Vande Bharat Express: ವಂದೇ ಭಾರತ್ ಎಕ್ಸ್‌ಪ್ರೆಸ್: ಬೆಂಗಳೂರು ಸೇರಿ ದಕ್ಷಿಣ ಭಾರತಕ್ಕೆ ಈ ವಿಚಾರದಲ್ಲಿ ಅನ್ಯಾಯ ?!
Vande Bharat Express: ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ವಿಸ್ತರಿಸಲಾಗಿದೆ. ಇದೀಗ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಗಳೂರು ಸೇರಿದಂತೆ ದಕ್ಷಿಣ ಭಾರತಕ್ಕೆ ಅನ್ಯಾಯ ಮಾಡಲಾಗುತ್ತಿದೆ ಎನ್ನುವ ವಿಚಾರವು ಭಾರೀ ಚರ್ಚೆಗೆ ಕಾರಣವಾಗಿದೆ. ಹೌದು, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ನಿರ್ದಿಷ್ಟ ವಿಷಯದ ಬಗ್ಗೆ ಆಕ್ಷೇಪಣೆ ವ್ಯಕ್ತವಾಗುತ್ತಿದೆ. ಬೆಂಗಳೂರು ಹಾಗೂ ಕೊಯಮತ್ತೂರು ರೈಲು ನಿಲ್ದಾಣಗಳನ್ನು ಸಂಪರ್ಕಿಸುವ ವಂದೇ ಭಾರತ್ ರೈಲಿನಲ್ಲಿ ಸಮಸ್ಯೆ ಆಗುತ್ತಿರುವ ಬಗ್ಗೆ ಗಂಭೀರವಾದ ಚರ್ಚೆ ಆಗುತ್ತಿದೆ. ಇದು ಕನ್ನಡ ಭಾಷೆ ಬಳಕೆಯ ವಿಚಾರಕ್ಕೂ ಸಂಬಂಧಿಸಿರುವುದರಿಂದ ಚರ್ಚೆ ಜೋರಾಗಿದೆ.
ಕರ್ನಾಟಕದಲ್ಲಿ ಹಾಗೂ ಉತ್ತರ ಭಾರತ ಹಾಗೂ ದಕ್ಷಿಣ ಭಾರತ ರಾಜ್ಯಗಳ ನಡುವೆ ಭಾಷಾ ವಿವಾದ ಜೋರಾಗಿರುವ ನಡುವೆಯೇ ವಂದೇ ಭಾರತ್ ಎಕ್ಸ್‌ಪ್ರೆಸ್ ವಿಚಾರವಾಗಿ ಭಾರೀ ಚರ್ಚೆಗಳು ಶುರುವಾಗಿವೆ. ದಕ್ಷಿಣ ಭಾರತದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಯ ಬಗ್ಗೆ ಮೊದಲಿನಿಂದಲೂ ಕೆಲವೊಂದು ಆಕ್ಷೇಪಣೆಗಳು ಇವೆ. ಇದೀಗ ದಕ್ಷಿಣ ಭಾರತದ ಆಹಾರ ವಿಚಾರದಲ್ಲಿ ಭಾರೀ ಚರ್ಚೆಗಳು ಶುರುವಾಗಿವೆ.

ದಕ್ಷಿಣ ಭಾರತದ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎನ್ನುವ ವಿಚಾರವು ಚರ್ಚೆಯಲ್ಲಿ ಇರುವಾಗಲೇ ಮತ್ತೊಂದು ರೀತಿಯ ಆಹಾರ ಪದ್ಧತಿ ಹೇರಿಕೆಯಾಗುತ್ತಿದೆ ಎನ್ನುವ ವಿಚಾರವು ಇದೀಗ ಕನ್ನಡಿಗರು ಸೇರಿದಂತೆ ದಕ್ಷಿಣ ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹೊಸ ವಿಷಯ ಅಥವಾ ವಿವಾದಕ್ಕೆ ಕಾರಣವಾಗಿರುವುದು ಮಲೆಯಾಳಂನ ಬರಹಗಾರರಾದ ಎಂ.ಎಸ್. ಮಾಧವನ್ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಮಾಡಿರುವ ಒಂದು ಪೋಸ್ಟ್. ದಕ್ಷಿಣ ಭಾರತದ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಕರ್ನಾಟಕ ಸೇರಿದಂತೆ ಪ್ರಾದೇಶಿಕವಾಗಿ ಸಿಗುವ ಆಹಾರ ಪದ್ಧತಿಗಳನ್ನು ಕೊಡುತ್ತಿಲ್ಲ ಅಥವಾ ಈ ಸೌಲಭ್ಯವನ್ನು ಯಾಕೆ ಕಲ್ಪಿಸಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ಅವರು (ಕನ್ನಡಿಗರು ಸೇರಿದಂತೆ ದಕ್ಷಿಣ ಭಾರತೀಯರು) ಭಾಷಾ ಹೇರಿಕೆಯ ಬಗ್ಗೆ ಮಾತನಾಡುತ್ತಾರೆ. ಆದರೆ, ಆಹಾರ ಹೇರಿಕೆ ಆಗುತ್ತಿರುವುದು ಏನು ಎಂದು ಪ್ರಶ್ನೆ ಮಾಡಿದ್ದಾರೆ. ದಕ್ಷಿಣ ಭಾರತದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ ನೀಡಲಾಗುವ ವಿಶೇಷ ತಿಂಡಿಗಳ ಬಗ್ಗೆ ಅವರು ಚಕಾರವನ್ನು ಎತ್ತಿದ್ದಾರೆ. ಇದಕ್ಕೆ ಹಲವರು ಇದು ನಿಜಾ ಎಂದು ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರು - ಕೊಯಮತ್ತೂರು (ಮಾರ್ಗವಾಗಿ ಸಂಚರಿಸುವ) ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಬಗ್ಗೆ ಅವರು ಮಾತನಾಡಿದ್ದಾರೆ.

ಅಲ್ಲದೇ ಪ್ರಾತಿನಿಧ್ಯವಿಲ್ಲದ ಅಥವಾ ದಕ್ಷಿಣ ಭಾರತದ ಆಹಾರ - ತಿನಿಸುಗಳನ್ನು ನೀಡದೆ ಇರುವ ಬಗ್ಗೆ ಅವರು ಪ್ರಶ್ನೆ ಮಾಡಿದ್ದಾರೆ. ದಕ್ಷಿಣ ಭಾರತದಲ್ಲಿ ಹಿಂದಿ ಹೇರಿಕೆಯ ಬಗ್ಗೆ ಮಾತ್ರ ಚರ್ಚೆ ನಡೆಯುತ್ತಿದೆ. ಆದರೆ ಆಹಾರ ಹೇರಿಕೆಯ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮನೀಶ್ ಎನ್ನುವವರು, ನಾನು ಉತ್ತರ/ಪಶ್ಚಿಮ ಭಾರತೀಯ ವೈಯಕ್ತಿಕವಾಗಿ ನನಗೆ ಯಾವುದೇ ನಿರ್ದಿಷ್ಟ ಆಹಾರ ಆದ್ಯತೆಗಳು ಇಲ್ಲ. ಆದರೆ, ನಿರ್ದಿಷ್ಟ ಪ್ರದೇಶಕ್ಕೆ ಸೇವೆ ಸಲ್ಲಿಸುವ ರೈಲುಗಳು ಆಯಾ ಪ್ರದೇಶದ ಆಹಾರ ಆದ್ಯತೆಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎನ್ನುವುದನ್ನು ನಾನು ಒಪ್ಪುತ್ತೇನೆ ಎಂದು ಹೇಳಿದ್ದಾರೆ.
They speak about language imposition. What about food imposition. Typical snacks served in South Indian Vande Bharat trains. This one from Bengaluru-Coimbatore VB. pic.twitter.com/z2ZuSo6q7T
— N.S. Madhavan (@NSMlive) April 15, 2025
ಇನ್ನೂ ಕೆಲವರು ಇದಕ್ಕೆ ತೀವ್ರ ಆಕ್ಷೇಪಣೆಯನ್ನು ವ್ಯಕ್ತಪಡಿಸಿದ್ದಾರೆ. ಅನವಶ್ಯಕವಾಗಿ ವಿವಾದವನ್ನು ಸೃಷ್ಟಿ ಮಾಡಲಾಗುತ್ತಿದೆ. ಈ ರೀತಿಯ ವಿವಾದ ಅಥವಾ ಚರ್ಚೆ ಅನಗತ್ಯವಾಗಿದೆ. ಯಾರಿಗಾದರೂ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಆಹಾರ ಬೇಕೋ ಬೇಡವೋ ಎಂದು ಮೊದಲೇ ಕೇಳಲಾಗುತ್ತದೆ ಎಂದೂ ಕೆಲವರು ಹೇಳಿದ್ದಾರೆ. ಒಟ್ಟಾರೆ ಇದು ಪರ - ವಿರೋಧ ಚರ್ಚೆಗೆ ಕಾರಣವಾಗಿದೆ.












Click it and Unblock the Notifications