ಕೆರೆಗಳ ಒತ್ತುವರಿ, ಕ್ರಮಕ್ಕೆ ಯುನೈಟೆಡ್ ಬೆಂಗಳೂರು ಆಗ್ರಹ

ಬೆಂಗಳೂರು, ಜೂನ್ 26 : ಬೆಂಗಳೂರು ನಗರದಲ್ಲಿ ಕೆರೆಗಳನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕರ್ನಾಟಕ ಭೂ ಕಂದಾಯ ಕಾಯ್ದೆಯಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಯುನೈಟೆಡ್ ಬೆಂಗಳೂರು ಲೋಕಾಯುಕ್ತರಿಗೆ ಮನವಿ ಮಾಡಿದೆ.

ಚಿಕ್ಕಬಣಾವರ ಕೆರೆ, ಪುಟ್ಟೇನಹಳ್ಳಿ, ಮಲ್ಲಸಂದ್ರ ಕೆರೆಗಳ ಕುರಿತು ಲೋಕಾಯುಕ್ತರಿಗೆ ಸ್ಥಿತಿಗತಿ ವರದಿ ನೀಡಿರುವ ಯುನೈಟೆಡ್ ಬೆಂಗಳೂರು, ಕೆರೆಗಳಿಗೆ ತ್ಯಾಜ್ಯವನ್ನು ಸುರಿಯುತ್ತಿದ್ದು ತಡೆಗಟ್ಟಲು ಬಿಬಿಎಂಪಿ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಸಲ್ಲಿಸಿದೆ.

United Bengaluru seeks action on lake encroachment

ಲೋಕಾಯುಕ್ತರಿಗೆ ಸಲ್ಲಿಸಿರುವ ಮನವಿಯಲ್ಲಿ ಚಿಕ್ಕಬಣಾವರ, ಪುಟ್ಟೇನಹಳ್ಳಿ, ಮಲ್ಲಸಂದ್ರ ಕೆರೆಗೆ ತಾಜ್ಯ ಹರಿದು ಬರುವುದನ್ನು ಚಿತ್ರ ಸಮೇತ ವಿವರಿಸಲಾಗಿದೆ. ಕೆರೆ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.

ಕೆರೆಗಳ ವೀಸ್ತಿರ್ಣ : ಕಂದಾಯ ಇಲಾಖೆ ದಾಖಲೆಗಳ ಪ್ರಕಾರ ಬೆಂಗಳೂರು ಉತ್ತರ ತಾಲೂಕಿನ ಯಲಹಂಕ ಹೋಬಳಿ ಪುಟ್ಟೇನಹಳ್ಳಿ ಗ್ರಾಮದ ಸರ್ವೇ ನಂಬರ್ 36 ಮತ್ತು ಅಟ್ಟೂರು ಗ್ರಾಮದ ಸರ್ವೇ ನಂಬರ್ 49ರಲ್ಲಿ ಒಟ್ಟು 37 ಎಕರೆ ವಿಸ್ತೀರ್ಣವನ್ನು ಹೊಂದಿದೆ.

ಬೆಂಗಳೂರು ಉತ್ತರ ತಾಲೂಕು ಯಶವಂತಪುರ ಹೋಬಳಿ ಮಲ್ಲಸಂದ್ರ ಗ್ರಾಮದ ಸರ್ವೇ ನಂ 49 ಮತ್ತು 50ರಲ್ಲಿ ಒಟ್ಟು 17 ಎಕರೆ 11 ಗುಂಟೆ ವಿಸ್ತೀರ್ಣವನ್ನು ಮಲ್ಲಸಂದ್ರ ಗುಡ್ಡೆ ಕೆರೆಯು ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+