ಪೌರ ಕಾರ್ಮಿಕ ಹುದ್ದೆ: ಅರ್ಜಿಗಾಗಿ ಮುಗಿಬಿದ್ದ ಜನ
ಬೆಂಗಳೂರು,ಜು.2- ನಾಲ್ಕು ಸಾವಿರ ಪೌರ ಕಾರ್ಮಿಕ ಹುದ್ದೆ ನೇಮಕಾತಿಗೆ ಬಿಬಿಎಂಪಿ ಅರ್ಜಿ ಆಹ್ವಾನಿಸಿದ ಹಿನ್ನಲೆಯಲ್ಲಿ ಇಂದು ಒಂದೇ ದಿನ ಸಾವಿರಾರು ಆಕಾಂಕ್ಷಿಗಳು ಅರ್ಜಿಗೆ ಮುಗಿಬಿದ್ದರು.
ಕಳೆದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನಾಲ್ಕು ಸಾವಿರ ಪೌರ ಕಾರ್ಮಿಕರ ಹುದ್ದೆಗೆ ಬಿಬಿಎಂಪಿ ಮಂಗಳವಾರದಿಂದ ಅರ್ಜಿ ಆಹ್ವಾನಿಸಿದೆ. ಪರಿಶಿಷ್ಟ ಜಾತಿ, ಪಂಗಡ, ಸಾಮಾನ್ಯ, ಇತರೆ ಹಿಂದುಳಿದ ವರ್ಗಗಳ ಮೀಸಲಾತಿ ಸೇರಿ ಒಟ್ಟು ನಾಲ್ಕು ಸಾವಿರ ಹುದ್ದೆ ನೇಮಕಾತಿಗೆ ಬಿಬಿಎಂಪಿ ಮುಂದಾಗಿದೆ.[ಕೃಷ್ಣ ರಾಜೇಂದ್ರ ಮಾರುಕಟ್ಟೆಯನ್ನು ಬೆಳಗಿದ ಹಸಿ ತ್ಯಾಜ್ಯ]
ಇತ್ತೀಚೆಗೆ ಬಿಬಿಎಂಪಿಯ ಯಾವುದೇ ಇಲಾಖೆಯಲ್ಲೂ ಸರ್ಕಾರಿ ಕೆಲಸಕ್ಕೆ ಅರ್ಜಿ ಆಹ್ವಾನಿಸಿಲ್ಲ. ಹಾಗಾಗಿ ಪೌರ ಕಾರ್ಮಿಕ ಹುದ್ದೆಯೇ ಆಕಾಂಕ್ಷಿಗಳಿಗೆ ಸ್ವರ್ಗ ಸಿಕ್ಕಂತಾಗಿದೆ. ಎಸ್ಸೆಸ್ಸೆಲ್ಸಿ, ಪಿಯುಸಿ ಪಾಸಾದವರು ಪೌರ ಕಾರ್ಮಿಕ ಹುದ್ದೆಗೆ ಅರ್ಜಿ ಸಲ್ಲಿಸಲು ಮುಂದೆ ಬಂದಿದ್ದಾರೆ.[ಬಿಬಿಎಂಪಿ ಅಧಿಕಾರಿಗಳ ಸಭೆಯಲ್ಲಿ ಸಿಎಂ ಉಗ್ರಾವತಾರ]

ನಾಲ್ಕು ಸಾವಿರ ಹುದ್ದೆಯಿದ್ದರೂ, ಬಿಬಿಎಂಪಿ ಐದು ಲಕ್ಷ ಅರ್ಜಿ ವಿತರಿಸಲು ಸಿದ್ದವಾಗಿದೆ. ಎಲ್ಲಾ ಆಕಾಂಕ್ಷಿಗಳಿಗೂ ಅರ್ಜಿ ದೊರೆಯಲಿದೆ. ಯಾರೂ ಆತಂಕಪಡಬಾರದು ಎಂದು ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮೀನಾರಾಯಣ್ ಆಕಾಂಕ್ಷಿಗಳಲ್ಲಿ ಮನವಿ ಮಾಡಿದ್ದಾರೆ.
ಬಿಬಿಎಂಪಿ ಜು.27ರವರೆಗೆ ಅರ್ಜಿಯನ್ನು ವಿತರಿಸಲಿದ್ದು, ಅರ್ಜಿ ವಿತರಣೆಗೆ ನಾಲ್ಕು ವಿಶೇಷ ಕೌಂಟರ್‌ಗಳನ್ನು ತೆರೆಯಲಾಗಿದೆ. ಅರ್ಜಿ ಸಲ್ಲಿಸಲು ಜು.31 ಕೊನೆಯ ದಿನವಾಗಿದೆ.












Click it and Unblock the Notifications