾಗಣೆ, ಸೈಬರ್ ಕ್ರೈಂ ಕಂಡು ಬಂದರೆ ಸಿಬಿಐ ವೆಬ್ ಸೈಟ್ ಗೆ ಭೇಟಿ ಕೊಡಿ. ನಿಮ್ಮ ಗುರುತು ಚೀಟಿ ಸಮೇತ ದೂರು ದಾಖಲಿಸಬೇಕು. ಅನಾಮಿಕ ಕರೆ, ಬೇನಾಮಿ ಹೆಸರಿನಲ್ಲಿ ದೂರುಗಳನ್ನು ಸ್ವೀಕರಿಸುವುದಿಲ್ಲ.

* ಆಲ್ ಇಂಡಿಯಾ ಹೆಲ್ಪ್ ಲೈನ್ 011-24368638
* ಸೈಬರ್ ಕ್ರೈಂ ದೂರಿಗೆ ಮೇಲ್ ಐಡಿ: speou9del[at]cbi[dot]gov[dot]in
* ಬ್ಯಾಂಕ್ ವಂಚನೆ ಪ್ರಕರಣಕ್ಕೆ : hobbsfdel[at]cbi[dot]gov[dot]in
* ಆರ್ಥಿಕ ಅವ್ಯವಹಾರ ಸಂಬಂಧಿತ ದೂರಿಗೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+