ನಾವೆಲ್ಲರೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರೊಂದಿಗೆ ಇದ್ದೇವೆ!

ಬೆಂಗಳೂರು, ಮಾ. 13: ಮಹತ್ವದ ಬೆಳವಣಿಗೆಯಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರು ಆರೋಗ್ಯ ಸಚಿವ ಡಾ. ಸುಧಾಕರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಸುಧಾಕರ್ ಅವರನ್ನು ಭೇಟಿ ಮಾಡಿದ್ದ ಭೈರತಿ ಬಳಿಕ ಮಾತನಾಡಿದ್ದಾರೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ 'ಸಿಡಿ' ಬಿಡುಗಡೆ ಹಾಗೂ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ವಹಿಸಿರುವುದರ ಹಿನ್ನೆಲೆಯಲ್ಲಿ ಭೇಟಿ ಮಹತ್ವ ಪಡೆದುಕೊಂಡಿದೆ. ಹೀಗಾಗಿ ಸಚಿವ ಡಾ. ಸುಧಾಕರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಬಂದಿದೆ.

Urban Development Minister Byrathi Basavaraj Reaction on SIT Probe in Ramesh Jarkiholi CD Row

ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಚಿವ ಭೈರತಿ ಬಸವರಾಜ್ ಅವರು, ಸಚಿವ ಹಾಗೂ ಸ್ನೇಹಿತ ಸುಧಾಕರ್ ಅವರನ್ನು ಸುಮ್ಮನೆ ಭೇಟಿಯಾಗಲು ಬಂದಿದ್ದೆ. ಸುಧಾಕರ್ ಅವರು ನಿನ್ನೆ ಕೋವಿಡ್ ಲಸಿಕೆ ಪಡೆಸಿದ್ದಾರೆ. ಹೀಗಾಗಿ ಅವರಿಗೆ ಸ್ವಲ್ಪ ಜ್ವರ ಬಂದಿದೆ, ಸ್ವಲ್ಪ ಸುಸ್ತಾಗಿದ್ದಾರೆ ಎಂದಿದ್ದಾರೆ.

Urban Development Minister Byrathi Basavaraj Reaction on SIT Probe in Ramesh Jarkiholi CD Row

ರಮೇಶ್ ಜಾರಕಿಹೊಳಿ ಅವರ 'ಸಿಡಿ' ಪ್ರಕರಣ ಹಾಗೂ ತನಿಖೆಯನ್ನು ಎಸ್‌ಐಟಿಗೆ ವಹಿಸಿರುವುದರ ಕುರಿತು ಪ್ರತಿಕ್ರಿಯೆ ನೀಡಿರು ಭೈರತಿ ಬಸವರಾಜು ಅವರು, ನಾವೆಲ್ಲರೂ ರಮೇಶ್ ಜಾರಕಿಹೊಳಿ ಅವರ ಜೊತೆಗೆ ಇದ್ದೇವೆ. ಎಸ್‌ಐಟಿ ತನಿಖೆ ನಡೆಯುತ್ತಿದೆ, ನಡೆಯಲಿ. ಯಾವುದೇ ಸಂದರ್ಭದಲ್ಲೂ ನಾವು ರಮೇಶ್ ಜಾರಕಿಹೊಳಿ ಜೊತೆ ನಿಲ್ಲುತ್ತೇವೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+