ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ವಿವಿಯಲ್ಲಿ ULC ಮಾದರಿ ವಿಶ್ವಸಂಸ್ಥೆ ಕಲಾಪ 2020

|
Google Oneindia Kannada News

ಬೆಂಗಳೂರು, ಅಕ್ಟೋಬರ್ 05:ಅಮೆರಿಕವು ಮಹಾತ್ಮ ಗಾಂಧಿ ಅವರ ಬಗ್ಗೆ ವಿಶೇಷ ಗೌರವ ಹೊಂದಿದೆ. ಅವರ ಮೌಲ್ಯಗಳು ಸಮಾಜದ ಮೇಲೆ ಅಗಾಧ ಪ್ರಭಾವ ಬೀರಿವೆ ಎಂದು ಚೆನ್ನೈನಲ್ಲಿನ ಅಮೆರಿಕ ದೂತಾವಾಸದ ಪಬ್ಲಿಕ್‌ ಅಫೇರ್ಸ್‌ ಆಫೀಸರ್ ಆನ್‌ ಲೀ ಶೇಷಾದ್ರಿ ಹೇಳಿದರು.

ಬೆಂಗಳೂರು ವಿಶ್ವ ವಿದ್ಯಾಲಯದ ಕಾನೂನು ಕಾಲೇಜು ಆಯೋಜಿಸಿದ್ದ "ಮಾಡೆಲ್‌ ಯುನೈಟೆಡ್‌ ನೇಷನ್ಸ್‌" ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಮೆರಿಕ- ಭಾರತದ ನಡುವಿನ ಸಂಬಂಧ ಅತ್ಯಂತ ಮಹತ್ವದ್ದು ಎಂದರು.

"ಮಾಡೆಲ್‌ ಯುನೈಟೆಡ್ ನೇಷನ್ಸ್‌ ಕಾರ್ಯಕ್ರಮವು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಅನುವು ಮಾಡಿಕೊಡುತ್ತದೆ. ವಿದ್ಯಾರ್ಥಿಗಳಿಗೆ ಇಂಥ ಅವಕಾಶ ಒದಗಿಸಿಕೊಟ್ಟ ಕಾಲೇಜಿನ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

.

ULC Model United Nations 2020- Inaugural Ceremony At Bangalore University

ನ್ಯಾಷನಲ್ ಬುಕ್ ಟ್ರಸ್ಟ್ ನ ನಿರ್ದೇಶಕ ಲೆಫ್ಟಿನೆಂಟ್ ಕರ್ನಲ್ ಯುವರಾಜ್ ಮಲಿಕ್ ಮಾತನಾಡಿ, 'ಅಂತಾರಾಷ್ಟ್ರೀಯ ಹಂತದಲ್ಲಿ ಸಹಭಾಗಿತ್ವದ ಅಗತ್ಯವಿದೆ. ಹಾಗೆಯೇ ವಿಶ್ವಸಂಸ್ಥೆ ಹಾಗೂ ಇತರೆ ರಾಷ್ಟ್ರಗಳು ನಿಶಸ್ತ್ರೀಕರಣದತ್ತ ಗಮನ ನೀಡಬೇಕಿದೆ' ಎಂದು ಹೇಳಿದರು.

ವಿಶ್ವಸಂಸ್ಥೆ ವಿಶೇಷ ಅಧಿಕಾರಿ ಸಮರ್ಥ್ ಪಾಠಕ್ ಮಾತನಾಡಿ, ಯುವಕರು ವಿಶ್ವದ ಭವಿಷ್ಯವಾಗಿದ್ದು, ಸಾಮಾಜಿಕ ಭದ್ರತೆ ಬಗ್ಗೆ ಗಮನ ನೀಡಬೇಕಾಗಿದೆ, ಸಮಾಜದ ಸರ್ವತೋಮುಖ ಏಳಿಗೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ.

ವಿಶ್ವಸಂಸ್ಥೆ ಮಾನವ ಹಕ್ಕುಗಳ ಅಧಿಕಾರಿ ಕಿರಿ ಅತ್ರಿ ಮಾತನಾಡಿ, ವಲಸಿಗರು ಹಾಗೂ ನಿರಾಶ್ರಿತರ ಬಗ್ಗೆ ಎಲ್ಲಾ ಸರ್ಕಾರಗಳು ಆಸಕ್ತಿ ವಹಿಸಬೇಕಿದೆ,ಅವರ ಪುನರ್ವಸತಿ ಬಗ್ಗೆಯೂ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.

Recommended Video

ಬೆಳ್ಳಂ ಬೆಳಗ್ಗೆ ಡಿಕೆ Brothers ಮನೆ ಮೇಲೆ ಐಟಿ ದಾಳಿ | DK Shivakumar | Oneindia Kannada

ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಡಾ. ವೇಣುಗೋಪಾಲ್ ಮಾತನಾಡಿ, ಇಂದಿನ ಆಧುನಿಕ ಜಗತ್ತಿನಲ್ಲಿ ಪ್ರಜಾತಂತ್ರ ರಕ್ಷಣೆಗಾಗಿ ಮಾತುಕತೆಯು ಪ್ರಮುಖ ಪಾತ್ರವಹಿಸಲಿದೆ.

ಆದರೆ ಇಂದಿನ ಕೊವಿಡ್ 19 ಹಾಗೂ ಇತರೆ ಜಾಗತಿಕ ಸಮಸ್ಯೆಗಳಿಗೆ ಮಾತುಕತೆ ಮೂಕ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯವು ಇಂತಹ ವೇದಿಕೆಯನ್ನು ಸೃಷ್ಟಿಸಿಕೊಡುತ್ತಿದೆ.

English summary
Bangalore University and United Nations holds webinar on ULC model At Bangalore University.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X