ನಳಿನ್ ಕುಮಾರ್ ಕಟೀಲ್ ಜೊತೆ ಭಿನ್ನಾಭಿಪ್ರಾಯ: ಬಿಎಸ್‌ವೈ ಹೇಳಿದ್ದಿಷ್ಟು

ಬೆಂಗಳೂರು, ಅಕ್ಟೋಬರ್ 3: ನಳಿನ್ ಕುಮಾರ್ ಕಟೀಲ್ ಹಾಗೂ ನನ್ನ ನಡುವೆ ಗುಲಗಂಜಿಯಷ್ಟೂ ಭಿನ್ನಾಭಿಪ್ರಾಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ಬರು ಪರಸ್ಪರ ಸಮಾಲೋಚನೆ ಮಾಡಿ ತೀರ್ಮಾನ ಮಾಡುತ್ತಿದ್ದೇವೆ.

ಕೆಲವರು ಎಲ್ಲವೂ ಅರಿ ಇಲ್ಲ ಎಂದು ವರದಿ ಮಾಡುತ್ತಿದ್ದಾರೆ ಅದು ಸತ್ಯ ಅಲ್ಲ. ನಾವು ಸರಿ ಇದ್ದೇವೆ ಬಿಬಿಎಂಪಿ ಚುನಾವಣೆ ವಿಚಾರದಲ್ಲಿ ಇಬ್ಬರು ಚರ್ಚೆ ಮಾಡಿ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದರು.

 ಕೇಂದ್ರ ಸರ್ಕಾರವು ಯಾವ ರಾಜ್ಯಕ್ಕೂ ಪರಿಹಾರ ಬಿಡುಗಡೆ ಮಾಡಿಲ್ಲ

ಕೇಂದ್ರ ಸರ್ಕಾರವು ಯಾವ ರಾಜ್ಯಕ್ಕೂ ಪರಿಹಾರ ಬಿಡುಗಡೆ ಮಾಡಿಲ್ಲ

ಕೇಂದ್ರ ಸರ್ಕಾರವು ಇದುವರೆಗೆ ಯಾವ ರಾಜ್ಯಕ್ಕೂ ನೆರೆ ಪರಿಹಾರ ಹಣವನ್ನು ಬಿಡುಗಡೆ ಮಾಡಿಲ್ಲ, ಆದಷ್ಟು ಬೇಗ ಹಣ ಬಿಡುಗಡೆ ಮಾಡಲಾಗುತ್ತದೆ.ಹಾಗೆಂದು ನಾವು ಸುಮ್ಮನೆ ಕೂತಿಲ್ಲ, ರಾಜ್ಯ ಸರ್ಕಾರದಿಂದ ಹಣ ಬಿಡುಗಡೆ ಮಾಡಿದ್ದೇವೆ, ಪ್ರಧಾನಿ ಮೋದಿ ವಿದೇಶ ಪ್ರವಾಸದಲ್ಲಿ ಇದ್ರು, ಸ್ವಲ್ಪ ಕಾಲಾವಕಾಶ ಬೇಕಿದೆ ಎಂದರು.

 ನೆರೆ ವಿಚಾರದಲ್ಲಿ ವಿರೋಧ ಪಕ್ಷಗಳು ಬೊಬ್ಬೆ ಹೊಡೆಯುವುದು ನಿಲ್ಲಿಸಬೇಕು

ನೆರೆ ವಿಚಾರದಲ್ಲಿ ವಿರೋಧ ಪಕ್ಷಗಳು ಬೊಬ್ಬೆ ಹೊಡೆಯುವುದು ನಿಲ್ಲಿಸಬೇಕು

ನೆರೆ ಪರಿಹಾರ ವಿಚಾರವಾಗಿ ವಿರೋಧ ಪಕ್ಷಗಳು ಬೊಬ್ಬೆ ಹೊಡೆಯುವುದನ್ನು ನಿಲ್ಲಿಸಬೇಕು. ಕ್ಯಾಬಿನೆಟ್ ಮೀಟಿಂಗ್ ಆದಮೇಲೆ, ಬೆಳಗಾವಿ ಭಾಗಕ್ಕೆ ಹೋಗಿ ಅಲ್ಲಿ ಆಗಿರುವ ಅತಿವೃಷ್ಟಿ ಪರಿಸ್ಥಿತಿ ಬಗ್ಗೆ ಗಮನ ಹರಿಸುತ್ತೇವೆ ಎಂದರು.

 ರಸ್ತೆ ಕೆಳಸೇತುವೆಗಳಿಗೆ ದೊಡ್ಡ ಮಟ್ಟದ ಹಾನಿ

ರಸ್ತೆ ಕೆಳಸೇತುವೆಗಳಿಗೆ ದೊಡ್ಡ ಮಟ್ಟದ ಹಾನಿ

ರಸ್ತೆ ಕೆಳ ಸೇತುವೆಗಳಿಗೆ ದೊಡ್ಡ ಪ್ರಮಾಣದಲ್ಲಿ ಹಾನಿ ಆಗಿದೆ. ದೊಡ್ಡ ಪ್ರಮಾಣದ ಅನುದಾನ ಬೇಕು, ಮತ್ತೊಂದು ಬಾರಿ ದೆಹಲಿಗೆ ಹೋಗಿ ಪರಿಹಾರ ಕೇಳುತ್ತೇನೆ ಎಂದು ಹೇಳಿದರು.

 ನೆರೆ ಪರಿಹಾರ: ಜನತೆ ಕ್ಷಮೆ ಕೋರಿದ ಶ್ರೀರಾಮುಲು

ನೆರೆ ಪರಿಹಾರ: ಜನತೆ ಕ್ಷಮೆ ಕೋರಿದ ಶ್ರೀರಾಮುಲು

ನೆರೆ ಪರಿಹಾರ ನೀಡುವುದಕ್ಕೆ ತಡವಾಗುತ್ತಿದೆ. ರಾಜ್ಯದ ಜನರ ಪರಿಸ್ಥಿತಿ ನೋಡಿ ಬೇಸರವಾಗುತ್ತಿದೆ. ಆದಷ್ಟು ಬೇಗ ಕೇಂದ್ರ ಸರ್ಕಾರವು ಹಣವನ್ನು ಬಿಡುಗಡೆ ಮಾಡಲಿದೆ. ಪರಿಹಾರ ತಡವಾಗಿದ್ದಕ್ಕೆ ನಿಮ್ಮಲ್ಲಿ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+