ಬಣ್ಣ ಬಣ್ಣದ ಚಿತ್ತಾರ ಕಲರ್ ಥಾನ್ ಸ್ಪರ್ಧೆ
ಬೆಂಗಳೂರು, ಜ.21: ವಂದೇ ಮಾತರಂ ಟ್ರಸ್ಟ್ ಹಾಗೂ ಐಡಿಎಲ್ ಫೌಂಡೇಶನ್ ಜಂಟಿಯಾಗಿ ಕಲರ್ ಥಾನ್ ಹೆಸರಿನಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಿದೆ. ಗಣತಂತ್ರ ದಿನದಂದು ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.
ಪ್ರತಿ ವಿಭಾಗದಿಂದ 5 ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡಲಾಗುವುದು. ಇದರಲ್ಲಿ 3 ಅತ್ಯುತ್ತಮ ಚಿತ್ರಗಳನ್ನು ಬಿಡಿಸಿದ ಕಲಾವಿದರಿಗೆ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಗೌರವಿಸಲಿದ್ದಾರೆ. ಇದ್ರ ಜೊತೆ 50 ಖ್ಯಾತ ಕಲಾವಿದರು ಐಡಿಯಲ್ ಫೌಂಡೇಷನ್‍ಗಾಗಿ ಲೈವ್ ಪೈಂಟಿಂಗ್ ಕೂಡ ಮಾಡಲಿದ್ದಾರೆ. ಇದನ್ನು ಐಡಿಯಲ್ ಫೌಂಡೇಷನ್ ಹರಾಜು ಹಾಕಲಿದೆ. ಕಲರ್ ಥಾನ್ 2014ರಲ್ಲಿ ಪೈಂಟಿಂಗ್ ಹೊರತಾಗಿ ಕೆಲವು ವಿಭಿನ್ನ ಕಾರ್ಯಕ್ರಮಗಳಿವೆ.

* ಆರ್.ಡಿ. 350 ಬೈಕರ್ಸ್ ಕ್ಲಬ್‍ನ ಸುಮಾರು 200 ಸದಸ್ಯರು ಪೈಂಟಿಂಗ್ ನಡೆಯುವ ಸ್ಥಳದಿಂದ 5 ಕಿಲೋಮೀಟರ್ ಸುತ್ತಳತೆಯಲ್ಲಿ ಬೈಕ್ ರ್ಯಾಲಿ ನಡೆಸಲಿದ್ದಾರೆ.
* ಮಕ್ಕಳ ಮನಗೆದ್ದ ಚೋಟಾಬೀಮ್, ಚುಟ್ಕಿ ಮತ್ತು ಮೈಟಿ ರಾಜು ಬೈಕ್ ರ್ಯಾಲಿಯ ಭಾಗವಾಗಿ ಕಾಣಿಸಿಕೊಳ್ಳಲಿದ್ದಾರೆ.
* ಲೈವ್ ಮ್ಯೂಸಿಕ್ ಬ್ಯಾಂಡ್ ಫರ್ಪಾಮೆನ್ಸ್ ಕೂಡ ಕಲರ್‍ಥಾನ್ 2014 ಕಾರ್ಯಕ್ರಮದ ಹೈಲೈಟ್ ಆಗಲಿದೆ. ಇದ್ರಲ್ಲಿ ಆರ್ಟ್ ಬಜಾರ್, ಮ್ಯಾಜಿಕ್ ಶೋ, ಡ್ರಮ್ ಸರ್ಕಲ್ ಇಂಡಿಯಾ ಬೈ ಡ್ರಮ್ಸ್ ಇಂಡಿಯಾ ಜೊತೆಗೆ ಕಾಮಿಡಿ ಶೋ ಕೂಡ ಇರಲಿದೆ.
ಕಲರ್‍ಥಾನ್2014 ಜನವರಿ 26ರಂದು ಬೆಳಗ್ಗೆ 8 ಗಂಟೆಗೆ ಬಸವನಗುಡಿಯ ಕೃಷ್ಣರಾವ್ ಪಾರ್ಕ್‍ನಲ್ಲಿ ಆರಂಭವಾಗಲಿದೆ. 10 ರಿಂದ 12.30ರ ತನಕ ಪೈಂಟಿಂಗ್ ನಡೆಯಲಿದೆ. ಕಲರ್‍ಥಾನ್2014ನಲ್ಲಿ ಪಾಲ್ಗೊಳ್ಳಲು ಯಾವುದೇ ರಿಜಿಸ್ಟ್ರೇಷನ್ ಫೀಸ್ ಇಲ್ಲ. ಪೈಂಟಿಂಗ್‍ಗೆ ಬೇಕಾದ ಎಲ್ಲಾ ವಸ್ತುಗಳನ್ನು ಭಾಗವಹಿಸುವವರೇ ತರಬೇಕಿದೆ. ಆಯೋಜಕರು ಪೇಪರ್‍ಗಳನ್ನು ಮಾತ್ರ ಒದಗಿಸಕೊಡಲಿದ್ದಾರೆ.
* 9 ವರ್ಷದೊಳಗಿನವರಿಗೆ
* 10 ರಿಂದ 12 ವರ್ಷ ಒಳಗಿನವರಿಗೆ
* 13ರಿಂದ 20 ವರ್ಷ ಒಳಗಿನವರಿಗೆ
* 21 ರಿಂದ 30 ವರ್ಷದವರಿಗೆ
* 30 ವರ್ಷ ಮೇಲಿನವರಿಗೆ ಸ್ಪರ್ಧೆ ನಡೆಯಲಿದೆ.
ರಿಜಿಸ್ಟ್ರೇಷನ್ ಗಾಗಿ ಇಲ್ಲಿ ಸಂಪರ್ಕಿಸಿ
www.colorothon.com Or call : 9483537475, 9986984878











Click it and Unblock the Notifications