ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Vande Bharat Express: ಬೆಂಗಳೂರು- ಹುಬ್ಬಳ್ಳಿ ನಡುವೆ ಓಡಲಿದೆ ವಂದೇ ಭಾರತ್, ಮಾಹಿತಿ ಇಲ್ಲಿದೆ

ಬೆಂಗಳೂರು - ಹುಬ್ಬಳ್ಳಿ ರೈಲ್ವೆ ಮಾರ್ಗದ ವಿದ್ಯುದೀಕರಣ ಮಾರ್ಚ್‌ ಅಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಏಪ್ರಿಲ್‌ನಲ್ಲಿ ಬಹುನಿರೀಕ್ಷಿತ ವಂದೇ ಭಾರತ್‌ ಸಂಚಾರ ಆರಂಭಿಸಲಿದೆ.

|
Google Oneindia Kannada News

ಬೆಂಗಳೂರು, ಫೆಬ್ರವರಿ. 09: ರೈಲ್ವೇ ವಲಯದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ರಾಜ್ಯಕ್ಕೂ ಕಾಲಿಟ್ಟಿದೆ. ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ಇವುಗಳ ಬಗ್ಗೆ ಜನ ಆಸಕ್ತಿ ಹೊಂದಿದ್ದು, ತಮ್ಮ ಜಿಲ್ಲೆಗಳಿಗೂ ಬೇಕು ಎಂಬ ಬೇಡಿಕೆಯಿಡುತ್ತಿದ್ದಾರೆ.

ಇದೇ ರೀತಿ ನೈಋುತ್ಯ ರೈಲ್ವೆಯ ಬಹುನಿರೀಕ್ಷಿತ ಬೆಂಗಳೂರು - ಹುಬ್ಬಳ್ಳಿ ರೈಲ್ವೆ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲುಗಳು ಓಡಾಡ ಆರಂಭಿಸಲಿವೆ. ಈಗಾಗಲೇ ಈ ಬಗ್ಗೆ ನೈಋುತ್ಯ ರೈಲ್ವೆ ಹಲವು ಕ್ರಮಗಳನ್ನು ತೆಗೆದುಕೊಂಡಿದ್ದು, ಏಪ್ರಿಲ್‌ನಲ್ಲಿ ವಂದೇ ಭಾರತ್‌ ಕಾರ್ಯಚರಣೆ ಆರಂಭಿಸುವ ಸಾಧ್ಯತೆಯಿದೆ.

Vande Bharat; ಬೆಂಗಳೂರು-ಚೆನ್ನೈ ನಡುವಿನ ರೈಲಿನ ವೇಗ ಹೆಚ್ಚಳVande Bharat; ಬೆಂಗಳೂರು-ಚೆನ್ನೈ ನಡುವಿನ ರೈಲಿನ ವೇಗ ಹೆಚ್ಚಳ

ಬೆಂಗಳೂರು - ಹುಬ್ಬಳ್ಳಿ ರೈಲ್ವೆ ಮಾರ್ಗದ ವಿದ್ಯುದೀಕರಣ ಮಾರ್ಚ್‌ ಅಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಏಪ್ರಿಲ್‌ನಲ್ಲಿ ಬಹುನಿರೀಕ್ಷಿತ ವಂದೇ ಭಾರತ್‌ ಸಂಚಾರ ಆರಂಭಿಸಲಿದೆ.

ಏಪ್ರಿಲ್‌ನಲ್ಲಿ ಬೆಂಗಳೂರು-ಹುಬ್ಬಳ್ಳಿ ಬಹುನಿರೀಕ್ಷಿತ ವಂದೇ ಭಾರತ್‌

ಏಪ್ರಿಲ್‌ನಲ್ಲಿ ಬೆಂಗಳೂರು-ಹುಬ್ಬಳ್ಳಿ ಬಹುನಿರೀಕ್ಷಿತ ವಂದೇ ಭಾರತ್‌

ರಾಜ್ಯವು ತನ್ನ ಮೊದಲ ಬೆಂಗಳೂರು - ಹುಬ್ಬಳ್ಳಿ ವಂದೇ ಭಾರತ್ ಎಕ್ಸ್‌ಪ್ರೆಸ್ ಹೈಸ್ಪೀಡ್ ರೈಲನ್ನು ಏಪ್ರಿಲ್‌ 2023 ರೊಳಗೆ ಓಡಿಸಲಿದೆ ಎಂದು ಈ ಹಿಂದೆ ಕೇಂದ್ರ ರೈಲ್ವೆ ಮತ್ತು ಜವಳಿ ಖಾತೆ ರಾಜ್ಯ ಸಚಿವ ದರ್ಶನ ಜರ್ದೋಶ್ ಈ ಬಗ್ಗೆ ಮಾಹಿತಿ ನೀಡಿದ್ದರು.

ಮಾರ್ಚ್ 2023 ರ ವೇಳೆಗೆ ಹೈಸ್ಪೀಡ್ ರೈಲು ಕಾರ್ಯಾಚರಣೆಗೆ ಸಿದ್ಧವಾಗಲಿದೆ. ಈ ಮಾರ್ಗದಲ್ಲಿ ಹಳಿ ದ್ವಿಗುಣಗೊಳಿಸುವ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದರು. ಬೆಂಗಳೂರು-ಹುಬ್ಬಳ್ಳಿ ಮಾರ್ಗದಲ್ಲಿ 45 ಕಿ.ಮೀ ಉದ್ದದ ಹಳಿ ದ್ವಿಗುಣಗೊಳಿಸುವ ಕಾಮಗಾರಿ ನಡೆಯುತ್ತಿದೆ.

ಮಿನಿ ವಂದೇ ಭಾರತ್ ರೈಲಿನ ಪರಿಕಲ್ಪನೆಯಲ್ಲಿ ಭಾರತೀಯ ರೈಲ್ವೆಯು ಇಲ್ಲಿ ರೈಲು ಓಡಿಸಲಿದೆ. ಅಂದರೆ, ದೂರದ ನಗರದಗಳನ್ನು ಸಂಪರ್ಕಿಸುವ ವಂದೇ ಭಾರತ್ ರೈಲುಗಳಿಗೆ 16 ಕೋಚ್ ಇದ್ದರೇ, ಕಡಿಮೆ ದೂರವಿರುವ ನಗರಗಳನ್ನು ಸಂಪರ್ಕಿಸುವ ರೈಲಿಗೆ 8 ಕೋಚ್‌ಗಳನ್ನು ಅಳವಡಿಕೆ ಮಾಡಲಾಗುತ್ತದೆ. ಎಷ್ಟು ಗಮಟೆಯ ಪ್ರಯಾಣ ಎಂಬ ಆಧಾರದ ಮೇಲೆ ಕೋಚ್ ಅಳವಡಿಕೆ ನಡೆಯುತ್ತದೆ. ಬೆಂಗಳೂರು‌-ಹುಬ್ಬಳ್ಳಿ-ಧಾರವಾಡ ನಡುವೆ ಸಂಚಾರ ನಡೆಸುವ ರೈಲಿಗೆ 8 ಬೋಗಿ ಆಳವಡಿಕೆ ಮಾಡಲಾಗುತ್ತದೆ.

ಬೆಂಗಳೂರಿನಿಂದ ಧಾರವಾಡಕ್ಕೆ 5 ಗಂಟೆಗಳ ಪ್ರಯಾಣ

ಬೆಂಗಳೂರಿನಿಂದ ಧಾರವಾಡಕ್ಕೆ 5 ಗಂಟೆಗಳ ಪ್ರಯಾಣ

ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಸಂಚಾರ ಆರಂಭವಾದರೇ ಬೆಂಗಳೂರಿಂದ ಹೊರಟು ಹುಬ್ಬಳ್ಳಿ ಮೂಲಕ ಧಾರವಾಡ ತಲುಪಲಿದೆ. ಕಳೆದ ಡಿಸೆಂಬರ್‌ನಲ್ಲಿ ಹುಬ್ಬಳ್ಳಿ ಹಾಗೂ ಧಾರವಾಡದ ನಡುವೆ ವಂದೇ ಭಾರತ್‌ ರೈಲು ಸಂಚಾರಕ್ಕೆ ಪೂರಕವಾಗಿ ವೇಗದ ಪರೀಕ್ಷೆಯನ್ನೂ ನಡೆಸಲಾಗಿದ್ದು, ಧಾರವಾಡದವರೆಗೆ ವಂದೇ ಭಾರತ್‌ ಸಂಚರಿಸಲಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಿಂದ ಹೊರಟ ವಂದೇ ಭಾರತ್ ರೈಲು 5 ರಿಂದ 6 ಗಂಟೆಗಳಲ್ಲಿ ಧಾರವಾಡ ತಲುಪಲಿದೆ. ಇದರಿಂದ ಸಾಕಷ್ಟು ಸಮಯ ಉಳಿತಾಯವಾಗಲಿದೆ. ಈ ಮಾರ್ಗದಿಂದಾಗಿ ಸರಕು ಸಾಗಣೆ ಸೇರಿ ಆರ್ಥಿಕ ಚಟುವಟಿಕೆಗೆ ಹೆಚ್ಚು ವೇಗ ಸಿಗಲಿದೆ. ಹುಬ್ಬಳ್ಳಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ನೈಋತ್ಯ ರೈಲ್ವೆಯು ರೈಲಿನ ತಾತ್ಕಾಲಿಕ ವೇಳಾಪಟ್ಟಿಯನ್ನು ಭಾರತೀಯ ರೈಲ್ವೆ ಮಂಡಳಿಗೆ ಈಗಾಗಲೇ ಸಲ್ಲಿಸಿದೆ.

ಬೆಂಗಳೂರು-ಹುಬ್ಬಳ್ಳಿ ರೈಲ್ವೆ ಮಾರ್ಗ ವಿದ್ಯುದೀಕರಣ ಮಾರ್ಚ್‌ಗೆ ಪೂರ್ಣ

ಬೆಂಗಳೂರು-ಹುಬ್ಬಳ್ಳಿ ರೈಲ್ವೆ ಮಾರ್ಗ ವಿದ್ಯುದೀಕರಣ ಮಾರ್ಚ್‌ಗೆ ಪೂರ್ಣ

ಇನ್ನು, ವಂದೇ ಭಾರತ್ ರೈಲು ಓಡಲು ಬೇಕಿರುವ ಹಳಿಗಳ ವಿದ್ಯುದೀಕರಣ ಕಾರ್ಯ ನಡೆಯುತ್ತಿದ್ದು, ಮಾರ್ಚ್‌ ಅಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ನೈಋುತ್ಯ ರೈಲ್ವೆಯ ಬಹುನಿರೀಕ್ಷಿತ ಬೆಂಗಳೂರು - ಹುಬ್ಬಳ್ಳಿ ರೈಲ್ವೆ ಮಾರ್ಗದ ವಿದ್ಯುದೀಕರಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.

ಬೆಂಗಳೂರು-ಹುಬ್ಬಳ್ಳಿಯ ಸುಮಾರು 469 ಕಿ.ಮೀ. ಉದ್ದದ ಈ ಮಾರ್ಗದ ಡಬ್ಲಿಂಗ್‌ (ಜೋಡಿ ಮಾರ್ಗ) ಕಾಮಗಾರಿ ಮುಗಿದ ನಂತರ ಏಪ್ರಿಲ್‌ನಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್ ರೈಲುಗಳು ಅಥವಾ ಇತರೆ ಎಲೆಕ್ಟ್ರಿಕ್‌ ರೈಲುಗಳ ಸಂಚಾರ ಆರಂಬವಾಗಲಿದೆ.

ಈಗಾಗಲೇ ಬೆಂಗಳೂರು-ಹುಬ್ಬಳ್ಳಿ ಮಾರ್ಗದ ಸುಮಾರು 316 ಕಿಮೀನಷ್ಟು ತೋಳಹುಣಸೆವರೆಗೆ ವಿದ್ಯುದೀಕರಣ ಪೂರ್ಣಗೊಂಡಿದೆ. 153 ಕಿ.ಮೀ. ಕಾಮಗಾರಿ ಬಾಕಿ ಇದೆ. ಮಾರ್ಚ್ ವೇಳೆಗೆ ಪೂರ್ಣಗೊಳಿಸಲು ಅಧಿಕಾರಿಗಲು ಚುರುಕಿನಿಂದ ಕೆಲಸ ನಡೆಸುತ್ತಿದ್ದಾರೆ.

ಜೋಡಿ ಮಾರ್ಗ ಕಾಮಗಾರಿಗೆ 2015-16ರಲ್ಲಿಯೇ ಒಪ್ಪಿಗೆ

ಜೋಡಿ ಮಾರ್ಗ ಕಾಮಗಾರಿಗೆ 2015-16ರಲ್ಲಿಯೇ ಒಪ್ಪಿಗೆ

ಇನ್ನು, ಬೆಂಗಳೂರು - ಹುಬ್ಬಳ್ಳಿ ರೈಲ್ವೆ ಮಾರ್ಗದ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಮಡ ಬಳಿಕವಷ್ಟೇ ರೈಲ್ವೆ ಸಚಿವಾಲಯದಿಂದ ವಂದೇ ಭಾರತ್ ರೈಲು ಮಂಜೂರಾಗಿ, ಸಂಚಾರ ಆರಂಭವಾಗಲಿದೆ. ವಿದ್ಯುದೀಕರಣ ಪೂರ್ಣಗೊಂಡ ಬಳಿಕ ಮಾರ್ಗ ಮಧ್ಯೆ ಇರುವ ಟ್ರ್ಯಾಕ್ಷನ್ ಸಬ್‌ಸ್ಟೇಷನ್‌ಗಳಿಗೆ ಕೆಪಿಟಿಸಿಎಲ್‌ನಿಂದ ವಿದ್ಯುತ್‌ ಸಂಪರ್ಕ ನೀಡಬೇಕಾಗುತ್ತದೆ. ನಂತರ ಎಲೆಕ್ಟ್ರಿಕ್‌ ರೈಲು ಸಂಚರಿಸಲಿದೆ.

ಬೆಂಗಳೂರು - ಹುಬ್ಬಳ್ಳಿ ಮಾರ್ಗದ ರೈಲ್ವೆ ಜೋಡಿ ಮಾರ್ಗ ಕಾಮಗಾರಿಗೆ 2015 - 16ರಲ್ಲಿಯೇ ರೈಲ್ವೆ ಸಚಿವಾಲಯ ಒಪ್ಪಿಗೆ ನೀಡಿತ್ತು. ಇದಕ್ಕಾಗಿ ಕೇಂದ್ರ ಸರ್ಕಾರ 1954.21 ಕೋಟಿ ರೂಪಾಯಿ ಬಿಡುಗಡೆ ಮಾಡಿತ್ತು.

ಸದ್ಯ, ತಮಿಳುನಾಡಿನ ಚೆನ್ನೈನ ಪೆರಂಬೂರ್‌ನ ಇಂಟಿಗ್ರಲ್‌ ಕೋಚ್ ಫ್ಯಾಕ್ಟರಿಯಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ದೇಶೀಯವಾಗಿ ತಯಾರಿಸಲಾಗುತ್ತಿದೆ. ದೇಶದಲ್ಲಿ 8 ವಂದೇ ಭಾರತ್ ರೈಲುಗಳು ಸೇವೆ ಒದಗಿಸುತ್ತಿವೆ.

English summary
Vande Bharat Express: Vande Bharat Express will be running between Bengaluru and Hubballi by April and can reach Dharwad from Bengaluru in 5 to 6 hours. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X