ಬೆಂಗಳೂರಲ್ಲಿ ಇಂಗ್ಲೆಂಡ್‌ನ ಪ್ರತಿಷ್ಠಿತ ವಿಶ್ವವಿದ್ಯಾಲಯದ ಮೊದಲ ಕ್ಯಾಂಪಸ್ ಶುರುವಾಗುತ್ತೆ
ಬೆಂಗಳೂರು, ಮೇ 28: ಇಂಗ್ಲೆಂಡ್‌ನ ಪ್ರತಿಷ್ಠಿತ ರಸೆಲ್ ಗ್ರೂಪ್‌ನ 'ಲಿವರ್‌ಪೂಲ್ ವಿಶ್ವವಿದ್ಯಾಲಯ'ವು (Liverpool University) ಸಾಗರೋತ್ತರ ಕ್ಯಾಂಪಸ್ ಆರಂಭಿಸುವುದಾಗಿ ಘೋಷಿಸಿತ್ತು. ಇದು ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ತನ್ನ ಮೊದಲ ಕ್ಯಾಂಪಸ್ ಶುರು ಮಾಡುವುದಾಗಿ ಮಂಗಳವಾರ ನಗರದಲ್ಲಿ ಘೋಷಿಸಿದೆ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿನ ಇಂಗ್ಲೆಂಡ್ ಹಾಗೂ ಭಾರತ ಬಾಂಧವ್ಯದ ಹೊಸ ಅಧ್ಯಾಯಕ್ಕೆ ಮುನ್ನುಡಿ ಇದಾಗಿದ್ದು, ಈ ಕ್ಷಣಕ್ಕೆ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ಸರ್ಕಾರದ ಹಿರಿಯ ಸಚಿವರು, ವಿಶ್ವವಿದ್ಯಾಲಯದ ಉನ್ನತ ಅಧಿಕಾರಿಗಳು ಸಾಕ್ಷಿಯಾದರು.
ಬೆಂಗಳೂರಿನಲ್ಲಿ ಯುಕೆ ಮೂಲಕ ವಿಶ್ವವಿದ್ಯಾಲಯದ ಮೊದಲ ಕ್ಯಾಂಪಸ್ 2026ರ ವೇಳೆಗೆ ಕಾರ್ಯನಿ ರ್ವಹಿಸಲಿದೆ. ಆ ವರ್ಷದಿಂದ ಶೈಕ್ಷಣಿಕ ಕಾರ್ಯ ಚಟುವಟಿಕೆಗಳು ಶುರುವಾಗಲಿವೆ. ಇಂಗ್ಲೆಂಡ್ ವಿವಿಯ ಈ ನಿರ್ಧಾರ ಸ್ವಾಗತಿಸಿದ ರಾಜ್ಯದ ಹಿರಿಯ ಸಚಿವರು ಕ್ಯಾಂಪಸ್ ಆರಂಭಿಸಲು ಬೇಕಾದ ಅಗತ್ಯ ಸೌಕರ್ಯಗಳನ್ನು ತಮ್ಮ ಇಲಾಖೆ ವತಿಯಿಂದ ನೀಡುವುದಾಗಿ ತಿಳಿಸಿದರು.

ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಬೆಂಬಲ ಪ್ರಕಟಿಸಿದರು.
ಬೆಂಗಳೂರಿನಲ್ಲಿ ಅಸ್ತಿತ್ವಕ್ಕೆ ಬರಲಿರುವ ಈ ಹೊಸ ಲಿವರ್‌ಪೂಲ್ ವಿಶ್ವವಿದ್ಯಾಲಯ ಕ್ಯಾಂಪಸ್, ಉನ್ನತ ಶಿಕ್ಷಣದ ವಿಶ್ವ ದರ್ಜೆಯ ಕಲಿಕಾ ಕೇಂದ್ರವಾಗಿ ಉದ್ಯಾನ ನಗರದ ಖ್ಯಾತಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ. ಲಿವರ್‌ಪೂಲ್ ವಿಶ್ವವಿದ್ಯಾಲಯದ ಸಂಶೋಧನೆಗೆ ಒತ್ತು ನೀಡುವ ಸಂಸ್ಕೃತಿಗೆ ಮತ್ತು ಅಂತಾರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಶೈಕ್ಷಣಿಕ ಮಾನದಂಡಗಳಿಗೆ ನೆಲೆಯಾಗಿರಲಿದೆ.
ಭಾರತ ಮತ್ತು ಇಂಗ್ಲೆಂಡ್‌ನ ಪ್ರವರ್ಧಮಾನಕ್ಕೆ ಬರುತ್ತಿರುವ ಕೈಗಾರಿಕೆಗಳ ಅಗತ್ಯಗಳಿಗೆ ವಿದ್ಯಾರ್ಥಿಗಳು ಮತ್ತು ಸಂಶೋಧಕರನ್ನು ಸನ್ನದ್ಧಗೊಳಿಸುವ ಕರ್ನಾಟಕದ ಕ್ರಿಯಾಶೀಲ ಹಾಗೂ ನಾವೀನ್ಯತೆಯ ಶೈಕ್ಷಣಿಕ ಪರಿಸರದ ಜೊತೆಗೆ ಪಾಲುದಾರಿಕೆ ಬಲಗೊಳ್ಳಲಿದೆ. ಈ ನಿಟ್ಟಿನಲ್ಲಿ ವಿವಿ ವೇಗವರ್ಧಕವಾಗಿಯೂ ಕಾರ್ಯ ನಿರ್ವಹಿಸಲಿದೆ.

ವಿಶ್ವವಿದ್ಯಾಲಯದ ಕೋರ್ಸ್‌ಗಳು ಯಾವುವು?
ಆರಂಭಿಕ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಬಿಸಿನೆಸ್ ಮ್ಯಾನೇಜ್‌ಮೆಂಟ್, ಲೆಕ್ಕಪತ್ರ ನಿರ್ವಹಣೆ ಮತ್ತು ಹಣಕಾಸು, ಕಂಪ್ಯೂಟರ್ ವಿಜ್ಞಾನ, ಬಯೊಮೆಡಿಕಲ್ ಸೈನ್ಸ್, ಮತ್ತು ಗೇಮ್ ಡಿಸೈನ್ ಸೇರಿವೆ. ತದನಂತರದ ಹಂತಗಳಲ್ಲಿ ವೈವಿಧ್ಯಮಯ ಬೋಧನಾ ವಿಷಯಗಳನ್ನು ಸೇರ್ಪಡೆ ಮಾಡುವ ನಿರೀಕ್ಷೆ ಇದೆ.
ವಿಶ್ವವಿದ್ಯಾಲಯದ ಪ್ರವೇಶ ಸ್ವಾಗತಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, "ಕರ್ನಾಟಕವು ಯಾವಾಗಲೂ ಶಿಕ್ಷಣ ಮತ್ತು ನಾವೀನ್ಯತೆಯಲ್ಲಿ ಮುಂಚೂಣಿಯಲ್ಲಿದೆ. ಲಿವರ್‌ಪೂಲ್ ವಿಶ್ವವಿದ್ಯಾಲಯವು ಹೊಸ ವಿದೇಶಿ ಕ್ಯಾಂಪಸ್ ಆರಂಭಿಸುವ ನಿರ್ಧಾರವು ಜಾಗತಿಕ ಜ್ಞಾನ ತಾಣವಾಗಿ ರಾಜ್ಯದ ಸ್ಥಾನಮಾನವನ್ನು ಬಲಪಡಿಸಲಿದೆ. ಈ ಶೈಕ್ಷಣಿಕ ಪಾಲುದಾರಿಕೆಯು ಯಶಸ್ವಿಗೊಳಿಸಲು ಅಗತ್ಯವಾಗಿರುವ ಎಲ್ಲ ಬಗೆಯ ಸಹಕಾರವನ್ನು ನಮ್ಮ ಸರ್ಕಾರ ನೀಡಲಿದೆ ಎಂದು ತಿಳಿಸಿದರು.
ಶೈಕ್ಷಣಿಕ ಕ್ಷೇತ್ರದ ಜತೆ ಇತರ ಕ್ಷೇತ್ರಕ್ಕೂ ಪೂರಕ
ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು, ಲಿವರ್‌ಪೂಲ್ ವಿಶ್ವವಿದ್ಯಾಲಯವು ತನ್ನ ಮೊದಲ ಸಾಗರೋತ್ತರ ಕ್ಯಾಂಪಸ್‌ಗಾಗಿ ಕರ್ನಾಟಕವನ್ನು ಆಯ್ಕೆ ಮಾಡಿರುವುದು ರಾಜ್ಯವು ಜಾಗತಿಕ ಮಟ್ಟದ ಉದ್ಯಮ ವಲಯ ಮತ್ತು ಬುದ್ಧಿಶಕ್ತಿಯ ಕೇಂದ್ರವಾಗಿದೆ ಎಂಬುದನ್ನು ಸಶಕ್ತವಾಗಿ ಪ್ರತಿಬಿಂಬಿಸುತ್ತದೆ. ಈ ಸಹಯೋಗವು ಶೈಕ್ಷಣಿಕ ಕ್ಷೇತ್ರವಲ್ಲದೆ ಎಲೆಕ್ಟ್ರಾನಿಕ್ಸ್, ಏರೋಸ್ಪೇಸ್ ಮತ್ತು ಜೈವಿಕ ತಂತ್ರಜ್ಞಾನದಂತಹ ವಲಯಗಳ ನಡುವಣ ಗಾಢ ಸಂಬಂಧಗಳನ್ನು ಜಂಟಿ ಸಂಶೋಧನೆ, ಅಲ್ಪಾವಧಿ ತರಬೇತಿ ಮತ್ತು ಪಠ್ಯಕ್ರಮ ವಿನ್ಯಾಸದ ಮೂಲಕ ಹೆಚ್ಚಿಸಲಿದೆ.
ಇನ್ನೂ ವಿಶ್ವ ದರ್ಜೆಯ ಮಾರ್ಗದರ್ಶನ ಮತ್ತು ನಾವೀನ್ಯತೆಯ ವೇದಿಕೆಗಳು ಸುಲಭವಾಗಿ ಲಭ್ಯವಾಗುವ ಮೂಲಕ ಎಂಎಸ್‌ಎಂಇ-ಗಳು ಮತ್ತು ನವೋದ್ಯಮಗಳಿಗೆ ಅಪಾರ ಪ್ರಯೋಜನಗಳನ್ನು ಒದಗಿಸಲಿದೆ. ನಮ್ಮ ಮುಂಬರುವ ನಾವೀನ್ಯತೆ ಕೇಂದ್ರವಾಗಿರುವ 'ಕ್ವಿನ್ ಸಿಟಿ' (KWIN City) ಯಲ್ಲಿನ ಅವಕಾಶಗಳನ್ನು ಬಳಸಿಕೊಳ್ಳಲು ನಾನು ಲಿವರ್‌ಪೂಲ್ ವಿಶ್ವವಿದ್ಯಾಲಯಕ್ಕೆ ಆಹ್ವಾನ ನೀಡುತ್ತೇನೆ. ಇದೊಂದು ಕೇವಲ ಮೈಲಿಗಲ್ಲು ಆಗಿರದೆ, ಭವಿಷ್ಯದ ಕೈಗಾರಿಕೆಗಳು ಮತ್ತು ಪ್ರತಿಭೆಗಳನ್ನು ಪರಸ್ಪರ ಸಹಕಾರದಿಂದ ಸೃಷ್ಟಿಸುವ ಕಾರ್ಯತಂತ್ರದ ವಿಶಿಷ್ಟ ಮೈತ್ರಿಯಾಗಿದೆ ಎಂದರು.
ಬೆಂಗಳೂರಿನಲ್ಲಿರುವ ಬ್ರಿಟನ್ನಿನ ಡೆಪ್ಯುಟಿ ಹೈಕಮೀಷನರ್ ಚಂದ್ರು ಅಯ್ಯರ್ ಅವರು, ಎರಡೂ ದೇಶಗಳಿಗೆ ಲಾಭದಾಯಕ ಆಗಿರುವ ನಮ್ಮ ಪಾಲುದಾರಿಕೆಯನ್ನು ಇನ್ನಷ್ಟು ಗಾಢಗೊಳಿಸಲು ಇಂಗ್ಲೆಂಡ್ ಮತ್ತು ಭಾರತ ಬದ್ಧತೆ ಹೊಂದಿವೆ. ಈ ಪಾಲುದಾರಿಕೆ ವಿಸ್ತರಣೆಯು ಕೃತಕ ಬುದ್ಧಿಮತ್ತೆ (ಎಐ), ಸೆಮಿಕಂಡಕ್ಟರ್, ಉನ್ನತ ಶಿಕ್ಷಣ ಕ್ಯಾಂಪಸ್ ಮತ್ತು ಪರಿಸರ ಸ್ನೇಹಿ ಇಂಧನ ಕ್ಷೇತ್ರಗಳಲ್ಲಿ ಇನ್ನಷ್ಟು ಸಹಯೋಗಕ್ಕೆ ಹಾದಿ ಮಾಡಿಕೊಡಲಿದೆ. ಇಂಗ್ಲೆಂಟ್ ವಿಶ್ವವಿದ್ಯಾಲಯವು ಬೆಂಗಳೂರಿನಲ್ಲಿ ತನ್ನ ಕ್ಯಾಂಪಸ್ ಆರಂಭಿಸುತ್ತಿರುವುದು ಹರ್ಷ ತಂದಿದೆ ಎಂದು ಹೇಳಿದ್ದಾರೆ.
ಸುಮಾರು ಒಂದು ವರ್ಷದ ಹಿಂದೆಯೇ (2024) ಈ ಘೋಷಣೆ ಆಗಿತ್ತು. ಇದು ತಂತ್ರಜ್ಞಾನ ಸುರಕ್ಷತೆ ಉಪಕ್ರಮವು, ದೂರಸಂಪರ್ಕ ನಾವೀನ್ಯತೆಗೆ ನೆರವಾಗಲಿದೆ. ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನಗಳಲ್ಲಿ ಬಂಡವಾಳ ಹೂಡಿಕೆಗೆ ಅವಕಾಶವನ್ನೂ ಒದಗಿಸುತ್ತಿದೆ. ಇತ್ತೀಚೆಗೆ ಪ್ರಕಟಿಸಲಾದ ಇಂಗ್ಲೆಂಡ್ ಹಾಗೂ ಭಾರತ ನಡುವಣ ಮುಕ್ತ ವ್ಯಾಪಾರ ಒಪ್ಪಂದವು (ಎಫ್‌ಟಿಎ) ಉಭಯ ದೇಶಗಳ ಆರ್ಥಿಕ ಬೆಳವಣಿಗೆ, ಜೀವನ ಮಟ್ಟ ಸುಧಾರಣೆ ಮತ್ತು ಜನರ ಆದಾಯ ಹೆಚ್ಚಿಸಲು ಅನುಕೂಲಕರವಾಗಿದೆ ಎಂದರು.

ವಿಪ್ರೊ ಜೊತೆಗೆ ಒಪ್ಪಂದಕ್ಕೆ ಸಹಿ
ಉದ್ಯಮ-ಶೈಕ್ಷಣಿಕ ಪಾಲುದಾರಿಕೆ ಕಾರ್ಯಗತಗೊಳಿಸುವ ತನ್ನ ಬದ್ಧತೆಗೆ ಅನುಗುಣವಾಗಿ, ಲಿವರ್‌ಪೂಲ್ ವಿಶ್ವವಿದ್ಯಾನಿಲಯವು, ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಐಟಿ ದೈತ್ಯ ಸಂಸ್ಥೆ ವಿಪ್ರೊ ಜೊತೆಗೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿತು. ಸಂಶೋಧನೆ ಹಾಗೂ ನಾವೀನ್ಯತೆ ಮುನ್ನಡೆಸಲು ಮತ್ತು ಕೌಶಲ ಅಭಿವೃದ್ಧಿಯ ಮೂಲಕ ಭವಿಷ್ಯಕ್ಕೆ ಸನ್ನದ್ಧರಾಗಿರುವ ಪ್ರತಿಭಾನ್ವಿತರನ್ನು ಬೆಳೆಸಲು ಈ ಪಾಲುದಾರಿಕೆಗೆ ಮುಂದಾಗಿದೆ.
ಲಿವರ್‌ಪೂಲ್ ವಿಶ್ವವಿದ್ಯಾಲಯದ ಕುಲಪತಿ ಪ್ರೊಫೆಸರ್ ಟಿಮ್ ಜೋನ್ಸ್ ಅವರು ಮಾತನಾಡಿ, ಬೆಂಗಳೂರಿನಲ್ಲಿ ವಿಶ್ವ ದರ್ಜೆಯ ಕ್ಯಾಂಪಸ್ ಆರಂಭಿಸುವ ಮೂಲಕ ಭಾರತದ ಜೊತೆಗಿನ ನಮ್ಮ ದೀರ್ಘಕಾಲದ ಸಂಬಂಧದಲ್ಲಿ ಈ ಮಹತ್ವದ ಹೆಜ್ಜೆ ಇಡಲು ನಾವು ಹೆಮ್ಮೆಪಡುತ್ತೇವೆ. ಜ್ಞಾನ ಮತ್ತು ತಂತ್ರಜ್ಞಾನದ ಶಕ್ತಿ ಕೇಂದ್ರವಾಗಿ ಗಮನ ಸೆಳೆದಿರುವ ಕರ್ನಾಟಕದ ಖ್ಯಾತಿಯು ಲಿವರ್‌ಪೂಲ್ ವಿಶ್ವವಿದ್ಯಾಲಯದ ಮೊದಲ ಜಾಗತಿಕ ಕ್ಯಾಂಪಸ್‌ಗೆ ಸೂಕ್ತ ನೆಲೆಯಾಗಿದೆ. ಸ್ಥಳೀಯ ಸಮುದಾಯಗಳು, ಪ್ರತಿಷ್ಠಿತ ಸಂಸ್ಥೆಗಳು ಮತ್ತು ಕೈಗಾರಿಕೆಗಳ ಜೊತೆಗಿನ ಸಹಭಾಗಿತ್ವದಲ್ಲಿ ಪರಿವರ್ತನೀಯ ಶಿಕ್ಷಣ ಮತ್ತು ಸಂಶೋಧನೆ ನೀಡಲು ನಾವು ಬದ್ಧರಾಗಿದ್ದೇವೆ" ಎಂದು ಹೇಳಿದರು.
ಕರ್ನಾಟಕದೊಂದಿಗಿನ ವಿವಿಯ ಇತರ ಪಾಲುದಾರಿಕೆ
ಇಂಗ್ಲೆಂಡ್ ವಿವಿಯು ಈಗಾಗಲೇ ಕರ್ನಾಟಕದಲ್ಲಿ ಅನೇಕ ಸಹಕಾರಗಳನ್ನು ಪಡೆದಿದೆ. ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಜೊತೆಗಿನ 20 ವರ್ಷಗಳ ಸಂಶೋಧನಾ ಪಾಲುದಾರಿಕೆಯೂ ಇದರಲ್ಲಿ ಸೇರಿದೆ. ಇದುವರೆಗೆ 2,00,000 ಕ್ಕೂ ಹೆಚ್ಚು ಜೀವಗಳನ್ನು ಉಳಿಸುವಲ್ಲಿ ಈ ಪಾಲುದಾರಿಕೆಯು ಮಹತ್ವದ ಪಾತ್ರ ನಿರ್ವಹಿಸಿದೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಹಿಂದೂಸ್ತಾನ್ ಯೂನಿಲಿವರ್‌ನಂತಹ ಕಾರ್ಪೊರೇಟ್ ಪಾಲುದಾರರ ಜೊತೆಗೆ ನಡೆಯುತ್ತಿರುವ ಕಾರ್ಯಕ್ರಮಗಳು ರಾಜ್ಯಕ್ಕೆ ಸಂಬಂಧಪಟ್ಟ ವಿಶ್ವವಿದ್ಯಾಲಯದ ದೀರ್ಘಕಾಲದ ಬದ್ಧತೆಯನ್ನು ಮತ್ತಷ್ಟು ಎತ್ತಿ ತೋರಿಸುತ್ತವೆ.
ಏನೆಲ್ಲ ಪ್ರಯೋಜನಗಳು ?
ಕರ್ನಾಟಕಕ್ಕೆ ಮಾತ್ರವಲ್ಲದೇ ದೇಶಕ್ಕೂ ಸಹ ಈ ಕ್ಯಾಂಪಸ್ ಆರಂಭದಿಂದ ಸಾಕಷ್ಟು ಪ್ರಯೋಜನೆಗಳು ಇವೆ. 2026ರ ವೇಳೆಗೆ ಯುನಿವರ್ಸಿಟಿ ಆಫ್ ಲಿವರ್‌ಪೂಲ್‌ನ ಬೆಂಗಳೂರು ಕ್ಯಾಂಪಸ್ ಕಾರ್ಯಾರಂಭ ಮಾಡಲಿದೆ. ಜಾಗತಿಕ ಮಾನ್ಯತೆ ಪಡೆದಿರುವ ಇಂಗ್ಲೆಂಡ್‌ನ ಶಿಕ್ಷಣ ಸೌಲಭ್ಯವನ್ನು ಭಾರತದ ವಿದ್ಯಾರ್ಥಿಗಳಿಗೆ ಇದು ಸ್ಥಳೀಯವಾಗಿಯೇ ಒದಗಿಸಲಿದೆ. ಶೈಕ್ಷಣಿಕ ಸಂಸ್ಥೆ ಹಾಗೂ ಕೈಗಾರಿಕಾ ವಲಯದ ಪಾಲುದಾರಿಕೆಯು ಬಲಪಡಲಿದೆ. ಕಲಿಕೆ ಮತ್ತು ನಾವೀನ್ಯತೆ ಕ್ಷೇತ್ರಗಳಲ್ಲಿ ಅಂತರರಾಷ್ಟ್ರೀಯ ಕೇಂದ್ರವಾಗಿ ಬೆಳೆಯುವ ಕರ್ನಾಟಕದ ಮಹತ್ವಾಕಾಂಕ್ಷೆಗೆ ಅಗತ್ಯ ಕೊಡುಗೆ ನೀಡಲಿದೆ.
-
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ












Click it and Unblock the Notifications