ವಿಚಾರಣಾಧೀನ ಕೈದಿ ಪರಪ್ಪನ ಅಗ್ರಹಾರದಲ್ಲಿ ಆತ್ಮಹತ್ಯೆ
ಬೆಂಗಳೂರು, ಅ. 28: ಪರಪ್ಪನ ಅಗ್ರಹಾರದಲ್ಲಿ ಕೈದಿಯೊಬ್ಬರು ಸೋಮವಾರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ರವಿಕುಮಾರ್ (26) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಡಕಾಯಿತಿ ಪ್ರಕರಣದ ಆರೋಪದಲ್ಲಿ ರಾಜಗೋಪಾಲನಗರ ಪೊಲೀಸರು ರವಿಕುಮಾರ್ ನನ್ನು ಬಂಧಿಸಿದ್ದರು. ಪೀಣ್ಯ ಎರಡನೇ ಹಂತದ ನಿವಾಸಿಯಾಗಿದ್ದ ರವಿಕುಮಾರ್ ಕಳೆದ ಒಂದು ತಿಂಗಳಿಂದ ಪರಪ್ಪನ ಅಗ್ರಹಾರದಲ್ಲಿದ್ದ.[ವಿಚಾರಣಾಧೀನ ಕೈದಿ ಬಿಡುಗಡೆ : ಲಾಭ ಯಾರಿಗೆ?]

ಸುದ್ದಿ ತಿಳಿದ ರವಿಕುಮಾರ್ ಪಾಲಕರು ಪರಪ್ಪನ ಅಗ್ರಹಾರಕ್ಕೆ ತೆರಳಿದರೆ ರವಿಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾವು ಏನು ಮಾಡಲು ಸಾಧ್ಯವಾಗಲಿಲ್ಲ ಎಂದು ಸಮಾಧಾನದ ಮಾತು ಹೇಳಿ ಕಳಿಸಿದ್ದರು ಎನ್ನಲಾಗಿದೆ.
ಆದರೆ ರವಿಕುಮಾರ್ ಪಾಲಕರು ಪೊಲೀಸರೆ ಮಗನನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಈ ಬಗ್ಗೆ ಸೂಕ್ತ ತನಿಖೆಯಾಬೇಕು ಎಂದು ಒತ್ತಾಯಿಸಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಲಾಗಿದ್ದು ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications