ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಪಾಸನಾ ಟ್ರಸ್ಟ್ 20ನೇ ವಾರ್ಷಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ

|
Google Oneindia Kannada News

ಬೆಂಗಳೂರು, ಜುಲೈ 4: ಸದಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವಲ್ಲಿ ಮುಂದಾಗಿರುವ ಉಪಾಸನಾ ಟ್ರಸ್ಟ್ ಆರಂಭಗೊಂಡು 2019ಕ್ಕೆ 20 ವರ್ಷಗಳು ಪೂರೈಸಿವೆ. ಈ ಬಾರಿ ತನ್ನ 20ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಸಂಸ್ಥೆ, ಪ್ರಶಸ್ತಿಗಳನ್ನು ನೀಡುವ ಮೂಲಕ ಸಂಭ್ರಮಿಸಲಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಉಪಾಸನಾ ಟ್ರಸ್ಟ್ ತನ್ನ ಸಂಸ್ಥಾಪನಾ ದಿನದಂದು ಯುವ ಸಾಧಕರಿಗೆ ಉಪಾಸನಾ ಪ್ರಶಸ್ತಿ ಹಾಗೂ ನಾದೋಪಾಸನಾ ಪ್ರಶಸ್ತಿಯನ್ನು ನೀಡುತ್ತಿದೆ.

 ಹೊಸ ಕಾವ್ಯಮಾರ್ಗದಲ್ಲಿ ಹೆಜ್ಜೆ ಹಾಕಲು ಕಲಿಸಿದ ಕವಿ ಎಚ್ಚೆಸ್ವಿ ಹೊಸ ಕಾವ್ಯಮಾರ್ಗದಲ್ಲಿ ಹೆಜ್ಜೆ ಹಾಕಲು ಕಲಿಸಿದ ಕವಿ ಎಚ್ಚೆಸ್ವಿ

ಜುಲೈ 13ರಂದು ಶುಕ್ರವಾರ ಬೆಂಗಳೂರಿನ ಜೆಎಸ್ ಎಸ್ ಸಭಾಂಗಣದಲ್ಲಿ ನಡೆಯಲಿದ್ದು, ಈ ಬಾರಿ ಸಾಗರದ ಗಾಯಕ ರಾಘವೇಂದ್ರ ಬೀಜಾಡಿ ಅವರಿಗೆ ಉಪಾಸನಾ ಪ್ರಶಸ್ತಿಯನ್ನು ಹಾಗೂ ಶಿವಮೊಗ್ಗದ ಲಯವಾದ್ಯ ಕಲಾವಿದ ರಾಘವೇಂದ್ರ ರಂಗಧೋಳ್ ಅವರಿಗೆ ನಾದೋಪಾಸನಾ ಪ್ರಶಸ್ತಿಯನ್ನು ನೀಡುತ್ತಿದೆ.

Upasana trust is awarding two young achievers

ರಾಷ್ಟ್ರಪ್ರಶಸ್ತಿ ಪುರಸ್ಕೃತ ಗಾಯಕ ಶಿವಮೊಗ್ಗ ಸುಬ್ಬಣ್ಣ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಲಯವಾದ್ಯ ಪ್ರವೀಣ ಎಸ್ ಬಾಲಿ ಹಾಗೂ ಪದ್ಮನಾಭನಗರದ ಕನ್ನಡ ಸಾಹಿತ್ಯ ಪರಿಷತ್ತು ನಿಕಟ ಪೂರ್ವ ಅಧ್ಯಕ್ಷ ಹರ್ಷ ಲಕ್ಷ್ಮಣ್ ಭಾಗವಹಿಸಲಿದ್ದಾರೆ. ಪ್ರಶಸ್ತಿಯು ಫಲಕ ಹಾಗೂ 5 ಸಾವಿರ ನಗದನ್ನು ಒಳಗೊಂಡಿದೆ ಎಂದು ಅಧ್ಯಕ್ಷ ಜೆ ಮೋಹನ್ ತಿಳಿಸಿದ್ದಾರೆ.

English summary
on behalf of its 20th anniversary, Upasana trust of Bengaluru is giving award to two young achievers. This time, Raghavendra beejadi and Raghavendra Rangadol are recieving award.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X