ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಊಬರ್ ಪ್ರಯಾಣ ದರ ಶೇ.10 ಏರಿಕೆ, ಓಲಾದಲ್ಲೂ ಹೆಚ್ಚಳ ಆಗುತ್ತಾ?

|
Google Oneindia Kannada News

ಬೆಂಗಳೂರು, ಏಪ್ರಿಲ್ 20: ಬೆಂಗಳೂರಿನಲ್ಲಿ ಕ್ಯಾಬ್ ರೈಡ್ ದುಬಾರಿಯಾಗಲಿದೆ. ಏರುತ್ತಿರುವ ಡೀಸೆಲ್ ಬೆಲೆಗಳನ್ನು ನಿಭಾಯಿಸಲು ತನ್ನ ಚಾಲಕ-ಪಾಲುದಾರರಿಗೆ ಸಹಾಯ ಮಾಡಲು ಟ್ರಿಪ್ ದರವನ್ನು ಹೆಚ್ಚಿಸಲಾಗಿದೆ ಎಂದು ಊಬರ್ ಮಂಗಳವಾರ ಹೇಳಿದೆ.

ಊಬರ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಕೇಂದ್ರ ಕಾರ್ಯಾಚರಣೆಯ ಮುಖ್ಯಸ್ಥ ನಿತೀಶ್ ಭೂಷಣ್ ಹೇಳಿಕೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. "ನಾವು ಚಾಲಕರಿಂದ ಪ್ರತಿಕ್ರಿಯೆಯನ್ನು ಕೇಳುತ್ತೇವೆ ಮತ್ತು ಪ್ರಸ್ತುತ ಇಂಧನ ಬೆಲೆಗಳ ಏರಿಕೆಯು ಕಳವಳವನ್ನು ಉಂಟುಮಾಡುತ್ತಿದೆ ಎಂದು ಅರ್ಥಮಾಡಿಕೊಂಡಿದ್ದೇವೆ," ಎಂದಿದ್ದಾರೆ.

ಜಿಎಸ್‌ಟಿ ನಿಯಮ ಬದಲಾವಣೆ: ಓಲಾ, ಊಬರ್‌ ಪ್ರಯಾಣ ದುಬಾರಿ!ಜಿಎಸ್‌ಟಿ ನಿಯಮ ಬದಲಾವಣೆ: ಓಲಾ, ಊಬರ್‌ ಪ್ರಯಾಣ ದುಬಾರಿ!

"ಪ್ರಸ್ತುತ ಇಂಧನ ಬೆಲೆ ಏರಿಕೆಯಿಂದಾಗಿ ಚಾಲಕರಿಗೆ ತೊಂದರೆ ಉಂಟಾಗುತ್ತಿದೆ. ಚಾಲಕರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ನಾವು ಬೆಂಗಳೂರಿನಲ್ಲಿ ಊಬರ್ ಪ್ರಯಾಣ ದರವನ್ನು ಏರಿಕೆ ಮಾಡಿದ್ದೇವೆ. ಬೆಂಗಳೂರಿನಲ್ಲಿ ದರವನ್ನು ಶೇಕಡ 10ರಷ್ಟು ಹೆಚ್ಚಿಸಿದ್ದೇವೆ," ಎಂದು ಮಾಹಿತಿ ನೀಡಿದ್ದಾರೆ.

Uber hikes trip fare by 10% in Bengaluru, Ola may follow

"ನಾವು ಇಂಧನ ಬೆಲೆ ಏರಿಳಿತವನ್ನು ಗಮನಹರಿಸುತ್ತಿರುತ್ತೇವೆ.ಅಗತ್ಯವಿರುವಂತೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ," ಎಂದು ಕೂಡಾ ಊಬರ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಕೇಂದ್ರ ಕಾರ್ಯಾಚರಣೆಯ ಮುಖ್ಯಸ್ಥ ನಿತೀಶ್ ಭೂಷಣ್ ತಿಳಿಸಿದ್ದಾರೆ.

ಓಲಾ ಪ್ರಯಾಣ ದರ ಏರಿಕೆಯಾಗುತ್ತಾ?

ಈ ನಡುವೆ ಓಲಾ ಕೂಡಾ ಪ್ರಯಾಣ ದರವನ್ನು ಪರಿಷ್ಕರಣೆ ಮಾಡಲು ನಿರ್ಧಾರ ಮಾಡಿಕೊಳ್ಳಲು ಮುಂದಾಗಿದೆ ಎಂದು ಮೂಲಗಳು ತಿಳಿಸಿದೆ. ಆದರೆ ಈ ಬಗ್ಗೆ ಓಲಾ ಈವರೆಗೂ ಯಾವುದೇ ಪ್ರತಿಕ್ರಿಯೆ, ಹೇಳಿಕೆಯನ್ನು ನೀಡಿಲ್ಲ.

ರೇಡ್ ಕ್ಯಾನ್ಸಲ್ ಮಾಡುವ ಚಾಲಕರು; ಊಬರ್, ಓಲಾದಂಥ ಆಪ್‌ಗಳಲ್ಲಿ ಜನ ಎದುರಿಸುವ ಕಿರಿಕಿರಿ ಇವುರೇಡ್ ಕ್ಯಾನ್ಸಲ್ ಮಾಡುವ ಚಾಲಕರು; ಊಬರ್, ಓಲಾದಂಥ ಆಪ್‌ಗಳಲ್ಲಿ ಜನ ಎದುರಿಸುವ ಕಿರಿಕಿರಿ ಇವು

ದರ ಹೆಚ್ಚಳವನ್ನು ಸ್ವಾಗತಿಸಿದ ಚಾಲಕರು

ಕೆಲವು ಚಾಲಕರು ಈ ಕ್ರಮವನ್ನು ಸ್ವಾಗತಿಸಿದರು. "ದರಗಳನ್ನು ಪರಿಷ್ಕರಿಸುವುದು ಒಳ್ಳೆಯದು, ಆದರೆ ಲಾಭವನ್ನು ಚಾಲಕರಿಗೆ ವರ್ಗಾಯಿಸಬೇಕು. ಸಂಗ್ರಾಹಕರು ವಿಧಿಸುವ ಕಮಿಷನ್‌ಗೆ ಕಡಿವಾಣ ಹಾಕಬೇಕು. ಈಗ ನಮ್ಮ ಸಂಪಾದನೆ ಇಂಧನ ತುಂಬುವುದಕ್ಕೂ ಸಾಕಾಗುತ್ತಿಲ್ಲ," ಎಂದು ಕೋರಮಂಗಲದ ಕ್ಯಾಬ್ ಚಾಲಕ ಕೆ ಮಂಜುನಾಥ್ ಹೇಳಿದರು.

Uber hikes trip fare by 10% in Bengaluru, Ola may follow

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರಯಾಣಿಕರು ಹಲವಾರು ದೂರುಗಳ ಹೊರತಾಗಿಯೂ ಕಾರಿನಲ್ಲಿ ಎಸಿ ಆನ್ ಮಾಡುವುದಿಲ್ಲ. ವಿಶೇಷವಾಗಿ ಇಂಧನ ಬೆಲೆಗಳ ಏರಿಕೆಯ ನಂತರ ಎಸಿ ಆನ್‌ ಮಾಡಲ್ಲ ಎಂದು ಪ್ರಯಾಣಿಕರು ದೂರಿದ್ದಾರೆ. ಮಂಗಳವಾರ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 111.09 ರೂ., ಡೀಸೆಲ್ ದರ ಲೀಟರ್‌ಗೆ 94.79 ರೂ. ಆಗಿದೆ.

ಜಿಎಸ್‌ಟಿ ನಿಯಮ ಬದಲಾವಣೆ

ಜನವರಿ 1 ರಿಂದ ಜಾರಿಗೆ ಬರುವಂತೆ ಜಿಎಸ್‌ಟಿ ನಿಯಮ ಬದಲಾವಣೆ ಆಗಿದೆ. ಈ ನಿಯಮದ ಪ್ರಕಾರ ಓಲಾ ಮತ್ತು ಊಬರ್‌ ದ್ವಿಚಕ್ರ ಅಥವಾ ಕಾರಿನಲ್ಲಿ ಪ್ರಯಾಣಕ್ಕೆ ಶೇಕಡ 5 ಪ್ರತಿಶತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನ್ನು ವಿಧಿಸಬೇಕಾಗಿದೆ.

Recommended Video

ಹಿಂದೂ ಆಕ್ಟಿವಿಸ್ಟ್ ಸಾದ್ವಿ ರಿತುಂಬರ್ ಏನ್ ಹೇಳಿದಾರೆ ಗೊತ್ತಾ!! | Oneindia Kannada

English summary
Cab rides in Bengaluru are set to get expensive. Uber on Tuesday said it has hiked trip fares to help its driver-partners deal with soaring diesel prices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X