ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ರಾತ್ರಿ ರಸ್ತೆಯಲ್ಲಿ ನಿಲ್ಲಿಸಿದ್ದ 25ಕ್ಕೂ ಹೆಚ್ಚು ವಾಹನಗಳಿಗೆ ಹಾನಿ

By Nayana
|
Google Oneindia Kannada News

ಬೆಂಗಳೂರು, ಜು.26: ಚುನಾವಣಾ ಸಂದರ್ಭದಲ್ಲಿ ಚೋಳರಪಾಳ್ಯದಲ್ಲಿ ಎರಡು ಪಕ್ಷಗಳ ನಡುವೆ ಸಂಘರ್ಷ ನಡೆದಿತ್ತು, ಬಳಿಕ ಶಾಂತವಾಗಿತ್ತು. ಇದೀಗ ರಾತ್ರೋರಾತ್ರಿ ದುಷ್ಕರ್ಮಿಗಳು ಬಂದು ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ನಾಶ ಮಾಡಿರುವುದು ಆತಂಕ್ಕೀಡುಮಾಡಿದೆ. ಮಾಡಿದೆ.

ಚೋಳರಪಾಳ್ಯದಲ್ಲಿದ ಎರಡನೇ ಅಡ್ಡರಸ್ತೆಯಲ್ಲಿರುವ ಕಾಂಗ್ರೆಸ್‌ ಕಚೇರಿಗೆ ನುಗ್ಗಿ ದುಷ್ಕರ್ಮಿಗಳು ಅಲ್ಲಿರುವ ದಾಖಲೆ, ವಸ್ತುಗಳೆಲ್ಲವನ್ನೂ ನಾಶ ಮಾಡಿದ್ದಾರೆ. ನಂತರ ಚೋಳರಪಾಳ್ಯದಲ್ಲಿ ಗಲ್ಲಿಗಳಲ್ಲಿ ನಿಲ್ಲಿಸಿದ್ದ 25ಕ್ಕೂ ಹೆಚ್ಚು ವಾಹನಗಳನ್ನು ದುಷ್ಕರ್ಮಿಗಳು ಜಖಂಗೊಳಿಸಿದ್ದಾರೆ. ರಾತ್ರೋರಾತ್ರಿ ಐದಾರು ಬೈಕ್‌ಗಳಲ್ಲಿ ಮಚ್ಚು-ಲಾಂಗುಗಳನ್ನು ಝಳಪಿಸಿ ಸಾರ್ವಜನಿಕ ಸ್ವತ್ತುಗಳನ್ನು ನಾಶ ಪಡಿಸಿದ್ದಾರೆ.

Vandalism by gang for political hatredness

ಸಿಎಂ ಗೃಹ ಕಚೇರಿ ಎದುರು ಹೆಚ್ಚುವರಿ ಪೊಲೀಸ್‌ ಆಯುಕ್ತರ ಕಾರ್‌ ಗ್ಲಾಸ್‌ ಜಖಂಸಿಎಂ ಗೃಹ ಕಚೇರಿ ಎದುರು ಹೆಚ್ಚುವರಿ ಪೊಲೀಸ್‌ ಆಯುಕ್ತರ ಕಾರ್‌ ಗ್ಲಾಸ್‌ ಜಖಂ

ಚುನಾವಣೆ ವೇಳೆ 2 ಪಕ್ಷಗಳ ಕಾರ್ಯಕರ್ತರ ನಡುವೆ ಮಾರಾಮಾರಿಯಾಗಿತ್ತು. ಅದೇ ದ್ವೇಷದ ಹಿನ್ನೆಲೆಯಲ್ಲಿ ದುಷ್ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಪ್ರಕರಣವನ್ನು ಕೆಪಿ ಅಗ್ರಹಾರ ಪೊಲೀಸರು ಗಂಭೀರವಾಗಿ ತೆಗೆದುಕೊಂಡಿದ್ದು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

English summary
For political hatredness a gang of goons vandalised at congress office. They have damaged more than 25 vehicles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X