ಕನ್ನಡಿಗರ ಬೇಡಿಕೆಗೆ ಸಿಗದ ಸ್ಪಂದನೆ, ಬೆಂಗಳೂರಲ್ಲಿ ಅಮೆರಿಕ ವೀಸಾ ಸೇವೆ ಶುರು ಮಾಡಲು ಒತ್ತಾಯ... US Ambassador Gor
ಕನ್ನಡಿಗರ ರಾಜಧಾನಿ ಬೆಂಗಳೂರು ಎಂದರೆ ಎಲ್ಲರಿಗೂ ಹೆಮ್ಮೆ, ಐಟಿ & ಬಿಟಿ ತವರು ಎಂಬ ಖ್ಯಾತಿ ಗಳಿಸಿರುವ ನಮ್ಮ ಬೆಂಗಳೂರು ಕೋಟಿ ಕೋಟಿ ಜನರಿಗೆ ನೆಲೆ ನೀಡಿದ ಊರು. ಯಾರೇ ಸೋತು ಈ ನಗರಕ್ಕೆ ಬಂದರೂ ಬದುಕುವ ಸಾಮರ್ಥ್ಯ ಕೊಡುವ ಊರು ಬೆಂಗಳೂರು. ಅದರಲ್ಲೂ ಬೆಂಗಳೂರಿನ ಹೆಸರು ಮಂಡ್ಯ ಟು ಮಿಷಿಗನ್, ಕಲಬುರ್ಗಿ ಟು ಕ್ಯಾಲಿಫೋರ್ನಿಯಾ ಫುಲ್ ಫೇಮಸ್. ಜಗತ್ತಿನ ಯಾವ ಮೂಲೆಗೆ ಹೋದರು ಕೂಡ ಬಹುತೇಕರು ನಮ್ಮ ಬೆಂಗಳೂರನ್ನು ಗುರುತಿಸಿ ಗೌರವಿಸುತ್ತಾರೆ. ಆದರೆ ಇಂತಹ ನಗರದಲ್ಲಿ ಅಮೆರಿಕದ ವೀಸಾ ಸೇವೆ ಸಿಗುತ್ತಿಲ್ಲ ಎಂದರೆ ಹೇಗಿರಬೇಡ ಹೇಳಿ? ಇದೇ ವಿಚಾರ ಪದೇ ಪದೇ ಚರ್ಚೆಯಾಗುತ್ತಿರುವ ಸಮಯದಲ್ಲೇ ಕನ್ನಡಿಗರಿಗೆ ಭರ್ಜರಿ ಸುದ್ದಿ ಸಿಕ್ಕಿದೆ.
ಬೆಂಗಳೂರು ಐಟಿ ಕಂಪನಿಗಳಿಗೆ ನೆಲೆ ನೀಡಿರುವ ತವರು ಭೂಮಿ ಮಾತ್ರವಲ್ಲ, ಸ್ಟಾರ್ಟ್ ಅಪ್ ಸಿಟಿ ಎಂಬ ಬಿರುದು ಕೂಡ ಪಡೆದಿದೆ. ಸಾವಿರಾರು ಸ್ಟಾರ್ಟ್ ಅಪ್ ಕಂಪನಿಗಳು ಇಲ್ಲೇ ಸ್ಥಾಪನೆ ಆಗಿದ್ದು, ಲಕ್ಷಾಂತರ ಕೋಟಿ ರೂಪಾಯಿ ವಹಿವಾಟು ನಡೆಸುತ್ತಾ ಜಗತ್ತಿನಾದ್ಯಂತ ಹೆಸರು ಮಾಡಿವೆ. ಹೀಗೆಲ್ಲಾ ಇದ್ದಾಗ ಅಮೆರಿಕಗೆ ಹೋಗಿ ಬರಲು ಹಾಗೂ ಅಮೆರಿಕ ಜೊತೆಗೆ ಸಂಬಂಧ ಇನ್ನಷ್ಟು ಗಟ್ಟಿ ಮಾಡಲು, ಕನ್ನಡಿಗರ ನಾಡಲ್ಲಿ ವೀಸಾ ಸೇವೆ ಶುರು ಮಾಡಬೇಕು ಎಂಬ ಡಿಮ್ಯಾಂಡ್ ಹಲವು ವರ್ಷಗಳಿಂದಲೂ ಇತ್ತು. ಇದೀಗ ಆ ಬಗ್ಗೆ ಕನ್ನಡಿಗರಿಗೆ ಭರ್ಜರಿ ಸುದ್ದಿ ಸಿಕ್ಕಿದ್ದು, ನಮ್ಮ ಬೆಂಗಳೂರಲ್ಲಿ ಶೀಘ್ರವೇ ಅಮೆರಿಕ ವೀಸಾ ಸೇವೆ ಶುರುವಾಗುವ ಸಾಧ್ಯತೆ ಇದೆ. ಸಿಎಂ ಸಿದ್ದರಾಮಯ್ಯ ಅವರು ಹಾಗೂ ಅಮೆರಿಕ ರಾಯಭಾರಿ ಸರ್ಗಿಯೊ ಗೋರ್ ಭೇಟಿ ಹೊಸ ಕನಸು ಸೃಷ್ಟಿಸಿದೆ.

ಚೆನ್ನೈ & ಹೈದರಾಬಾದ್‌ಗೆ ಅಲೆದಾಟ
ಬೆಂಗಳೂರು ಟು ಅಮೆರಿಕ ಆತ್ಮೀಯ ಸಂಬಂಧ ಇದ್ದು, ಪ್ರತಿವರ್ಷವೂ ಲಕ್ಷಾಂತರ ಕೋಟಿ ರೂಪಾಯಿ ವ್ಯಾಪಾರ ಹಾಗೂ ವಹಿವಾಟು ನಡೆಯುತ್ತಿದೆ. ಇದರ ಜೊತೆಗೆ ಲಕ್ಷಾಂತರ ವಿದ್ಯಾರ್ಥಿಗಳು ಬೆಂಗಳೂರು ಟು ಅಮೆರಿಕ ಅಧ್ಯಯನ ನಡೆಸಲು ಹೋಗಿ ಬರುತ್ತಾರೆ. ಹೀಗಿದ್ದಾಗ ಬೆಂಗಳೂರಿನಲ್ಲೇ ವೀಸಾ ಸೇವೆ ಇಲ್ಲ ಎಂದರೆ ಹೇಗೆ? ಎಂದು ಕನ್ನಡಿಗರು ಪ್ರಶ್ನೆ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲೇ ಅಮೆರಿಕ ರಾಯಭಾರಿ ಸರ್ಗಿಯೊ ಗೋರ್ ಭೇಟಿ ಸಮಯದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ಮಹತ್ವದ ಚರ್ಚೆ ನಡೆದಿದೆ. ಇದೇ ವೇಳೆ ಬೆಂಗಳೂರಿನಲ್ಲಿ ವೀಸಾ ಸೇವೆ ಕೂಡ ಆರಂಭಿಸುವ ಚರ್ಚೆ ನಡೆದಿದೆ ಎನ್ನಲಾಗಿದೆ. ನಮ್ಮ ದೇಶದ ಸುಮಾರು ಶೇಕಡಾ 37ರಷ್ಟು ಸಾಫ್ಟ್‌ವೇರ್ ರಫ್ತು ಮಾಡುವ ಬೆಂಗಳೂರು ನಗರವು ಅಮೆರಿಕದ ಜೊತೆಗೆ ಅವಿನಾಭಾವ ನಂಟು ಹೊಂದಿದೆ.
ಮತ್ತೊಂದು ಕಡೆ ಬೆಂಗಳೂರಿನ ಬಗ್ಗೆ ಹೆಮ್ಮೆಯಿಂದಲೇ ಟ್ವೀಟ್ ಮಾಡಿರುವ ಅಮೆರಿಕದ ರಾಯಭಾರಿ ಸರ್ಗಿಯೊ ಗೋರ್, ಕರ್ನಾಟಕದಲ್ಲಿ ಈಗ ಸುಮಾರು 700ಕ್ಕೂ ಹೆಚ್ಚು ಅಮೆರಿಕ ಮೂಲದ ಕಂಪನಿಗಳು ಕಾರ್ಯನಿರ್ವಹಣೆ ಮಾಡುತ್ತಿವೆ ಎಂದಿದ್ದಾರೆ. ಕಳೆದ ವರ್ಷದ ಜನವರಿ ತಿಂಗಳಲ್ಲಿ ಬೆಂಗಳೂರಲ್ಲಿ ಹೊಸ ರಾಯಭಾರ ಕಚೇರಿ ಆರಂಭ ಮಾಡಿತ್ತು ಅಮೆರಿಕ, ಹೀಗಿದ್ದರೂ ವೀಸಾ ಸೇವೆ ಇನ್ನೂ ಶುರುವಾಗಿಲ್ಲ. ಇದೇ ಕಾರಣಕ್ಕೆ, ಭಾರತೀಯ ನಾಗರಿಕರಿಗೆ ವೀಸಾ ಸೇವೆ ಬೆಂಗಳೂರಲ್ಲಿ ಯಾವಾಗ ಪ್ರಾರಂಭವಾಗುತ್ತದೆ? ಎಂಬ ಪ್ರಶ್ನೆ ಕೇಳುತ್ತಿದ್ದಾರೆ ಕರ್ನಾಟಕದ ಪ್ರಜೆಗಳು. ಶೀಘ್ರದಲ್ಲೇ ಬೆಂಗಳೂರಿನಲ್ಲಿ ವೀಸಾ ಸೇವೆಗಳು ಶುರುವಾಗುವ ನಿರೀಕ್ಷೆಯು ಮೂಡಿದೆ. ಇದು ಸಾಧ್ಯವಾದರೆ ವೀಸಾ ಪಡೆಯಲು ಕನ್ನಡಿಗರು ಭವಿಷ್ಯದಲ್ಲಿ ಚೆನ್ನೈ & ಹೈದರಾಬಾದ್ ನಗರಳಿಗೆ ಎರಡೆರಡು ಬಾರಿ ಅಲೆದಾಡುವುದು ಕೂಡ ತಪ್ಪುವ ನಿರೀಕ್ಷೆ ಇದೆ.












Click it and Unblock the Notifications