ಬೆಂಗಳೂರು: ಕೇವಲ 12,1 ಕಿ.ಮೀ. ಪ್ರಯಾಣಕ್ಕೆ ₹1,03,11,055 ಬಿಲ್‌.! ಬೆಚ್ಚಿಬಿದ್ದ ದಂಪತಿ- ಊಬರ್‌ ಸಂಸ್ಥೆ ಸ್ಪಷ್ಟನೆ ಏನು?

ಬೆಂಗಳೂರು, ಏಪ್ರಿಲ್‌, 01: ಓಲಾ, ಊಬರ್‌ ಕಡಿಮೆ ದರದಲ್ಲಿ ಪ್ರಯಾಣಿಕರನ್ನು ತಾವು ಬುಕ್‌ ಮಾಡಿದ ಸ್ಥಳಕ್ಕೆ ತಲುಪಿಸಲು ಪ್ರಯತ್ನಿಸುತ್ತಿವೆ. ಇದರ ನಡುವೆಯೂ ಕಡಿಮೆ ದೂರದ ಪ್ರಯಾಣಕ್ಕೆ ಹೆಚ್ಚು ಶುಲ್ಕ ವಿಧಿಸುತ್ತಿರುವ ಪ್ರಕರಣಗಳು ಇತ್ತೀಚಿನ ದಿನಗಳಗಳಲ್ಲಿ ಹೆಚ್ಚಾಗುತ್ತಿವೆ. ಅದರಲ್ಲೂ ಬೃಹತ್‌ ನಗರಗಳಲ್ಲಿ ಇಂತಹ ಪ್ರಕರಣಗಳು ನಡೆಯುತ್ತಿರುವುದು ಬೆಳಕಿಗೆ ಬಂದಿವೆ. ಅಂತಹದ್ದೇ ಒಂದು ಘಟನೆ ಬೆಂಗಳೂರಿನಲ್ಲಿ ಮತ್ತೆ ನಡೆದಿದೆ.

ಉಬರ್‌ನಲ್ಲಿ ಪ್ರಯಾಣ ದರವನ್ನು ಹೆಚ್ಚು ವಿಧಿಸಿರುವ ಘಟನೆ ಬೆಳಕಿಗೆ ಬಂದಿದೆ. ಹೈದರಾಬಾದ್ ಮೂಲದ ಪ್ರಯಾಣಿಕರೊಬ್ಬರು ಬೆಂಗಳೂರಿನಲ್ಲಿ ಆಟೋ ರೈಡ್‌ಗಾಗಿ ಉಬರ್‌ನಿಂದ 1 ಕೋಟಿ ರೂಪಾಯಿ ವಿಧಿಸಲಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಇನ್ನು ಇನ್‌ಸ್ಟಾಗ್ರಾಮ್ ವೀಡಿಯೊದಲ್ಲಿ, ಪ್ರಯಾಣಿಕ ಪ್ರಯಾಣ ದರ ಮೊದಲಿಗೆ ₹207 ಮೊತ್ತ ಇತ್ತು, ಬಳಿಕ ಸ್ಥಳವನ್ನು ತಲುಪಿದಾಹ ₹1 ಕೋಟಿ ಶುಲ್ಕ ವಿಧಿಸಲಾಗಿದೆ ಎಂದು ಆತಂಕ ವ್ಯಕ್ಯಪಡಿಸಿದ್ದಾರೆ.

Uber billed 1 03 11 055 from Bengaluru s Tin Factory to Koramangala

ಶ್ರೀರಾಜ್ ನೀಲೇಶ್ ಮತ್ತು ಅವರ ಪತ್ನಿ ಮಾನಸ ಅವರು ಕೆಆರ್ ಪುರಂನ ಟಿನ್ ಫ್ಯಾಕ್ಟರಿಯಿಂದ ಕೋರಮಂಗಲಕ್ಕೆ ಹೋಗಲು ಅಗ್ರಿಗೇಟರ್ ಅಪ್ಲಿಕೇಶನ್ ಬಳಸಿ ಆಟೋರಿಕ್ಷಾವನ್ನು ಬುಕ್ ಮಾಡಿದ್ದೇವೆ ಎಂದು ಹೇಳಿದರು. ಅಪ್ಲಿಕೇಶನ್‌ನಲ್ಲಿ ಆರಂಭದಲ್ಲಿ ₹207 ಮೊತ್ತವನ್ನು ತೋರಿಸಿದೆ. ಆದರೆ, ತಮ್ಮ ಸ್ಥಳವನ್ನು ತಲುಪಿದಾಗ ಹಣ ಪಾವತಿಸಲು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದ್ದಾರೆ. ಆಗ 1,03,11,055 ರೂಪಾಯಿಗಳ ಭಾರಿ ಮೊತ್ತದ ಬಿಲ್ ಕಂಡು ಅವರು ಆಘಾತಕ್ಕೊಳಗಾಗಿದ್ದಾರೆ. ಅಲ್ಲದೆ ಆಟೋ ಡ್ರೈವರ್ ಕೂಡ ಇದನ್ನು ನೋಡಿ ಬೆಚ್ಚಿಬಿದ್ದ ಘಟನೆ ನಡೆದಿದೆ.

"ಬಳಿಕ ಇದು ಯಾವ ರೀತಿಯ ತಾಂತ್ರಿಕ ದೋಷ? ಕಸ್ಟಮರ್ ಕೇರ್ ಕೂಡ ಸ್ಪಂದಿಸಿಲ್ಲ. ಅದಕ್ಕಾಗಿ ಈ ವಿಡಿಯೋವನ್ನು ಸಾಕ್ಷಿಯಾಗಿ ಹಾಕುತ್ತಿದ್ದೇನೆ," ಎಂದು ವಿಡಿಯೋದಲ್ಲಿ ಪ್ರಯಾಣಿಕ ಹೇಳಿದ್ದಾರೆ. ಇನ್ನೂ ವೈರಲ್‌ ಈ ವಿಡಿಯೋಗೆ ಉಬರ್‌ನಿಂದ ಯಾವುದೇ ಪ್ರತಿಕ್ರಿಯೆಗಳು ಬಂದಿಲ್ಲ. ಈ ಸಮಸ್ಯೆಯನ್ನು ಬೇಗೆ ಪರಿಹರಿಸಬೇಕಾಗಿದೆ," ಎಂದು ಕೇಳಿಕೊಂಡಿದ್ದಾರೆ.

ನೋಯ್ಡಾದ ದೀಪಕ್‌ಗೆ ವಿಚಿತ್ರ ಅನುಭವ: ಇನ್ನು ನೋಯ್ಡಾದಲ್ಲಿ ಇದೇ ರೀತಿಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಪ್ರಯಾಣಿಕನಿಕೆ 10 ನಿಮಿಷಗಳ ಉಬರ್‌ನ ಆಟೋ ಸವಾರಿಗೆ ₹7 ಕೋಟಿ ವಿಧಿಸಲಾಗಿತ್ತು. ಈ ಆ್ಯಪ್‌ಗಳು ಕಡಿಮೆ ಶುಲ್ಕ ನಿಗದಿಪಡಿಸುವ ಮೂಲಕ ಬಳಕೆದಾರರ ವಿಶ್ವಾಸವನ್ನು ಪಡೆಯಲು ಪ್ರಯತ್ನಿಸುತ್ತಿವೆ. ಆದರೆ ನೋಯ್ಡಾದ ದೀಪಕ್ ತೆಂಗುರಿಯಾಗೆ ಮಾತ್ರ ವಿಚಿತ್ರ ಅನುಭವ ಆಗಿದ್ದು, 62 ರೂಪಾಯಿ ಆಗುವಲ್ಲಿ ಪ್ರಯಾಣ ದರ 7,66, 83,762 ಕೋಟಿ ರೂಪಾಯಿ ಎಂದು ತೋರಿಸಿದೆ.

ಅಷ್ಟೇ ಅಲ್ಲದೇ ಕಾಯುವಿಕೆ ಸಮಯದ ದರ 5,99,09189 ರೂಪಾಯಿ ವಿಧಿಸಲಾಗಿದೆ. ಬಳಿಕ ಇದನ್ನು ಗಮನಿಸಿದ ದೀಪಕ್‌ ಬೆಚ್ಚಿಬಿದ್ದಿದ್ದಾರೆ. ಇನ್ನು ದೀಪಕ್​ ಗೆಳೆಯ ಆಶಿಶ್‌ಗೆ ಈ ವಿಷಯವನ್ನು ತಿಳಿಸಿದ್ದಾರೆ. ಬಳಿಕ ಆಶಿಶ್ ಇದನ್ನು ಕೂಡಲೇ ಸಮಾಜಿಕ ಜಾಲತಾಣದ ವೇದಿಕೆ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ.

Uber India Customer Supportನ ಅಧಿಕೃತ ಟ್ವೀಟ್‌ನಲ್ಲಿ ಈ ಬಗ್ಗೆ ಕ್ಷಮೆಯಾಚಿಸಿದೆ ಮತ್ತು ತಾವು ಈ ವಿಷಯವನ್ನು ಪರಿಶೀಲಿಸುತ್ತಿದ್ದೇವೆ ಎಂದು ಹೇಳಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+