ವಂದೇ ಭಾರತ್ ; ಮುಂದಿನ ವಾರ ಬೆಂಗಳೂರಿಗೆ 7 ವಿಮಾನ ಆಗಮನ
ಬೆಂಗಳೂರು, ಜೂನ್ 25 : ವಂದೇ ಭಾರತ್ ಮಿಷನ್‌ನ 3ನೇ ಹಂತದ ಕಾರ್ಯಾಚರಣೆಯಲ್ಲಿ ಬೆಂಗಳೂರು ನಗರಕ್ಕೆ 7 ವಿಮಾನಗಳು ಆಗಮಿಸಲಿವೆ. ಮುಂದಿನ ವಾರ ಅಮೆರಿಕದಿಂದ ಕನ್ನಡಿಗರು ಆಗಮಿಸಲಿದ್ದಾರೆ.
Recommended Video
7 ವಿಮಾನಗಳು ಸಹ ಸ್ಯಾನ್ ಫ್ರಾನ್ಸಿಸ್ಕೊನಿಂದ ಹೊರಡಲಿದ್ದು ದೆಹಲಿಗೆ ಆಗಮಿಸಿ ಬಳಿಕ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ಸೇರಲಿದೆ. ಆದರೆ ಈ ವಿಮಾನದಲ್ಲಿ ಪ್ರಜೆಗಳನ್ನು ತವರು ದೇಶಕ್ಕೆ ಕರೆತರಲು ಅಮೆರಿಕ ಒಪ್ಪಿಗೆ ನೀಡಿಲ್ಲ.
ಒಟ್ಟು 1,183 ಕನ್ನಡಿಗರು ಸ್ಯಾನ್ ಫ್ರಾನ್ಸಿಸ್ಕೊನಿಂದ ಬೆಂಗಳೂರಿಗೆ ಆಗಮಿಸಲಿದ್ದಾರೆ. 169 ಪ್ರಯಾಣಿಕರು ಇರುವ ಮೊದಲ ವಿಮಾನ ಬುಧವಾರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಂದೇ ಭಾರತ್ ಮಿಷನ್ ಅಡಿ ಹಾರಾಟ ನಡೆಸುವ ವಿಮಾನದಲ್ಲಿ ಅಮೆರಿಕದ ಪ್ರಜೆಗಳು ದೇಶಕ್ಕೆ ವಾಪಸ್ ಆಗಲು ಅಮೆರಿಕೆ ನಿರ್ಬಂಧ ಹೇರಿದೆ. ಆದ್ದರಿಂದ ಭಾರತದಿಂದಿ ವಿಮಾನದಲ್ಲಿ ಸಿಬ್ಬಂದಿಗಳು ಮಾತ್ರ ಸಂಚಾರ ನಡೆಸಲಿದ್ದಾರೆ.
ಅಮೆರಿಕ ಮಾತ್ರವಲ್ಲ ಭಾರತದಿಂದ ತನ್ನ ದೇಶದ ಪ್ರಜೆಗಳು ವಂದೇ ಭಾರತ್ ಮಿಷನ್ ಅಡಿ ಹಾರಾಟ ನಡೆಸುವ ವಿಮಾನದಲ್ಲಿ ಆಗಮಿಸುವಂತಿಲ್ಲ ಎಂದು ಫ್ರಾನ್ಸ್ ಸರ್ಕಾರವೂ ನಿರ್ಬಂಧ ಹೇರಿದೆ. ಆದರೆ ಪ್ಯಾರೀಸ್‌ನಿಂದ ಭಾರತೀಯರು ವಾಪಸ್ ತೆರಳಲು ಅನುಮತಿ ನೀಡಲಾಗಿದೆ.
ವಂದೇ ಭಾರತ್ ಮಿಷನ್‌ನ 3ನೇ ಹಂತದ ಕಾರ್ಯಾಚರಣೆಯಲ್ಲಿ 35 ವಿಮಾನಗಳು ಬೇರೆ-ಬೇರೆ ದೇಶಗಳಿಂದ ಬೆಂಗಳೂರು ನಗರಕ್ಕೆ ಆಗಮಿಸಲಿವೆ. ವಿಮಾನದಲ್ಲಿ ಬಂದ ಎಲ್ಲರೂ ಅವರ ಖರ್ಚಿನಲ್ಲಿಯೇ ಕ್ವಾರಂಟೈನ್‌ನಲ್ಲಿ ಇರಲಿದ್ದು, ಬಳಿಕ ಮನೆಗೆ ವಾಪಸ್ ಆಗಲಿದ್ದಾರೆ.












Click it and Unblock the Notifications